BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ
  • ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ
  • ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ
  • ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ
  • ನೀನಾಸಂ ಮೂಲದ ಸದುಭಿರುಚಿ ನಾಟಕಗಳು
  • ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯ
  • ಸೋಶಿಯಲ್ ಮೀಡಿಯಾ ಅಬ್ಬರದ ನಡುವೆ ಜೀವಂತವಾಗಿರುವ ದೇಸಿ ಕಲೆ
  • ನ.11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿ: ಪೂರ್ವಭಾವಿ ಸಭೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮತದಾರರಿಗಾಗಿ ಬೂತ್‍ವಾಕ್ ಕಾರ್ಯಕ್ರಮ
ಇತರೆ ಸುದ್ಧಿಗಳು

ಮತದಾರರಿಗಾಗಿ ಬೂತ್‍ವಾಕ್ ಕಾರ್ಯಕ್ರಮ

By News Desk BenkiyabaleUpdated:April 24, 2023 4:21 pm

ತುಮಕೂರು


ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಅಂಗವಾಗಿ ‘ನಮ್ಮ ನಡೆ ಮತದಾರರಿಗೆ ಮತಗಟ್ಟೆ ತೋರಿಸುವ ಕಡೆ’ ಎಂಬ ವಿನೂತನ ಬೂತ್ ವಾಕ್ ಕಾರ್ಯಕ್ರಮವನ್ನು ಏ.25, 26 ಹಾಗೂ ಮೇ 5, 6ರಂದು ಒಟ್ಟಾರೆ 4 ದಿನ ಆಯೋಜಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಇಂದು ನಡೆದ 11 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಬಿಎಲ್‍ಒ, ಕಂದಾಯ ಲೆಕ್ಕಾಧಿಕಾರಿ ಮತ್ತು ಪಿಡಿಓಗಳನ್ನೊಳಗೊಂಡ ಹಾಗೂ ಪಟ್ಟಣ ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಿಎಲ್‍ಓ, ಬಿಲ್‍ಕಲೆಕ್ಟರ್ ಮತ್ತು ಹೆಲ್ತ್ ಇನ್ಸ್‍ಪೆಕ್ಟರ್‍ಗಳನ್ನೊಳಗೊಂಡ ತಂಡಗಳು ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ನಿರ್ಧಿಷ್ಟ ಸ್ಥಳವನ್ನು ಗುರುತಿಸಿ ಆ ಸ್ಥಳಕ್ಕೆ ಮತಗಟ್ಟೆ ವ್ಯಾಪ್ತಿಯ ಎಲ್ಲಾ ಮತದಾರರು ಬರುವಂತೆ ಪ್ರೇರೇಪಿಸಿ ಆ ಸ್ಥಳದಿಂದ ಅವರನ್ನು ಮತಗಟ್ಟೆ ಕೇಂದ್ರಕ್ಕೆ ಕರೆತಂದು ಅವರಿಗೆ ಮತಗಟ್ಟೆ ಪರಿಚಯ ಮಾಡಿಕೊಡಬೇಕು ಹಾಗೂ ಮತದಾರರಿಗೆ ಅವರ ಪಾರ್ಟ್ ನಂಬರ್ ಹಾಗೂ ಸೀರಿಯಲ್ ನಂಬರ್‍ಗಳನ್ನು ತಿಳಿಸಿ ಸಾಧ್ಯವಾದಲ್ಲಿ ವೋಟರ್ ಸ್ಲಿಪ್‍ಗಳನ್ನು ವಿತರಿಸಬೇಕೆಂದು ಸೂಚಿಸಿದರು.
ನಂತರ ಚುನವಣಾ ಸಿದ್ದತೆ ಕುರಿತು ಮಾತನ್ನಾಡಿದ ಅವರು, ನಾಮಪತ್ರ ಹಿಂಪಡೆದುಕೊಂಡವರ ಪಟ್ಟಿಯನ್ನು ನಮೂನೆ-6ರಲ್ಲಿ ತಯಾರಿಸಿ ಪ್ರಚುರಪಡಿಸಬೇಕು, ನಂತರ ಫಾರಂ-7ಎ ರಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಬೇಕು ಎಂದು ತಿಳಿಸಿದರು.
ಪೋಸ್ಟಲ್ ಬ್ಯಾಲೆಟ್‍ಗಳನ್ನು ಭೂದಾಖಲೆಗಳ ಉಪನಿರ್ದೇಶಕರ ಸಹಕಾರದಿಂದ ಮುದ್ರಣ ಮಾಡಿ, ಹಂಚಿಕೆ ಕಾರ್ಯ ಮಾಡತಕ್ಕದ್ದು. 24 ಗಂಟೆಗಳಲ್ಲಿ ಇಟಿಪಿಬಿಎಸ್ ಮತಪತ್ರಗಳನ್ನು ಅಪ್‍ಲೋಡ್ ಮಾಡತಕ್ಕದ್ದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸ್ವೀಪ್ ಅಧ್ಯಕ್ಷರಾದ ಡಾ: ಕೆ. ವಿದ್ಯಾಕುಮಾರಿ ಅವರು ಮಾತನಾಡಿ, ಬಿಎಲ್‍ಓಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ವಲಸೆ ಹೋದಂತಹ ಮತ್ತು ಗೈರು ಹಾಜರಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಸದರಿ ಮತದಾರರು ತಪ್ಪದೆ ಮೇ 10ರಂದು ತಮ್ಮ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ದೂರವಾಣಿ ಕರೆ ಮತ್ತು ವಾಟ್ಸಪ್ ಮೂಲಕ ಪ್ರೇರೇಪಿಸುವುದು ಎಂದು ನಿರ್ದೇಶನ ನೀಡಿದರು.
ಅಂತೆಯೇ ಎಲ್ಲಾ ಮತಗಟ್ಟೆಗಳ ಬಳಿ ಮತಗಟ್ಟೆ ಅಧಿಕಾರಿಯ ಹೆಸರು, ಸಂಪರ್ಕ, ವಿಳಾಸ ಸೇರಿದಂತೆ ಬಿಎಲ್‍ಓಗಳ ಮಾಹಿತಿಯನ್ನು ಕಡ್ಡಾಯವಾಗಿ ಪೇಂಟಿಂಗ್ ಮಾಡಿಸಬೇಕು ಮತ್ತು ಮತಗಟ್ಟೆಗಳಿಗೆ ಹೊಂದಿಕೊಂಡಂತೆ ಪಕ್ಕದ ಕೊಠಡಿಗಳಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತು ಕುಡಿಯುವ ನೀರನ್ನು ಒದಗಿಸಬೇಕು, ಮತಗಟ್ಟೆಗೆ ಹೊಂದಿಕೊಂಡಂತೆ ಕೊಠಡಿಗಳು ಲಭ್ಯವಿಲ್ಲದಿದ್ದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅವರು ಎಲ್ಲಾ ಚುನಾವಣಾಧಿಕಾರಿಗಳಿಗೆ ಚಿಹ್ನೆಗಳ ಹಂಚಿಕೆ ಕುರಿತು ವಿವರವಾದ ಮಾಹಿತಿ ನೀಡಿದರು. ಪಾಲಿಕೆ ಆಯುಕ್ತ ದರ್ಶನ್, ಡಿಡಿಎಲ್‍ಆರ್ ಸುಜಯ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(Visited 3 times, 1 visits today)
tumkur Tumkur dc yspatil
Previous Articleಪಾವಗಡ ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆಗಳ ತಾಂಡವ
Next Article ಮುಂಗಾರಿನವರೆಗೆ ಮೇವಿನ ನೆರವು
News Desk Benkiyabale

Related Posts

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm news

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm news

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm news
ತಾಜಾ ಸುದ್ಧಿಗಳು
news

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm
news

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm
news

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm
news

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm
news

ನೀನಾಸಂ ಮೂಲದ ಸದುಭಿರುಚಿ ನಾಟಕಗಳು

November 04, 2026 5:25 pm
news

ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯ

November 03, 2026 4:38 pm
Our Youtube Channel
Our Picks

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

November 04, 2026 5:32 pm

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm

ನೀನಾಸಂ ಮೂಲದ ಸದುಭಿರುಚಿ ನಾಟಕಗಳು

November 04, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಕ್ಷಣೆಗಾಗಿ ವಕೀಲರ ಸರಪಳಿ ಪ್ರತಿಭಟನೆ

By News Desk BenkiyabaleNovember 04, 2026 5:32 pm

ಕೊರಟಗೆರೆ: ಕರ್ನಾಟಕದಲ್ಲಿ ವಕೀಲರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಸುರಕ್ಷತಾ ಕಾಯ್ದೆ ಜಾರಿಗೆ ಹೊತ್ತಾಯಿಸಿ…

ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಒತ್ತಾಯ

November 04, 2026 5:29 pm

ಡಿಸೆಂಬರ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆದು, ವಿದ್ಯುದ್ದೀಕರಣಗೊಳಿಸಿ ಹಸ್ತಾಂತರಿಸಲು ಸೂಚನೆ

November 04, 2026 5:28 pm

ಕನ್ನಡ ಭಾಷೆ ಉಳಿವಿಗಾಗಿ ಬೈಕ್‍ನಲ್ಲಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ

November 04, 2026 5:27 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.