BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ
  • ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ
  • ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ
  • ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ
  • ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
  • ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ
  • ಎಸ್‌ಐಆರ್: ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ ೨೩ ಕೊನೆಯ ದಿನ
  • ಮಾಜಿ ಮಂತ್ರಿ ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನೊಂದ ಸಮಾಜಕ್ಕೆ ಇತರೆ ಸಮಾಜ ಶಕ್ತಿ ತುಂಬಲಿ
ತುಮಕೂರು

ನೊಂದ ಸಮಾಜಕ್ಕೆ ಇತರೆ ಸಮಾಜ ಶಕ್ತಿ ತುಂಬಲಿ

By News Desk BenkiyabaleUpdated:March 12, 2025 4:17 pm

ತುಮಕೂರು: ನೊಂದ ಸಮಾಜದವರಿಗೆ ಉಳಿದ ಸಮಾಜದವರು ಧ್ವನಿಯಾಗಿ ಶಕ್ತಿ ತುಂಬಬೇಕು, ಪರಸ್ಪರ ನೆರವಾಗುತ್ತಾ ಸಹಬಾಳ್ವೆಯ ಸಮಾಜ ನಿರ್ಮಾಣ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ಬುಧವಾರ ನಗರದ ವಿಘ್ನೇಶ್ವರ ಕಂಫರ್ಟ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸೇನೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಚಿದೇವ ಸೌಹಾರ್ದ ಪತ್ತಿನ ಸಹಕಾರಿ ಅಧ್ಯಕ್ಷ ಶಾಂತಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಸ್ವಾಮೀಜಿ, ವಿವಿಧ ಜಾತಿಗಳು ಈ ಸಮಾಜದ ಬಳಗಗಳಿದ್ದಂತೆ. ಹಿಂದೆ ಕುಲಕಸುಬಿನ ಆಧಾರದಲ್ಲಿ ಜಾತಿಗಳು ಗುರುತಿಸಲ್ಪಟ್ಟಿದ್ದವು. ಆ ಎಲ್ಲಾ ಜಾತಿಯವರು ಊರಿನ ಜನರ ಹಿತಕ್ಕಾಗಿ ಸೌಹಾರ್ದತೆಯಿಂದ ತೊಡಗಿಕೊಂಡು ಆದರ್ಶವಾಗಿ ಬಾಳುತ್ತಿದ್ದರು. ಈಗಲೂ ಅದೇ ಬಾಂಧವ್ಯ ಜಾತಿಗಳ ನಡುವೆ ಬೆಳೆಯಬೇಕು ಎಂದು ಹೇಳಿದರು.
ಯಾವುದೇ ಸಮಾಜ ಇತರರನ್ನು ಅವಲಂಭಿಸದೆ ಸ್ವಂತ ಶಕ್ತಿ ಬೆಳೆಸಿಕೊಂಡು ಸರ್ಕಾರದ ವಿವಿಧ ಸೌಲಭ್ಯ, ಸ್ಥಾನಮಾನಗಳನ್ನು ಪಡೆಯುವಂತಾಗಬೇಕು. ಇಂತಹ ಶಕ್ತಿ ಬರಬೇಕೆಂದರೆ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರಿಗೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಮಡಿವಾಳ ಸಮಾಜದ ಶಾಂತಕುಮಾರ್ ಅವರನ್ನು ಇತರೆ ಹಿಂದುಳಿದ ಸಮಾಜದ ಮುಖಂಡರು ಸೇರಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸಂಪ್ರದಾಯಗಳು ಹೆಚ್ಚಾಗಬೇಕು. ಇದರೊಂದಿಗೆ ಜಾತಿ-ಜಾತಿಗಳ ನಡುವೆ ಸೌಹಾರ್ದಯುತ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜಗಳು ಒಟ್ಟುಗೂಡಲು ಅವಕಾಶವಾಗುತ್ತದೆ. ಈ ಮೂಲಕ ಸಮಾಜಗಳನ್ನು ಸಂಘಟನೆ ಮಾಡಿಕೊಳ್ಳಬಹುದು. ಈ ಸಮಾಜಗಳ ನ್ಯಾಯಯುತ ಬೇಡಿಕೆಗಳ ಹೋರಾಟಗಳಿಗೆ ಹಿಂದುಳಿದ ವರ್ಗಗಳ ಒಕ್ಕೂಟ ಸದಾ ಜೊತೆಗಿರುತ್ತದೆ ಎಂದು ಹೇಳಿದರು.
ದೊಡ್ಡ ಇತಿಹಾಸ ಹೊಂದಿರುವ ಮಡಿವಾಳ ಸಮಾಜವು ಎಲ್ಲಾ ವರ್ಗದವರೊಂದಿಗೆ ಸಹಬಾಳ್ವೆಯಿಂದ ಬೆಳೆದುಬಂದಿದೆ. ಮಡಿವಾಳ ಮಾಚಿದೇವರು ಬಸವಣ್ಣನವರ ಸಮಕಾಲಿನ ಶರಣರು. ಸಮಸಮಾಜಕ್ಕಾಗಿ ಜಾಗೃತಿ ಮೂಡಿಸಿದವರು. ಈಗ ನಾವೆಲ್ಲಾ ಸೇರಿ ಅಂತಹ ಮಹನೀಯರ ಕಾರ್ಯಗಳನ್ನು ಮುಂದುವರೆಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಎಂ.ಕೆ.ವೆAಕಟಸ್ವಾಮಿ ಮಾತನಾಡಿ, ಸಮಾಜದಲ್ಲಿ ಯಾವುದೇ ಸಾಧನೆ ಮಾಡಿದವರು, ಸ್ಥಾನಮಾನ ಪಡೆದವರನ್ನು ಗುರುತಿಸಿ ಗೌರವಿಸುವುದು ಎಲ್ಲಾ ಸಮಾಜಗಳ ಕಾಳಜಿ ಆಗಬೇಕು. ಆ ಮೂಲಕ ಅವರು ಸಮಾಜಕ್ಕೆ ಹೆಚ್ಚು ಸೇವೆ ಮಾಡಲು ಪ್ರೋತ್ಸಾಹ ನೀಡುವುದಲ್ಲದೆ, ಇತರರಿಗೂ ಪ್ರೇರಣೆ ಆಗಬೇಕು ಎಂದು ಆಶಿಸಿದರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಹಿರಿಯ ನ್ಯಾಯವಾದಿ ಆರ್.ಎನ್.ವೆಂಕಟಾಚಲ, ಕರಾಟೆ ಶಿಕ್ಷಕ ಕರಾಟೆ ಕೃಷ್ಣಮೂರ್ತಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷö್ಮಣ್, ಮುಖಂಡ ಕೊಪ್ಪಳ್ ನಾಗರಾಜು, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಮಂಜೇಶ್ ಒಲಿಂಪಿಕ್, ಸಮಾಜ ಸೇವಕ ನಟರಾಜ ಶೆಟ್ಟಿ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕೃಷ್ಣಮೂರ್ತಿ ಮಾತನಾಡಿದರು. ಮಾಚಿದೇವ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಶಾಂತಕುಮಾರ್, ವಿವಿಧ ಸಮಾಜಗಳ ಮುಖಂಡರಾದ ಲಕ್ಷಿö್ಮÃಕಾಂತರಾಜೇ ಅರಸು, ಗುರುರಾಘವೇಂದ್ರ, ಉದಯ್, ಸಂತೋಷ್, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಮೀಸೆ ಸತೀಶ್, ನಟರಾಜ್ ಭಾಗವಹಿಸಿದ್ದರು.

(Visited 1 times, 1 visits today)
Previous Articleಪುರಸಭಾ ಮುಖ್ಯಾಧಿಕಾರಿ ವಿರುದ್ಧ ಪ್ರತಿಭಟನೆ
Next Article ರೇಣುಕಾಚಾರ್ಯರ ಜಯಂತಿ ಆಚರಣೆ
News Desk Benkiyabale

Related Posts

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm news
ತಾಜಾ ಸುದ್ಧಿಗಳು
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm
news

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm
news

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm
news

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm
news

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

August 26, 2026 4:07 pm
news

ಕ್ಷೇತ್ರದ ಯಾವೊಬ್ಬ ಮತದಾರರನ್ನೂ ಪಟ್ಟಿಯಿಂದ ಕೈ ಬಿಡದಂತೆ ಸೂಚನೆ

August 25, 2026 3:57 pm
Our Youtube Channel
Our Picks

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

August 26, 2026 4:41 pm

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

August 26, 2026 4:07 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೪೦ಕ್ಕೂ ಹೆಚ್ಚು ಮಕ್ಕಳಿಗೆ ನೇತ್ರ ತಪಾಸಣೆ

By News Desk BenkiyabaleAugust 26, 2026 4:41 pm

ಪಾವಗಡ: ಹೆಸರಾಂತ ಮಕ್ಕಳ ನೇತ್ರ ತಜ್ಞರಾದ ಡಾ.ವಸುಧಾ ನರೇಶ್ ರವರು ಮಕ್ಕಳಿಗೆ ನೇತ್ರ ತಪಾಸಣೆಯನ್ನು ನಡೆಸಿದರು. ಈ ಶಿಬಿರಕ್ಕೆ ಬಹು…

ಸೆ.೬ರ ರಜತ ಮಹೋತ್ಸವಕ್ಕೆ ಸಜ್ಜಾದ ಹಿಂದುಳಿದ ಸಮುದಾಯ

August 26, 2026 4:35 pm

ಆಸೆ ಇದ್ದರೆ ಸಾಲದು ಕಠಿಣ ಪರಿಶ್ರಮ ಬೇಕು: ವಿರೇಶಾನಂದ ಸರಸ್ವತಿ ಸ್ವಾಮೀಜಿ

August 26, 2026 4:11 pm

ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬ ಆಚರಣೆ

August 26, 2026 4:10 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.