BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ
  • ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ
ತುಮಕೂರು

ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ

By News Desk BenkiyabaleUpdated:March 21, 2025 4:08 pm

ಪಾವಗಡ: ಶುಕ್ರವಾರ ನಗರದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಕ್ಷಯ ಮಿತ್ರ ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ಹಾಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ದವಸ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರ ಒಂದು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ದಿನಾಂಕ: ೭-೧೨-೨೦೨೪ ರಿಂದ ೨೪-೩-೨೦೨೫ರ ವಿಶ್ವ ಕ್ಷಯರೋಗ ದಿನಾಚರಣೆವರೆಗೆ “ನೂರು ದಿನದ ಕ್ಷಯರೋಗ ಜನ ಜಾಗೃತಿ ಹಾಗೂ ತಪಾಸಣೆ ಯೋಜನೆ” ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೂಕಿನ ಕ್ಷಯರೋಗ ನಿಯಂತ್ರಣ ಘಟಕದ ಕೇಂದ್ರ ಸ್ಥಾನವಾದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಸದರಿ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎ.ಎಸ್.ಎಲ್.ಬಾಬು ರವರು ಆಗಮಿಸಿದ್ದರು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಕ್ಷಯರೋಗ ತಜ್ಞರಾದ ಹಿರಿಯ ವೈದ್ಯೆ ಡಾ.ಚಂದ್ರಕಲಾ, ಆಡಳಿತಾಧಿಕಾರಿಗಳಾದ ಜಯಶ್ರೀ ಕೃಷ್ಣರಾವ್, ಕ್ಷಯರೋಗ ಯೋಜನೆಯ ಮೇಲ್ವಿಚಾರಕಾರದ ಜಿ.ಎಸ್.ತಿಪ್ಪೇಸ್ವಾಮಿ, ಎನ್.ಅಶ್ವತ್ಥನಾರಾಯಣ, ಪವನ್ ಕುಮಾರ್ ಹಾಗೂ ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಶ್ರೀ ಶ್ರೀನಿವಾಸ್ ರವರು ಉಪಸ್ಥಿತರಿದ್ದರು. ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸ್ವಾಮೀಜಿಯವರು, ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಕ್ಷಯರೋಗ ನಿವಾರಣಾ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಿಯೋ ಜಿಸಲ್ಪಟ್ಟಿದ್ದು ಈವರೆವಿಗೆ ೧೫೧೧೬ ಕ್ಷಯರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಔಷಧೋಪಚಾರ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿರು ವುದು ದೇಶದಲ್ಲಿಯೇ ಗ್ರಾಮಾಂತರ ವಿಭಾಗದಲ್ಲಿ ಒಂದು ದಾಖಲೆ ಎನ್ನಬಹುದು.
ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕ್ಷಯರೋ ಗಿಗಳಿಗೆ ಆಹಾರ ಮತ್ತು ಧಾನ್ಯ ವಿತರಣಾ ಯೋಜನೆ ಯನ್ನು ಡೇಮಿಯನ್ ಫೌಂಡೇಷನ್ ಜೊತೆಯಲ್ಲಿ ಆರಂಭಿಸಿದ ಪ್ರಪ್ರಥಮ ಸಂಸ್ಥೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ. ಈ ಯೋಜನೆಯ ಫಲಿತಾಂಶವನ್ನು ಕಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೂಜ್ಯ ಸ್ವಾಮೀಜಿಯವರು ಆರಂಭಿಸಿದ ಈ ಯೋಜನೆಯನ್ನು ಇಡೀ ರಾಷ್ಟ್ರದ ಲ್ಲಿಯೇ ಪರಿಚಯಿಸಿದನ್ನು ಪೂಜ್ಯ ಸ್ವಾಮೀಜಿಯ ವರು ವಿವರಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಕ್ಷಯ ರೋಗಿಗಳು, ಕುಷ್ಠ ರೋಗಿಗಳು, ಹೆಚ್.ಐ.ವಿ./ಏಡ್ಸ್ ಹಾಗೂ ಅಂಗವಿಕಲರುಗಳಿಗೆ ಪ್ರತೀ ವಾರ ದವಸ ಧಾನ್ಯವನ್ನು ಇಂದಿಗೂ ನೀಡುತ್ತಿರುವುದು ಈ ಸಂಸ್ಥೆಯ ಮತ್ತೊಂದು ವಿಶೇಷತೆ ಎಂದು ಬಣ್ಣಿಸಿದರು. ಹಾಗೆಯೇ ಈ ರೋಗಕ್ಕೆ ತುತ್ತಾದವರು ಭಯಪಡದೆ ರೋಗದ ಎಲ್ಲ ವಿಚಾರಗಳನ್ನು ಅರಿತು ಅದೇ ತೆರನಾಗಿ ವ್ಯವಹರಿಸಿದ್ದಲ್ಲಿ ದೇಶವ ನ್ನು ಕ್ಷಯರೋಗ ಮುಕ್ತವನ್ನಾಗಿಸುವ ದಿನಗಳು ಹತ್ತಿರವಾಗುತ್ತಿವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತ್ಯಮೂಲ್ಯ ಸಹಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರೋತ್ಸಾಹವೇ ತಮ್ಮ ಈ ಯೋಜನೆಗೆ ಸಹಕಾರಿ ಎಂದು ತಿಳಿಸಿ ದರು. ತದನಂತರ ಮಾತನಾಡಿದ ಪಾವಗಡ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎಸ್.ಎಸ್.ಎಲ್.ಬಾಬು ರವರು ಈ ರೋಗದ ಚಿನ್ಹೆಗ ಳನ್ನು ತಿಳಿದಾಕ್ಷಣ ಆಸ್ಪತ್ರೆಗೆ ಧಾವಿಸುವಂತೆ ಸೂಚಿಸಿದರು.
ಸರ್ಕಾರದ ವತಿಯಿಂದ ಎಲ್ಲ ಔಷಧೋಪ ಚಾರಗಳು ಉಚಿತವಾಗಿ ದೊರೆಯುತ್ತಿರುವುದನ್ನು ತಿಳಿಸಿದರು. ಭಯಪಡದೆ ಈ ರೋಗವನ್ನು ಮೆಟ್ಟಿ ನಿಲ್ಲುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ಮೂರು ದಶಕಗಳಿಂದಲೂ ಮಿಗಿಲಾಗಿ ಕ್ಷಯರೋಗ ನಿಯಂತ್ರಣ ಯೋಜನೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದು ನಿಜಕ್ಕೂ ಈ ಭಾಗದ ಜನರು, ತುಮಕೂರು ಜಿಲ್ಲೆ ಮತ್ತು ರಾಜ್ಯ ಮೆಚ್ಚುವಂತಹ ಅದ್ಭುತ ಕೆಲಸವನ್ನು ನಡೆಸುತ್ತಿರುವುದನ್ನು ಮುಕ್ತ ಕಂಠದಿAದ ಶ್ಲಾಘಿಸಿದರು. ತದನಂತರ ಮಾತನಾಡಿದ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ರವರು ಈ ಪ್ರೋಟೀನ್‍ಯುಕ್ತ ಧಾನ್ಯಗಳು, ತೊಗರಿಬೇಳೆ, ಕಡಲೆಬೀಜ, ಕಡಲೆಕಾಯಿ ಎಣ್ಣೆ, ಬೆಲ್ಲ, ಹೆಸರು ಬೇಳೆ, ಗೋಧಿ ಹಿಟ್ಟು ಹಾಗೂ ಸಾಯಿಶ್ಯೂರ್ ಪ್ರೋಟೀನ್ ಪೌಡರ್ ಮುಂತಾದವುಗಳನ್ನು ತಾ ವೇ ಸ್ವೀಕರಿಸಿ ಸದೃಢರಾಗಿ ಈ ರೋಗವ್ನನ್ನು ದೂರ ಮಾಡುವಂತೆ ಪ್ರಯತ್ನಿಸಬೇಕೆಂದು ಕರೆಯಿ ತ್ತರು.
ಇದೇ ಸಂದರ್ಭದಲ್ಲಿ ಬಂದ ನೂರಕ್ಕೂ ಮಿಗಿಲಾದ ಕ್ಷಯ ರೋಗಿಗಳಿಗೆ ಭೋಜನವನ್ನು ಏರ್ಪಡಿಸಿದ್ದು ಎಲ್ಲರೂ ಅತ್ಯಂತ ಸಂತೋಷದಿAದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ನಡೆಸುತ್ತಿರುವ ಸೇವಾ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ಸೂಚಿಸಿ ಪೂಜ್ಯ ಸ್ವಾಮೀಜಿಯವರಿಗೆ ಗೌರವವನ್ನು ಸಲ್ಲಿಸಿದರು.

(Visited 1 times, 1 visits today)
pavagada tumkur
Previous Articleಮಾದಕ ದ್ರವ್ಯ ವ್ಯಸನಿಗಳಲ್ಲಿ ವಿದ್ಯಾರ್ಥಿಗಳೇ ಹೆಚ್ಚು: ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆತಂಕ
Next Article ಶಿರಾ ನಗರದ ಕಲ್ಲು ಕೋಟೆಯ ಸ್ಲಂ ಬೋರ್ಡ್, ಆಶ್ರಯ ಬಡಾವಣೆಗೆ ಡೀಸಿ ಭೇಟಿ
News Desk Benkiyabale

Related Posts

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm news

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news
ತಾಜಾ ಸುದ್ಧಿಗಳು
news

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm
news

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
Our Youtube Channel
Our Picks

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

By News Desk BenkiyabaleOctober 17, 2026 6:00 pm

ತುಮಕೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಭಾಷೆಯ ಮೇಲಿನ ಹಿಡಿತ ಮತ್ತು ಪರಿಣಾಮಕಾರಿ ಬರವಣಿಗೆಯ ಕೌಶಲ ಅತ್ಯಂತ ಅಗತ್ಯ. ನಿರಂತರ ಅಧ್ಯಯನ,…

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.