BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ
  • ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ
  •  ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ
  • ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ
  • ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ
  • ೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ
  • ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ
  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಯುಜಿಡಿ ಕೊಳಚೆ, ಮಳೆನೀರು ಮನೆಗಳಿಗೆ ನುಗ್ಗಿ ಅವಾಂತರ : ಹೋರಿ ಮುದ್ದಪ್ಪ ಬಡಾವಣೆ ನಿವಾಸಿಗಳ ಬವಣೆಗೆ ಪರಿಹಾರವಿಲ್ಲವೆ?
ತುಮಕೂರು

ಯುಜಿಡಿ ಕೊಳಚೆ, ಮಳೆನೀರು ಮನೆಗಳಿಗೆ ನುಗ್ಗಿ ಅವಾಂತರ : ಹೋರಿ ಮುದ್ದಪ್ಪ ಬಡಾವಣೆ ನಿವಾಸಿಗಳ ಬವಣೆಗೆ ಪರಿಹಾರವಿಲ್ಲವೆ?

By News Desk BenkiyabaleUpdated:October 24, 2024 6:03 pm

ತುಮಕೂರು:\

ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಪರಿಣಾಮ ನಗರದ ಆರ್.ಟಿ.ನಗರದ ಹೋರಿ ಮುದ್ದಪ್ಪ ಬಡಾವಣೆಯಲ್ಲಿ ಮಳೆನೀರು ಹಾಗೂ ಯುಜಿಡಿ ಕೊಳಚೆ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಆವರಿಸಿ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ.
ಈ ಪ್ರದೇಶದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿನ ಜನ ಇಂತಹ ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವಿಪರೀತ ಮಳೆ ಸುರಿದಾಗ ಮಳೆನೀರು ಸರಾಗವಾಗಿ ಹರಿದುಹೋಗದೆ, ರಸ್ತೆ, ಮನೆಗಳಿಗೆ ನುಗ್ಗಿ ಅವಾಂತರ ಸೃಸ್ಟಿಸುತ್ತದೆ. ಸಾಲದಕ್ಕೆ ಇಲ್ಲಿನ ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ, ಕಸ ತುಂಬಿವೆ. ಮಳೆಗಾಲದಲ್ಲಿ ನೀರು ಹರಿದು ಒಳಚರಂಡಿಗಳ ಕೊಳಚೆ ಉಕ್ಕಿ ರಸ್ತೆ, ಮನೆಗಳಿಗೆ ಹರಿಯುತ್ತದೆ. ಮಳೆಗಾಲ ಆರಂಭವಾದಾಗಿನಿAದ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿ ಇರಲು ಸಾಧ್ಯವಾಗಿಲ್ಲ, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹಲವು ದಿನಗಳಿಂದ ನೀರು ಸಂಗ್ರಹವಾಗಿ ಕಟ್ಟಡಗಳ ಪಾಯ ಜನಿದು ಮನೆಗೆ ನುಗ್ಗುತ್ತಿದ್ದು, ಈ ನೀರನ್ನು ನಿಯಂತ್ರಿಸಲಾಗದೆ ಜನ ಕಂಗಾಲಾಗಿದ್ದಾರೆ.
ನಗರದ ಶಾಸಕರು, ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಗಿರುವ ಸಮಸ್ಯೆ ಪರಿಶೀಲಿಸಿ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆ ಉಂಟಾಗುತ್ತಿರುವ ಕಾರಣಕ್ಕೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಇಲ್ಲಿನ ನಿವಾಸಿಗಳಾದ ಗಂಗಾಧರಪ್ಪ, ಸದಾಶಿವಯ್ಯ, ಬಸವರಾಜು, ಮಹೇಶ್, ಮಂಜಣ್ಣ, ಜಗದಾಂಬ, ನಾಗೇಂದ್ರಪ್ರಸಾದ್ ಶಾಸಕರು ಹಾಗೂ ನಗರ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

(Visited 1 times, 1 visits today)
Previous Articleಸರ್ಕಾರಿ ಗುಂಡುತೋಪು ಕಬಳಿಸಿದ ಶಿರಸ್ತೇದಾರ್ ನರಸಿಂಹರಾಜು ಕುಟುಂಬ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Next Article ಋತುವಿಗೆ ಅನುಗುಣವಾಗಿ ಅಹಾರ ಪದ್ದತಿ
News Desk Benkiyabale

Related Posts

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm news

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm news

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm news
ತಾಜಾ ಸುದ್ಧಿಗಳು

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm

ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ

June 17, 2026 5:21 pm

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

June 16, 2026 5:29 pm
Our Youtube Channel
Our Picks

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm

ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ

June 17, 2026 5:21 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

By News Desk BenkiyabaleJune 17, 2026 5:31 pm

ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬುಧವಾರ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಹಾಗೂ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮ…

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.