BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
  • ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
  • ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
  • ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
  • ಉಪ ಮುಖ್ಯಮಂತ್ರಿಗಳಿ0ದ ತುಮಕೂರು ದಸರಾ-೨೦೨೬ ಲಾಂಛನ ಬಿಡುಗಡೆ
  • ಶಾಲಾ ಸಾಮಗ್ರಿಗಳಿಂದ ಅರಳಿದ ವಿದ್ಯಾ ಗಣಪತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪರಿತ್ಯಕ್ತ ಮಕ್ಕಳಿಗಾಗಿ “ಮಮತೆಯ ತೊಟ್ಟಿಲು”
ಕರ್ನಾಟಕ ಸುದ್ಧಿಗಳು

ಪರಿತ್ಯಕ್ತ ಮಕ್ಕಳಿಗಾಗಿ “ಮಮತೆಯ ತೊಟ್ಟಿಲು”

By News Desk BenkiyabaleUpdated:November 12, 2024 6:13 pm

ಸಮಾಜದಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳು ಬದುಕಿನುದ್ದಕ್ಕೂ ಕೊರಗಿನಲ್ಲೆ ಅಂತ್ಯ ಕಾಣುತ್ತಾರೆ. ಕೆಲ ತಾಯಂದಿರು ವಿವಿಧ ಕಾರಣಗಳಿಂದ ಹೆತ್ತ ಮಗುವನ್ನೇ ಆಸ್ಪತ್ರೆ, ಬೀದಿ ಪಾಲು ಮಾಡುತ್ತಿದ್ದಾರೆ. ಮಗು ಬೇಡವಾದಲ್ಲಿ ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ, ಪೊದೆಗಳಲ್ಲಿ ಎಸೆದು ಹೋಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಎಸೆದು ಹಿಂಸಿಸದೆ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್, ನಗರದಲ್ಲಿರುವ ಬಾಲಕಿಯರ ಬಾಲಮಂದಿರದ ಆವರಣ, ಕುಣಿಗಲ್ ತಾಲೂಕು ಭಕ್ತರಹಳ್ಳಿ ವಾಣಿಗೆರೆಯಲ್ಲಿರುವ ದಯಾಕಿರಣ ದತ್ತು ಕೇಂದ್ರದಲ್ಲಿ ಪರಿತ್ಯಕ್ತ ಮಕ್ಕಳಿಗಾಗಿಯೇ ಅಳವಡಿಸಿರುವ “ಮಮತೆಯ ತೊಟ್ಟಿಲು”ನಲ್ಲಿ ಹಾಕುವ ಮೂಲಕ ಎಳೆಯ ಜೀವಗಳನ್ನು ರಕ್ಷಿಸಬೇಕು.

ಪರಿತ್ಯಕ್ತ ಮಕ್ಕಳನ್ನು ಗಮನಿಸಿ ವರದಿ ಮಾಡದಿದ್ದಲ್ಲಿ ಅಪರಾಧ:

ಬಾಲನ್ಯಾಯ ಕಾಯ್ದೆ-2015 ತಿದ್ದುಪಡಿ 2021ರನ್ವಯ ಯಾವುದೇ ವ್ಯಕ್ತಿ, ಯಾವುದೇ ಸಂಸ್ಥೆ, ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತೊರೆಯಲ್ಪಟ್ಟ ಮಕ್ಕಳನ್ನು 24 ಗಂಟೆಯೊಳಗಾಗಿ ಮಕ್ಕಳ ಸಹಾಯವಾಣಿ-1098, ಸ್ಥಳೀಯ ಪೊಲೀಸ್ ಠಾಣೆ, ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ದೂರವಾಣಿ ಸಂಖ್ಯೆ: 0816-2956699 ಅಥವಾ ದಯಾಕಿರಣ ದತ್ತು ಕೇಂದ್ರಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ವರದಿ ಮಾಡದಿದ್ದಲ್ಲಿ ಅಂತಹ ಅಪರಾಧಕ್ಕೆ 6 ತಿಂಗಳವರೆಗೆ ಕಾರಾಗೃಹ ವಾಸ ಅಥವಾ 10000/- ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಕಾನೂನು ಬಾಹಿರವಾಗಿ ಮಕ್ಕಳನ್ನು ಮಾರುವುದು ಮತ್ತು ಕೊಳ್ಳುವುದು ಶಿಕ್ಷಾರ್ಹ ಅಪರಾಧ:

ಬೇಡದ ಮಕ್ಕಳನ್ನು ಕಾನೂನು ಬಾಹಿರವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದಪಡಿ 2021, ಸೆಕ್ಷನ್ 81ರನ್ವಯ ಯಾವುದೇ ವ್ಯಕ್ತಿ ಮಕ್ಕಳನ್ನು ಮಾರುವುದು ಅಥವಾ ಕೊಳ್ಳುವುದು ಅಪರಾಧವಾಗಿದೆ. ಇಂತಹ ಅಪರಾಧಕ್ಕೆ 5 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ, 1 ಲಕ್ಷ ರೂ.ಗಳ ದಂಡ ವಿಧಿಸಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂ ಸಿಬ್ಬಂದಿಗಳು ತೊಡಗಿದ್ದರೆ ಅಂತಹವರಿಗೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದಾಗಿದೆ.

ಪರಿತ್ಯಕ್ತ ಮಕ್ಕಳಿಗೆ ಪುನರ್ವಸತಿ:

ಪರಿತ್ಯಕ್ತ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ-2015 ತಿದ್ದುಪಡಿ 2021ರನ್ವಯ ಪುನರ್ವಸತಿ ಕಲ್ಪಿಸಲಾಗುವುದು. ಇಂತಹ ಮಕ್ಕಳನ್ನು ಅನಧಿಕೃತವಾಗಿ ಬೇರೆಯವರಿಗೆ ನೀಡಲ್ಪಟ್ಟಲ್ಲಿ ಬಾಲನ್ಯಾಯ ಕಾಯ್ದೆಯನ್ವಯ ಅಪರಾಧವೆಂದು ಪರಿಗಣಿಸಲ್ಪಡಲಾಗುವುದು. ವಿವಿಧ ಕಾರಣಗಳಿಂದ ಜೈವಿಕ ಪೋಷಕರಿಂದ ಬೇರೆಯಾದ ಮಗು ಎಲ್ಲಾ ರೀತಿಯ ಸಂಬAಧಗಳ ಜೊತೆ ಹಕ್ಕುಗಳು, ಜವಾಬ್ದಾರಿಗಳು ಮತ್ತು ಸೌಲಭ್ಯಗಳೊಂದಿಗೆ ಶಾಶ್ವತವಾಗಿ ದತ್ತು ಪೋಷಕರಿಗೆ ಕಾನೂನುಬದ್ಧವಾಗಿರುವ ಹಕ್ಕನ್ನು ಹೊಂದಿರುತ್ತದೆ. ಕುಟುಂಬದ ವಾತಾವರಣದಲ್ಲಿ ಪ್ರೀತಿ-ವಾತ್ಸಲ್ಯ, ಆರೈಕೆ, ಸುರಕ್ಷತೆಯನ್ನು ಪಡೆಯಲು, ಕ್ರಿಯಾಶೀಲ ಮತ್ತು ಸಮಗ್ರ ಬೆಳವಣಿಗೆಗೆ ಕುಟುಂಬ ವಾತಾವರಣದಲ್ಲಿ ಬೆಳೆಯುವ ಹಕ್ಕನ್ನು ಪ್ರತೀ ಮಗುವಿಗೆ ನೀಡಲಾಗಿದೆ.
ಪರಿತ್ಯಕ್ತ ಮಕ್ಕಳನ್ನು ದತ್ತು ಪಡೆಯಲು ಅವಕಾಶ:

ಪ್ರೀತಿ-ವಾತ್ಸಲ್ಯ-ಮಮತೆ ಹಾಗೂ ರಕ್ಷಣೆಯ ವಾತಾವರಣದಲ್ಲಿ ಬೆಳೆಯುವುದು ಪ್ರತೀ ಮಗುವಿನ ಪ್ರಾಥಮಿಕ ಹಕ್ಕು. “ಮುದ್ದಾದ ಮಗು ಮನೆಯ ಸೊಬಗು” ಮಗುವಿನ ಭಾವನಾತ್ಮP,À ಬೌದ್ಧಿಕ, ದೈಹಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸಿ ಬದುಕನ್ನು ಕಟ್ಟಿಕೊಡುವಲ್ಲಿ ಪೋಷಕರ ಜವಾಬ್ದಾರಿ ಅಡಗಿದೆ.
ಎಲ್ಲಾ ಮಕ್ಕಳಂತೆ ಅನಾಥ, ಪರಿತ್ಯಕ್ತ ಮಕ್ಕಳಿಗೂ ಕೂಡ ಪ್ರೀತಿ-ವಾತ್ಸಲ್ಯ, ಮಮತೆ ಬಾಂಧವ್ಯ ಮತ್ತು ಆಪ್ತತೆಯ ಅವಶ್ಯಕತೆಯಿದೆ. ಇಂತಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಅವರ ಪರಿಪೂರ್ಣ ಬೆಳವಣಿಗೆಗೆ ಪೂರಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಒಂದುಗೂಡಲು ದತ್ತು ಕಾರ್ಯಕ್ರಮವೊಂದು ಅತ್ಯುತ್ತಮ ಪರ್ಯಾಯ ಮಾರ್ಗವಾಗಿದೆ.

ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಪರ್ಯಾಯ ಮಾರ್ಗ:

ಅನಾಥ, ಪರಿತ್ಯಕ್ತ ಪೋಷಕರಿಂದ ಒಪ್ಪಿಸಲ್ಪಟ್ಟ ಮಕ್ಕಳಿಗೆ ಉತ್ತಮ ಜೀವನ ರೂಪಿಸಲು ಅವರನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಿ ಪೋಷಕರ ಪ್ರೀತಿ-ವಾತ್ಸಲ್ಯ ಮತ್ತು ಆರೈಕೆ ಪಡೆಯಲು ದತ್ತು ಪ್ರಥಮ ಪರ್ಯಾಯ ಮಾರ್ಗವಾಗಿದೆ. ಹಾಗೇಯೇ ಮಕ್ಕಳಿಲ್ಲದ ದಂಪತಿಗಳಿಗೆ ಮಗುವಿನ ಆಪ್ತತೆ ಸಾನಿಧ್ಯ ಪೋಷಕತ್ವದ ಜವಾಬ್ದಾರಿಯ ಪರಿಪೂರ್ಣತೆಯನ್ನು ನೀಡುತ್ತದೆ.

ನವೆಂಬರ್ ಮಾಹೆಯಲ್ಲಿ ರಾಷ್ಟಿçÃಯ ದತ್ತು ಮಾಸಾಚರಣೆ:
ಪ್ರತಿ ವರ್ಷ ನವೆಂಬರ್ ತಿಂಗಳನ್ನು ರಾಷ್ಟಿçÃಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ತಿಂಗಳಾಗಿದೆ. ಈosಣeಡಿ ಛಿಚಿಡಿe ಚಿಟಿಜ ಈosಣeಡಿ ಅಚಿಡಿe ಐeಚಿಜiಟಿg ಣo ಂಜoಠಿಣioಟಿ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ರಾಷ್ಟಿçÃಯ ದತ್ತು ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ಶಿಕ್ಷೆ ವಿಧಿಸಲು ಅವಕಾಶವಿದ್ದು, ದತ್ತು ಪಡೆಯುವವರು ಕಾನೂನು ಬದ್ಧವಾಗಿಯೆ ದತ್ತು ಪಡೆಯಬೇಕು. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯಲು ಇದು ಸಕಾಲ. ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಮನವಿ ಮಾಡಿದ್ದಾರೆ.

(Visited 1 times, 1 visits today)
ಬಾಲನ್ಯಾಯ ಕಾಯ್ದೆ ಮಕ್ಕಳ ಸಹಾಯವಾಣಿ ಮಮತೆಯ ತೊಟ್ಟಿಲು
Previous Articleನ. 15: ಬಾಲಕ-ಬಾಲಕಿಯರ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆ
Next Article ಊರಿನ ಹೆಸರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿ: ಮುರುಳೀಧರ ಹಾಲಪ್ಪ
News Desk Benkiyabale

Related Posts

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm news
ತಾಜಾ ಸುದ್ಧಿಗಳು
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm
news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm
news

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
news

ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ

September 16, 2026 5:32 pm
Our Youtube Channel
Our Picks

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

By News Desk BenkiyabaleSeptember 17, 2026 5:39 pm

ಹುಳಿಯಾರು “ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫…

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.