ಪಾವಗಡ: ನಿಡಗಲ್ಲು ಹೋಬಳಿಯ ಕೋಟಗುಡ್ಡ ಗ್ರಾಮದಲ್ಲಿ ಶ್ರೀ ಮರ‍್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಮುಖ್ಯ ಬೀದಿಗಳಲ್ಲಿ ಭಕ್ತರು ಭಜನೆ, ನಾದಸ್ವರ, ಧ್ವಜಮೆರವಣಿಗೆಗಳೊಂದಿಗೆ ಉತ್ಸವದ ವಾತಾವರಣ ನರ‍್ಮಿಸಿದರು. ಕರ‍್ಯಕ್ರಮಕ್ಕೆ ಚಾಲನೆ ನೀಡಿದ ಅಖಿಲ ರ‍್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀ ಪಾಳೇಗಾರ ಲೋಕೇಶ್ ಅವರು ಮಾತನಾಡಿ, “ಜಗತ್ತಿಗೆ ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯರನ್ನು ಪರಿಚಯಿಸಿದ ಶ್ರೇಷ್ಠತೆ ಮರ‍್ಷಿ ವಾಲ್ಮೀಕಿಯವರದು. ಅವರು ಬರೆದ ರಾಮಾಯಣವು ಕೇವಲ ಕಥೆ ಅಲ್ಲ — ಅದು ಸತ್ಯ, ರ‍್ಮ, ನೈತಿಕತೆ ಮತ್ತು ಸಮಾನತೆಯ ಪಾಠ ನೀಡುವ ಶಾಶ್ವತ ಗ್ರಂಥ. ಸರ‍್ಯ ಚಂದ್ರ ಇರುವವರೆಗೂ ವಾಲ್ಮೀಕಿಯವರ ಕೃತಿ ಅಮರವಾಗಿರುತ್ತದೆ,” ಎಂದು ಹೇಳಿದರು. ಕರ‍್ಯಕ್ರಮದಲ್ಲಿ ಕೆಎಂಎಫ್ ನರ‍್ದೇಶಕ ಅಂಜಪ್ಪ, ಮುಖಂಡರಾದ ರಂಗಪ್ಪ, ಹನುಮಂತರಾಯಪ್ಪ, ಮಾಜಿ ಅಧ್ಯಕ್ಷ ರಾಜು, ವ್ಯವಸಾಯ ಸೇವಾ ಸಹಕಾರ ಸಂಘದ ಕರ‍್ಯರ‍್ಶಿ ರಂಗನಾಥ, ಹಾಲು ಉತ್ಪಾದಕರ ಸಹಕಾರ ಸಂಘದ ಕರ‍್ಯರ‍್ಶಿ ರಮೇಶ್, ಗ್ರಾಮದ ಯುವ ಮುಖಂಡ ವೆಂಕಟೇಶ್, ಅಖಿಲ ರ‍್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ಓಂಕಾರ್ ನಾಯಕ, ಕರ‍್ಯರ‍್ಶಿ ಭಾಸ್ಕರ್ ನಾಯಕ, ನಿವೃತ್ತ ಸೈನಿಕ ಅನಂತಯ್ಯ ಮುಂತಾದವರು ಭಾಗವಹಿಸಿದ್ದರು.
(Visited 1 times, 1 visits today)