ತುಮಕೂರು: ಕಲ್ಯಾಣದ ಕ್ರಾಂತಿಯ ನಂತರ ಹರಿದು, ಹಂಚಿ ಹೋಗಿದ್ದ ಶರಣರ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಮುದ್ರಿಸಿ, ಪ್ರಚುರ ಪಡಿಸುವ ಮೂಲಕ ಸಾಹಿತ್ಯದ ಅಮೂಲ್ಯ ಪ್ರಕಾರವೊಂದನ್ನು ಉಳಿಸಿ, ಬೆಳೆಸಿದ ಕೀರ್ತಿ ಫ.ಗು,ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ, ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್,ಬಸವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಓದಿದ್ದು ಕಾನೂನು ಪದವಿಯಾಗಿದ್ದರೂ, ವಚನ ಸಾಹಿತ್ಯದ ಪ್ರಚಾರಕ್ಕೆ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನುಭಾವರು ಎಂದರು.
ಡಾ.ಫ.ಗು. ಹಳಕಟ್ಟಿಯವರು ಸಂಗ್ರಹಿಸಿದ್ದ ವಚನ ಸಾಹಿತ್ಯವನ್ನು ಮುದ್ರಿಸಿಕೊಡಲು ಅಂದಿನ ಕ್ರೆöÊಸ್ತ ಮಿಷನರಿಗಳು ಹಿಂದೇಟು ಹಾಕಿದಾಗ, ತನ್ನ ಮನೆಯನ್ನೇ ಮಾರಿ, ಮುದ್ರಣಯಂತ್ರ ಖರೀದಿಸಿ, ವಚನ ಸಾಹಿತ್ಯದ ಜೊತೆಗೆ, ಹಲವು ಮಾಸ ಪತ್ರಿಕೆಗಳನ್ನು ಹೊರತಂದು, ಶರಣ ಸಾಹಿತ್ಯದ ಬೆಳವಣಿಗೆಗೆ ಕಾರಣರಾದರು. ಅಂತಹ ಮಹನೀಯರ ದಿನವನ್ನು ಸರಕಾರ ವಚನ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂಶೋಧಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ, ೧೮೮೦ ರಿಂದ ೧೯೬೪ರವರೆಗೆ ಸುಮಾರು ೮೪ ವರ್ಷಗಳ ಕಾಲ ಬದುಕಿದ್ದ ಡಾ.ಫ.ಗು.ಹಳಕಟ್ಟಿ ಅವರು, ಕಲ್ಯಾಣದಲ್ಲಿ ಇದುದ್ದು ಕೇವಲ ಐವತ್ತುಜನ ಶರಣರುಅಲ್ಲ, ಅವರ ಸಂಖ್ಯೆ ೨೫೦ ಎಂದು ತೋರಿಸಿಕೊಟ್ಟರಲ್ಲದೆ, ತಮ್ಮ ವಕೀಲ ವೃತ್ತಿಯ ನಡುವೆಯೂ ಊರೂರು ಅಲೆದು ಮೂಲೆ, ಮುಡಿಕೆಯಲ್ಲಿದ್ದ ೧೦೦೦ಕ್ಕೂ ಅಧಿಕ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅವುಗಳ ಬಗ್ಗೆ ಪರಾಮರ್ಶನೆ ನಡೆಸಿ, ಅರ್ಥದೊಂದಿಗೆ ಪ್ರಕಟಿಸುವ ಮೂಲಕ ಶ್ರೇಷ್ಟ ಸಾಹಿತ್ಯವೊಂದನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದವರು. ೧೯೦೪ರಲ್ಲಿ ಅವರು ಮೊದಲಿಗೆ ಸಂಗ್ರಹಿಸಿದ ವಚನ ಸಾಹಿತ್ಯ ಗಣ ಭಾ಼ಷಾರತ್ನ ಮಾಲಾ, ೧೯೨೩ ರಲ್ಲಿತಮ್ಮದೆ ಸ್ವಂತ ಮುದ್ರಣ ಸಂಸ್ಥೆಯಿAದ ವಚನಶಾಸ್ತç ಸಾರ ೧-೨-೩ ಸಂಪುಟಗಳನ್ನು ಹೊರತಂದಿದ್ದಲ್ಲದೆ, ಶಿವಾನುಭವ, ನವಕರ್ನಾಟಕ ಎಂಬ ಪತ್ರಿಕೆಗಳನ್ನು ಹೊರತಂದರು.ಅವರ ಶಿವಾನುಭವನ ಪತ್ರಿಕೆಯಲ್ಲಿ ನಮ್ಮ ಹಾಗಲವಾಡಿ ಪಾಳೇಗಾರರ ಬಗ್ಗೆ ಉಲ್ಲೇಖವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್ ಮಾತನಾಡಿ,ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಮುದ್ರಣಕ್ಕಾಗಿಇದ್ದ ಮನೆಯನ್ನು ಮಾರಾಟ ಮಾಡಿ, ಬದುಕಿನ ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದವರು. ನಾವೆಲ್ಲರೂ ವಚನಗಳನ್ನು ಬರೆಯಬೇಕೆಂದಿಲ್ಲ. ಇವರ ವಚನಗಳನ್ನು ಓದಿ, ಅರ್ಥೈಸಿಕೊಂಡು ಅದರಂತೆ ನಡೆದರೆ ನಿಜಕ್ಕೂಜನ್ಮ ಸಾರ್ಥಕವೆನಿಸುತ್ತದೆ. ಲಭ್ಯವಿರುವ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು.
ವೇದಿಕೆಯಲ್ಲಿ ಸನ್ಮಾನಕ್ಕೆ ಭಾಜನರಾದ ಸಂಶೋಧಕ ಡಾ.ಬಿ. ನಂಜುAಡಸ್ವಾಮಿ, ಶಂಕರಗೌಡಮ. ಬಿರಾದರ ಅವರುಗಳು ಸಮಾರಂಭ ಕುರಿತು ಮಾತನಾಡಿದರು. ವಚನ ಸಾಹಿತ್ಯ ಕುರಿತು ಸಂಶೋಧನೆ ನಡೆಸಿ, ಪಿಹೆಚ್.ಡಿ ಪದವಿ ಪಡೆದ ನಿವೃತ್ತ ಇಂಜಿನಿಯರ್ ಗಂಗಾಧರಕೊಡ್ಲಿ ಅವರನ್ನು ಅಭಿನಂದಿಸಲಾಯಿತು. ರುದ್ರಮೂರ್ತಿಎಲೆರಾಮಪುಂ ಮತ್ತುತಂಡದವರಿAದ ವಚನ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸುರೇಶಕುಮಾರ್,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಜಿ.ಸಿದ್ದರಾಮಯ್ಯ, ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ದಗಂಗಮ್ಮ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಾನಗರಪಾಲಿಕೆ ಘಟಕದ ಅಧ್ಯಕ್ಷ ಕೆ.ಎಸ್.ಉಮಾಮಹೇಶ್,ಕದಳಿ ಮಹಿಳಾ ವೇದಿಕೆಯಅ ಧ್ಯಕ್ಷ ಶಿವಗಂಗಮ್ಮ, ಅಕ್ಕನಾಗಮ್ಮ, ಮೈತ್ರಿ ಮಹಿಳಾ ಸಂಘದ ಶೈಲಾ ಶಿವಕುಮಾರ್, ಚಿಕ್ಕಬೆಳ್ಳಾವಿ ಶಿವಕುಮಾರ್,ಸಹಕಾರ್ಯದರ್ಶಿ ಬಿ.ರಾಜಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.