BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ
  • ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?
  • ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ
  • ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ
  • ರಸ್ತೆ ಕಾಮಗಾರಿ ವಿಳಂಬ: ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ
  • ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ
  • ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಿ.ಎಸ್. ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ
ತುಮಕೂರು

ಜಿ.ಎಸ್. ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ

By News Desk BenkiyabaleUpdated:May 08, 2025 2:15 pm
ತುಮಕೂರು: ನಡೆ ನುಡಿಯಲ್ಲಿ ಒಂದಾಗಿದ್ದ ಜಿ.ಎಸ್.ಸಿದ್ದಲಿಂಗಯ್ಯನವರು ತ್ರಿಕರಣ ಶುದ್ಧಿ ಏನು ಅನ್ನುವುದನ್ನು ಅವರ ಬದುಕಿನಿಂದ ಕಲಿಯಬಹುದು. ಮಾತಿನಲ್ಲಾಗಲೀ, ನಡತೆಯಲ್ಲಾಗಲೀ ಎಂದೂ ಅಶೌಚಕ್ಕೆ ಆಸ್ಪದ ಕೊಟ್ಟವರಲ್ಲ. ಬಹಳ ವರ್ಷಗಳಿಂದ ಅವರು ಸ್ವತಂತ್ರವಾಗಿ ನಡೆಯಲಾರದ ಸ್ಥಿತಿಯಲ್ಲಿದ್ದವರು. ೯೫ ವರ್ಷಗಳ ಸಾರ್ಥಕ ಬದುಕನ್ನು ಸವೆಸಿದ ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಜಿ.ಎಸ್.ಸಿದ್ದಲಿಂಗಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಕಸಾಪ ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ ಮಧುಗಿರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೂ ಅವರಿಗೆ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪದವಿ ಒದಗಿ ಬರದೆ ಇದ್ದುದು ವಿಷಾದನೀಯ ಸಂಗತಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ ಜಿ.ಎಸ್.ಸಿದ್ದಲಿಂಗಯ್ಯನವರು ಸಿದ್ಧಗಂಗಾ ಮಠದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಅನೇಕ ದಿನಗಳ ಕಾಲ ಶೂನ್ಯ ಸಂಪಾದನೆ ಕೃತಿಯ ಉಪನ್ಯಾಸ ಮಾಡಿದ್ದನ್ನು ಸ್ಮರಿಸಿದರು.
ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸೃಜನಶೀಲ ಬರಹಗಾರರಾಗಿದ್ದ ಜಿ.ಎಸ್.ಸಿದ್ದಲಿಂಗಯ್ಯ ಉತ್ತಮ ಅಧ್ಯಾಪಕರಾಗಿದ್ದು ಕಾಲೇಜು ಅಧ್ಯಾಪಕರಾಗಿ ೩೦ ವರ್ಷಗಳ ಸೇವೆ ಸಲ್ಲಿಸಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ವಲಯದ ಯಾವುದೇ ಗುಂಪಿಗೆ ಸೇರಿದ ಅವರನ್ನು ಸಾಹಿತ್ಯ ಕ್ಷೇತ್ರದ ಒಂಟಿಸಲಗ ಎಂದೇ ಕರೆಯಲಾಗುತ್ತಿತ್ತು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪನವರು ಮಾತನಾಡಿ ನನ್ನ ಕಾಲೇಜು ಗುರುಗಳಾದ ಜಿ.ಎಸ್.ಸಿದ್ದಲಿಂಗಯ್ಯ ಶುದ್ಧಹಸ್ತರು. ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಸೇವೆ ಅನನ್ಯವಾದುದು. ಜಿಲ್ಲಾ ಕಸಾಪದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಸಾಹಿತ್ಯ ಪರಿಷತ್ತಿಗೆ ಗೂಳೂರು ಸಿದ್ಧವೀರಣ್ಣೊಡೆಯರ ಬಗ್ಗೆ ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಅವರು ನಮ್ಮ ಜಿಲ್ಲೆಯ ಬೆಳ್ಳಾವಿಯವರಾಗಿದ್ದು ಅವರ ಮರಣದಿಂದ ಸಾಹಿತ್ಯ ಕ್ಷೇತ್ರದ ವಿದ್ವತ್ತಿನ ಕೊಂಡಿ ಕಳಚಿದಂತಾಗಿದೆ ಎಂದರು.
ಸಭೆಯಲ್ಲಿ ಜಿ.ಹೆಚ್.ಮಹದೇವಪ್ಪ, ತೇಜಸ್ವಿ, ರಾಜಶೇಖರ್, ಅಬ್ಬಿನಹೊಳೆ ಸುರೇಶ್, ಮಿಮಿಕ್ರಿ ಈಶ್ವರಯ್ಯ, ನಟರಾಜ್ ಇನ್ನೂ ಮುಂತಾದವರಿದ್ದರು.
(Visited 1 times, 1 visits today)
tumkur
Previous Articleಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ
Next Article ನಿರಂತರ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯ
News Desk Benkiyabale

Related Posts

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm news

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm news
ತಾಜಾ ಸುದ್ಧಿಗಳು
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm
news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm
news

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm
news

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm
news

ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ

October 19, 2026 5:12 pm
news

ರಸ್ತೆ ಕಾಮಗಾರಿ ವಿಳಂಬ: ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ

October 19, 2026 5:11 pm
Our Youtube Channel
Our Picks

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm

ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ

October 19, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

By News Desk BenkiyabaleOctober 19, 2026 5:21 pm

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ.ಪಟ್ಟ ಡಣನಾಯಕನಪುರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ತಾಲೂಕು…

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.