
ತುಮಕೂರು: ಅಸಂಘಟಿತ ಕಾರ್ಮಿರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರವಹಿಸುವ ಶ್ರಮಜೀವಿಗಳಾದ ಎಪಿಎಂಸಿ, ಮಿಲ್-ಗೋಡೌನ್-ವೇರಹೌಸ್, ನಗರ ಗ್ರಾಮೀಣ ಬಜಾರ, ರೈಲ್ವೆ ಸ್ಟೇಷನ್, ಬಂದರುಗಳಲ್ಲಿ ಲೋಡಿಂಗ್ ಅನ್‌ಲೋಡಿಂಗ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರ ಬದುಕಿನ ಪ್ರಮುಖ ಪ್ರಶ್ನೆಗಳಿಗಾಗಿ, ಪ್ರಮುಖ ಬೇಡಿಕೆಗಳಿಗಾಗಿ ಒತ್ತಾಯಿಸಿ ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಎದರು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್(ಸಿ.ಐ.ಟಿ.ಯು) ಪ್ರತಿಭಟನೆ ನಡೆಸಿ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನಿಡಲಾಯಿತು.
ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿ0ದ ಅಂಬೇಡ್ಕರ ಸಹಾಯ ಹಸ್ತ ಸ್ಮಾರ್ಟ ಪಡೆದ ಹಮಾಲಿ ಕಾರ್ಮಿಕರು ಸೇರಿದಂತೆ ೮೫ಕ್ಕೂ ಹೆಚ್ಚು ವಲಯದ ಅಸಂಘಟಿತ ಕಾರ್ಮಿಕರಿಗೆ ಕೇವಲ ಅಪಘಾತ ಸಂಬ0ಧಿಸಿದ ಕೆಲ ಪರಿಹಾರ ನೀಡುವ ಯೋಜನೆಗಳನ್ನು ಜಾರಿಮಾಡಲಾಗುತ್ತಿದೆ ಆ ದರೇ ಸರಕಾರ ನಿರ್ಧಿಷ್ಟವಾಗಿ ಯಾವುದೇ ಹಣಕಾಸಿನ ನೇರವು ನೀಡಿಲ್ಲ. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬ0ಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ-೨೦೨೪ರ ಅಡಿ ರಚಿಸಲಾಗುತ್ತಿರುವ ಮಂಡಳಿಯಿ0ದ ಸಾರಿಗೆ ಸಂಬAಧಿತ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರನ್ನು ಒಳಗೊಂಡು ವಿವಿದ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಕೆಲ ಸೌಲಭ್ಯಗಳನ್ನು ಘೋಷಿಸಲಾಗಿರುವುದು ಸ್ವಾಗತಾರ್ಹವಾಗಿದೆ. ಈ ಮಂಡಳಿಯಡಿ ಹಮಾಲಿ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಬೇಕು. ಒಟ್ಟಾರೇ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಹಣಕಾಸು ಸಂಪನ್ಮೂಲಗಳನ್ನು ಕ್ರೂಢಿಕರಿಸುವ ಯೋಜನೆಯನ್ನು ರೂಪಿಸಿ ಸಮಗ್ರ ಸಾಮಾಜಿಕ ಭದ್ರತೆಯನ್ನು ನೀಡಬೇಕು ಕರ್ನಾಟಕ ಬಜೆಟ್ ನಲ್ಲಿ ಹಮಾಲಿ ಕಲ್ಯಾಣ ಮಂಡಳಿ ರಚನೆಗೆ ೫೦೦ ಕೋಟಿ ಮೀಸಲಿಡಲು ಹಮಾಲಿ ಕಾರ್ಮಿಕ ಸಂಘಟನೆಯ ನಾಗರಾಜು ಸರ್ಕಾರವನ್ನು ಒತ್ತಾಯಿಸಿದರು.
ರವಿಚಂದ್ರ ಮತನಾಡಿ ಎಪಿಎಂಸಿಯಲ್ಲಿ ಶ್ರಮಿಕರ ಪರಿಹಾರದಡಿ ಮರಣ ಪರಿಹಾರ ರೂ. ೫ ಲಕ್ಷ ರೂ ನೀಡಲು ತೀರ್ಮಾನಿಸಲಾಗಿದ್ದು ಸ್ವಾಗತಾರ್ಹವಾಗಿದೆ. ಎಪಿಎಂಸಿಯಲ್ಲಿ ನಿವೃತ್ತರಾಗುವವರಿಗೆ ಕನಿಷ್ಟ ರೂ. ೦೧ ಲಕ್ಷ ನಿವೃತ್ತಿ ಪರಿಹಾರ ಅಥವಾ ಇಡಿಗಂಟು ನೀಡಿಬೇಕು. ಕೇಂದ್ರ ಸರಕಾರ ಇ-ಶ್ರಮ ಕಾರ್ಡ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕೆಂದರು.
ಮ0ಡಿಪೇಟೆ ಹಮಾಲಿ ಕಾಮಿಕ ಮುಖಂಡ ರಾಬಿನಸನ್ಸ್ ಮತನಾಡಿ ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ, ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಬದುಕಿರುವಾಗ ಸಹಾಯವಾಗುವಂತ ಸಾಮಾಜಿಕ ಭದ್ರತಾ ಸೌಲಭ್ಯಗಳ ನೀಡಬೇಕು. ಈ ಹಿನ್ನಲೆಯಲ್ಲಿ ಸಹಜ ಮರಣಕ್ಕೂ ಪರಿಹಾರ, ಈಗಾಗಲೇ ಸರಕಾರದ ಮುಂದಿರುವ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ, ಪಿಂಚಣಿ ಯೋಜನೆ ಹಾಗೂ ವಸತಿ ಯೋಜನೆಗಳನ್ನು ಜಾರಿಮಾಡುವುದು ಅಗತ್ಯವಾಗಿದೆ ಜೊತೆಗೆ ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ ಕೇಂದ್ರ ಸರಕಾರದ ವಿವಿಧ ವಸತಿ ಯೋಜನೆಯನ್ನು ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು.
ಎನ್.ಕೆ.ಸುಬ್ರಮಣ್ಯ ಮತನಾಡಿ ರಾಜ್ಯದ ಲೋಡಿಂಗ್ ಅನ್‌ಲೋಡಿಂಗ್ (ಹಮಾಲಿ) ಕಾರ್ಮಿಕರಿಗೆ ಮಹಾರಾಷ್ಟಾ, ಕೇರಳ ಮಾದರಿಯಲ್ಲಿ ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ “ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ” (ಪಶ್ಚಿಮ ಬಂಗಾಲ ಮಾದರಿ) ಜಾರಿಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆಯನ್ನು ಜಾರಿಮಾಡಬೇಕು.ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ “ಕಾಯಕ ನಿಧಿ” ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಸರಕಾರದಿಂದ ಹಾಗೂ ಹಿಂದಿನAತೆ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರೆಸಬೇಕು ಹಾಗೂ ೬೦ ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಟ ರೂ. ೧,೦೦.೦೦೦-೦೦ (ಒಂದು ಲಕ್ಷ) ನಿವೃತ್ತಿ ಪರಿಹಾರಅಥವಾ ಇಡಿಗಂಟು ನೀಡಬೇಕು. ಪ್ರತಿವರ್ಷ ೨ ಜೋತೆ ಸಮವಸ್ತç ನೀಡಬೇಕೆಂದರು. ಸಿದ್ದರಾಜು ಮತನಾಡಿ ಮಿಲ್-ಗೋಡೌನ್-ವೇರಹೌಸ್‌ಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳು ಜಾರಿಯಾಗುವಂತೆ ಕ್ರಮವಹಿಸಬೇಕು. ಸರಕಾರ ಲೋಡಿಂಗ್ ಅನ್‌ಲೋಡಿಂಗ್ ಉದ್ಯಿಮೆಗೆ ಕನಿಷ್ಟ ವೇತನ ಜಾರಿಮಾಡಿ ಹಮಾಲಿ ಕೂಲಿ ದರಗಳನ್ನು ನಿಗಧಿಗೊಳಿಸಲಾಗಿದ್ದು ಎಲ್ಲಾ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಯಾಗುವಂತೆ ಮುತವರ್ಜಿವಹಿಸಬೇಕು. ಕೂಡಲೇ ಕನಿಷ್ಟ ವೇತನ ಪರಿಷ್ಕರಣೆಯಾಗಬೇಕೆಂದು ಸರ್ಕಾರವನ್ನು ಒತ್ತಯಿಸಿದರು.





