BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ
  • ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ
  • ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ
  • ಪುಟ್ಟ ಮನೆ ಬೆಂಕಿಗೆ ಆಹುತಿ
  • ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ
  • ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ
  • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಿಜೆಪಿ ಶಾಸಕ ಬಿ.ಸುರೇಶಗೌಡ ಆಕ್ರೋಶ ಹೋರಾಟದ ಎಚ್ಚರಿಕೆ
ತುಮಕೂರು

ಬಿಜೆಪಿ ಶಾಸಕ ಬಿ.ಸುರೇಶಗೌಡ ಆಕ್ರೋಶ ಹೋರಾಟದ ಎಚ್ಚರಿಕೆ

ಯುಗಾದಿ ಹಬ್ಬಕ್ಕೆ ಬೆಲ್ಲದ ಬದಲು ಬೇವಿನ ಉಡುಗೊರೆ ಕೊಟ್ಟ ರಾಜ್ಯ ರ‍್ಕಾರ
By News Desk BenkiyabaleUpdated:March 29, 2025 4:43 pm

ತುಮಕೂರು : ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ರ‍್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಟೀಕಿಸಿದ್ದಾರೆ.
ಯುಗಾದಿ ಬೇವು ಬೆಲ್ಲದ ಹಬ್ಬ. ಆದರೆ, ಈ ರ‍್ಕಾರ ರಾಜ್ಯದ ಜನರಿಗೆ ಕೇವಲ ಬೇವು ಕೊಟ್ಟು ಕಹಿ ತಿಂದು ಹಬ್ಬ ಆಚರಿಸಿ ಎಂದು ಹೇಳಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಗಾದಿಯ ಮರುದಿನವಾದ ಏಪ್ರಿಲ್‌ ೧ ರಿಂದ ಹಾಲಿನ ಬೆಲೆ ಏರಿಕೆ ಜಾರಿಗೆ ಬರಲಿದೆ. ಜನರನ್ನು ಹೇಗೆ ಸಿದ್ದರಾಮಯ್ಯ ರ‍್ಕಾರ ಏಪ್ರಿಲ್‌ ೧ ರ ಮರ‍್ಖರ ದಿನವೇ ಮರ‍್ಖರನ್ನಾಗಿ ಮಾಡುತ್ತಿದೆ ಎನ್ನುವುದಕ್ಕೆ ಇದು ನಿರ‍್ಶನ.
ಈ ರ‍್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ರ‍್ಷ ಆಗಿಲ್ಲ. ಇದರೊಳಗೆ ಪೆಟ್ರೋಲ್‌ ಮತ್ತು ಡೀಸಲ್‌ ದರ ಏರಿಸಿದರು, ವಿದ್ಯುತ್‌ ದರ ಎರಡು ಸಾರಿ ಏರಿಸಿದರು. ಈಗ ಒಂದು ಯೂನಿಟ್‌ ವಿದ್ಯುತ್‌ಗೆ ೩೬ ಪೈಸೆ ಹೆಚ್ಚಿಗೆ ಕೊಡಬೇಕಾಗಿದೆ. ಹಾಲಿನ ದರ ಮೂರು ಸಾರಿ ಏರಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಕಾಸಾಹೇಬನಿಗೆ ಉಚಿತ ವಿದ್ಯುತ್‌ ಕೊಟ್ಟ ಫಲವನ್ನು ನಮ್ಮ ಊರಿನ ಹಳ್ಳಿಯ ಬಡ ಜನರು, ಮಧ್ಯಮ ರ‍್ಗದ ಜನರು ಅನುಭವಿಸುತ್ತಿದ್ದಾರೆ. ಇನ್ನೂ ಜನರು ಕಷ್ಟದ ಕಾಲವನ್ನು ಎದುರಿಸಬೇಕಾಗಿ ಬರುತ್ತದೆ. ಇದು ಅತ್ಯಂತ seಟಿseಟess ರ‍್ಕಾರ.
ಇಡೀ ದೇಶಕ್ಕೆ ಸಿದ್ದರಾಮಯ್ಯನವರು ಚುನಾವಣೆ ಗೆಲ್ಲುವ ಒಂದು ತಪ್ಪು ಮಾದರಿ ಹಾಕಿಕೊಟ್ಟರು. ಅವರು ಇತಿಹಾಸದಲ್ಲಿ ಉಳಿಯುವುದು ಒಂದು ಸಮೃದ್ಧ ರಾಜ್ಯವನ್ನು ಹೇಗೆ ದಿವಾಳಿ ಮಾಡಬೇಕು ಎಂಬ ʻಸಿದ್ದರಾಮಯ್ಯ ಎಕನಾಮಿಕ್ಸ್‌ʼಗಾಗಿ. ಅವರ ಸುತ್ತಮುತ್ತ ಇರುವ ಹೊಗಳುಭಟರು ಸಿದ್ದರಾಮಯ್ಯನವರದೇ ಒಂದು ದೊಡ್ಡ ರ‍್ಥಿಕ ಸಿದ್ದಾಂತ ಎಂದೆಲ್ಲ ಹೊಗಳಿದರು. ಯಾವನೋ ತಲೆಮಾಸದ ಆಕ್ಸ್‌ರ‍್ಡ್‌ನಲ್ಲಿ ಇರುವ ಒಬ್ಬ ಜೋಕರ್‌ ಕೂಡ ಇದನ್ನು ಹೊಗಳಿದ. ಈಗ ಅವರು ಏನು ಹೇಳುತ್ತಾರೆ?
ಸಿದ್ದರಾಮಯ್ಯ ಯಾವ ಬೆಲೆ ಏರಿಕೆಯನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇನ್ನೂ ಬಜೆಟ್‌ ಅಂಗೀಕಾರವಾಗಿ ಒಂದು ವಾರ ಕಳೆಯುವುದರ ಒಳಗೆ ಹಾಲಿನ ದರ ಏರಿಸಿದ್ದಾರೆ.
ಮೆಟ್ರೊ ಪ್ರಯಾಣ ದರ ಶೇಕಡ ೪೫ ರಷ್ಟು ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ರ‍್ಗದ ಜನರಿಗೆ ಒಂದು ಲೀಟರ್‌ ಹಾಲಿಗೆ ೪ ರೂಪಾಯಿ ದರ ಏರಿಕೆ ದೊಡ್ಡ ಹೊರೆ. ಅವರ ವರಮಾನದಲ್ಲಿ ಇದೇ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದಿಲ್ಲ. ಹೀಗೆ ಸತತವಾಗಿ ಬೆಲೆ ಏರಿಕೆ ಮಾಡುವುದನ್ನು ನೋಡಿದರೆ ಇದಕ್ಕಿಂತ ಜನವಿರೋಧಿ ರ‍್ಕಾರ ಇನ್ನೊಂದು ಇರಲಾರದು ಎಂದು ಅನಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಮತ್ತು ವಿದ್ಯುತ್‌ ಬೆಲೆಯ ಮೇಲೆಯೇ ಇಡೀ ರ‍್ಥಿಕತೆ ಅವಲಂಬಿಸಿರುತ್ತದೆ. ಬಜೆಟ್‌ನಲ್ಲಿ ಬೆಲೆ ಏರಿಕೆ ಪ್ರಸ್ತಾಪ ಮಾಡಿದ್ದರೆ ನಾವು ಬಜೆಟ್‌ ಮೇಲೆ ಭಾಷಣ ಮಾಡುವಾಗ ರ‍್ಕಾರವನ್ಮು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೆವು. ಮಾಧ್ಯಮಗಳಿಂದಲೂ ಮುಖ್ಯಮಂತ್ರಿಗಳು ಟೀಕೆ ಎದುರಿಸಬೇಕಾಗುತ್ತಿತ್ತು. ಅದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಅಂಕಿ ಅಂಶಗಳ ಮಾಯಾಜಾಲದಲ್ಲಿ ಜನರನ್ನು ಮುಖ್ಯಮಂತ್ರಿಗಳು ಮರುಳು ಮಾಡಿದರು. ಅಭಿವೃದ್ಧಿಯ ಒಂದು ಕೇಂದ್ರ ಬಿಂದುವೇ ಇಲ್ಲದಂಥ ಬಜೆಟ್‌ ಮಂಡಿಸಿ ಈಗ ಜನರ ಜೀವನದ ಜತೆ ಚಲ್ಲಾಟ ಆಡುತ್ತಿದ್ದಾರೆ.
೪ ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ೫೦,೦೦೦ ಕೋಟಿ ರೂಪಾಯಿಗಳ ಗ್ಯಾರಂಟಿಗಳ ವೆಚ್ಚವನ್ನು ನಿಭಾಯಿಸಲು ಆಗುತ್ತಿಲ್ಲ. ಈ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೊರೆ ಆಗಿಲ್ಲ ಎನ್ನುವುದಾದರೆ ಆ ಮೊತ್ತವನ್ನು ಅವರು ಸಕಾಲದಲ್ಲಿ ಬಿಡುಗಡೆ ಮಾಡಬೇಕಿತ್ತು. ಗೃಹಲಕ್ಷ್ಮೀ ಯೋಜನೆಯ ಹಣ ಈ ತಿಂಗಳ ೩೧ ರ ನಂತರ ಪಾವತಿ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ. ಇದು ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದನ್ನೇ ತೋರಿಸುತ್ತದೆ.
ಹಾಲಿನ ದರ ಏರಿಕೆ ಕುರಿತು ಪ್ರಶ್ನೆ ಮಾಡಿದರೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ನಮ್ಮ ಬಳಿ ನೊಟು ಮುದ್ರಿಸುವ ಯಂತ್ರ ಇದೆಯೇ ಎಂದು ಕೇಳುತ್ತಾರೆ. ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ನಿಮಗೆ ಈ ವಿಚಾರ ಗೊತ್ತಿರಲಿಲ್ಲವೇ? ಆಗ ನೀವು ಕೇವಲ ಅಧಿಕಾರಕ್ಕೆ ಬರಬೇಕು ಎಂಬ ಒಂದು ಕಾರಣಕ್ಕಾಗಿ ಮಾತ್ರ ನಾವು ಬೆಲೆ ಏರಿಸುವುದಿಲ್ಲ ಎಂದು ಹೇಳಿದಿರಿ. ಈಗ ನೋಡಿದರೆ ಅತ್ತ ಗ್ಯಾರಂಟಿ ಯೋಜನೆಗಳೂ ಸರ‍್ಪಕವಾಗಿ ಜಾರಿಯಾಗುತ್ತಿಲ್ಲ. ಇತ್ತ ರಾಜ್ಯದ ಭೌತಿಕ ಅಭಿವೃದ್ಧಿಯೂ ಆಗುತ್ತಿಲ್ಲ. ಕೇವಲ ಬೆಲೆ ಏರಿಕೆ ಮಾತ್ರ ಆಗುತ್ತಿದೆ.
ಈ ರ‍್ಕಾರದ ದೊಡ್ಡ ಸಾಧನೆ ಎಂದರೆ ತಾನು ಮರುಪಾವತಿ ಮಾಡಲು ಆಗದ ಸಾಲದ ಹೊರೆಯನ್ನು ಜನರ ಮೇಲೆ ಹೇರಿರುವುದು ಬಿಟ್ಟರೆ ಮತ್ತೆ ಯಾವ ಸಾಧನೆಯೂ ಇಲ್ಲ. ಯಾವುದಾದರೂ ಒಂದು ಸಾಧನೆಯನ್ನು ಮಾಧ್ಯಮದ ಗೆಳೆಯರು ಕಂಡಿದ್ದರೆ ನಾವೆಲ್ಲರೂ ಕೂಡಿ ಹೋಗಿ ನೋಡಿ ಬರೋಣ ಎಂದು ಸುರೇಶಗೌಡರು ಕಿಡಿ ಕಾರಿದ್ದಾರೆ.
ಜನರಿಗೆ ಅತ್ಯಂತ ಅಗತ್ಯವಾದ ಮತ್ತು ಕನಿಷ್ಠವಾದ ಆರೋಗ್ಯ ಸೇವೆ ಕೊಡುವ ಯೋಗ್ಯತೆ ಈ ರ‍್ಕಾರಕ್ಕೆ ಇಲ್ಲ. ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ, ಆಡಳಿತ ಯಂತ್ರ ಶಿಥಿಲವಾಗಿದೆ. ಆಂತರಿಕ ಬಿಕ್ಕಟ್ಟು ಮೇರೆ ಮೀರಿದೆ. ಕಾಂಗ್ರೆಸ್‌ ಪಕ್ಷ ಮಾತು ಎತ್ತಿದರೆ ಹೈಕಮಾಂಡ್‌ ಎನ್ನುತ್ತದೆ. ಈಗ ಆ ಹೈಕಮಾಂಡ್‌ ಎಲ್ಲಿದೆ ಎಂದು ನಾವು ಕಂದೀಲು ಹಿಡಿದುಕೊಂಡು ನೋಡಬೇಕಾಗಿದೆ.
ಜನರ ಬಡತನವನ್ನು ಟಕಾ ಟಕ್‌ ನಿವಾರಿಸುವುದಾಗಿ ಹೇಳುತ್ತಿದ್ದ ರಾಹುಲ್‌ ಗಾಂಧಿ, ಅವರ ಸೋದರಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಗೆಯವರು ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಈ ಎಲ್ಲ ಬೆಲೆ ಏರಿಕೆ ಕೈ ಬಿಡಬೇಕು ಎಂದು ರಾಜ್ಯ ರ‍್ಕಾರಕ್ಕೆ ತಾಕೀತು ಮಾಡಬೇಕು. ಏಕೆಂದರೆ ಈ ಮೂವರು ಮಹಾನುಭಾವರು ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದರು. ಬೆಲೆ ಏರಿಕೆ ಕೈ ಬಿಡದೇ ಇದ್ದರೆ ರಾಜ್ಯ ಬಿಜೆಪಿ ಮತ್ತು ಮಿತ್ರ ಪಕ್ಷ ಜೆ.ಡಿ. ಎಸ್‌ ವತಿಯಿಂದ ಯುಗಾದಿ ಹಬ್ಬ ಮುಗಿದ ಕೂಡಲೇ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

(Visited 1 times, 1 visits today)
Ambedkar BJP Congress Gubbi Koratagere madhugiri Mla Mla jyothiganesh tumkur
Previous Articleಹೂಳುತುಂಬಿ ಹೇಮಾವತಿ ನಾಲೆಯ ಬಹುತೇಕ ಕಡೆ ಹಾಳು
Next Article ರಂಜಾನ್ ಪ್ರಯಕ್ತ ಫುಡ್ ಕಿಟ್ ವಿತರಣೆ
News Desk Benkiyabale

Related Posts

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm news

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm Trending

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm news
ತಾಜಾ ಸುದ್ಧಿಗಳು
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm
Trending

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm
news

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm
ಇತರೆ ಸುದ್ಧಿಗಳು

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
Trending

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
news

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm
Our Youtube Channel
Our Picks

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

September 22, 2026 5:12 pm

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಲು ಆಗ್ರಹ

By News Desk BenkiyabaleSeptember 22, 2026 5:12 pm

ತುಮಕೂರು ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ…

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

September 22, 2026 5:09 pm

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.