BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಚನ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ
ಕರ್ನಾಟಕ ಸುದ್ಧಿಗಳು

ವಚನ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ

By News Desk BenkiyabaleUpdated:February 06, 2025 7:07 pm

ತುಮಕೂರು: ಜಾನ್ ಪೀಟರ್ ಶೌಟನ್ ಅವರ ‘ಅನುಭಾವಿಗಳ ಕ್ರಾಂತಿ’ ಕೃತಿಯು ವಚನ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ಆರ್. ಚಂದ್ರಶೇಖರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ವಿಭಾಗಗಳು ಗುರುವಾರ ಜಂಟಿಯಾಗಿ ಆಯೋಜಿಸಿದ್ದ “ಜಾನ್ ಪೀಟರ್ ಶೌಟನ್ ಅವರ ಅನುಭಾವಿಗಳ ಕ್ರಾಂತಿ” ಕೃತಿಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನುಭಾವಿಗಳ ಕ್ರಾಂತಿ ಕೃತಿಯಲ್ಲಿ ಬಸವಣ್ಣನವರ ಕಾಲಘಟ್ಟ, 12ನೆಯ ಶತಮಾನ, ವಸಾಹತು ಕಾಲಘಟ್ಟ ಹಾಗೂ ಸ್ವಾತಂತ್ರö್ಯ ನಂತರದ ಕಾಲಘಟ್ಟ ಎಂಬ ನಾಲ್ಕು ಭಾಗಗಳಿವೆ. ವಚನ ಸಾಹಿತ್ಯದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಕೂಡ ಈ ಗ್ರಂಥ ಬೆಳಕು ಚೆಲ್ಲಿದೆ ಎಂದರು.
ವಚನ ಸಾಹಿತ್ಯವನ್ನು ಸಂಸ್ಕೃತಿಯ ಚೌಕಟ್ಟಿನ ಒಂದು ಭಾಗವೆಂದು ಗುರುತಿಸಬಹುದು. ಏಕೀಕೃತ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಿನ್ನ ರೀತಿಯಲ್ಲಿ ಶೌಟನ್ ಕೃತಿಯನ್ನು ಕಟ್ಟಿಕೊಟ್ಟಿದ್ದಾನೆ ಎಂದರು.
ಸಂಶೋಧನೆಯಲ್ಲಿ ವಿಧಾನ, ವಿಶ್ಲೇಷಣೆ ಹಾಗೂ ನೆಲೆಗಟ್ಟು ಬಹಳ ಮುಖ್ಯವಾಗುತ್ತದೆ. ಈ ಕೃತಿಯ ಎಲ್ಲ ಭಾಗಗಳಲ್ಲೂ ಚರ್ಚೆಗೆ ಬರುವ ಏಕೈಕ ವಿಷಯ ಸಮಾನತೆ. ಸಾಮಾಜಿಕ ಸಮಾನತೆ, ಲಿಂಗೆ ಸಮಾನತೆ, ಆರ್ಥಿಕ ಸಮಾನತೆ ಎಲ್ಲವನ್ನೂ ಇದರಲ್ಲಿ ವಿವರಿಸಲಾಗಿದೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಜೊತೆಗೆ ಸಂವಾದಗಳನ್ನು ನಡೆಸುವುದರಿಂದ ಕಲಿತದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಜ್ಞಾನಕ್ಕೆ ಮುಕ್ತವಾಗಿರಬೇಕು. ಎಲ್ಲದರ ಅನುಭವವನ್ನು ಪಡೆಯಬೇಕು. ಅನುಭವವನ್ನು ಪಡೆದವರು ಅನುಭಾವಿಗಳಾಗುತ್ತಾರೆ ಎಂದರು.
ತುಮಕೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ, ಡಿ. ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಹಾಗೂ ಶ್ರೀ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕರಾದ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು.

(Visited 1 times, 1 visits today)
‘ಅನುಭಾವಿಗಳ ಕ್ರಾಂತಿ ತುಮಕೂರು ವಿಶ್ವವಿದ್ಯಾನಿಲಯ
Previous Articleಅಗ್ನಿ ಅವಘಡ: ದವಸ ಧಾನ್ಯ ಭಸ್ಮ
Next Article ಫುಲೆ ಮಹಿಳಾ ಲೋಕಕ್ಕೆ ಹೊಸ ಚೈತನ್ಯ: ಬಿ.ಸುರೇಶ್‌ಗೌಡ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.