
ಪಾವಗಡ: ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಯೋಜನೆಯನ್ನು ಪಿ.ಎಂ.ಸ್ವ ನಿಧಿ ಯೋಜನೆ ಅಡಿಯಲ್ಲಿ ಹಂತ ಹಂತವಾಗಿ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ತುಮಕೂರಿನ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ದೊಡ್ಡ ಆವಲಪ್ಪ ತಿಳಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಗಳು ಸಹ ಕಾರ್ಮಿಕ ಇಲಾಖೆ ಯಲ್ಲಿ ನೊಂದಾಯಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಬದ್ರೆಗೌಡ ಮಾತನಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಮಿಕ ಇಲಾಖೆಯಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ನೋಂದಾಯಿಸಿ ಕೊಳ್ಳಲಾಗುತ್ತಿದ್ದು, ಮರಣ ಅಪಘಾತ ಅಂತ್ಯಸ0ಸ್ಕಾರ ಮತ್ತಿತರ ಯೋಜನೆಗಳಲ್ಲಿ ಫಲಾನುಭವಗಳಿಗೆ ಸರ್ಕಾರದಿಂದ ಹಣವನ್ನ ನೀಡಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಗೇಟ್ ಕುಮಾರ್ ಮಾತನಾಡಿ ಪಟ್ಟ ಣದಲ್ಲಿ ಸುಮಾರು ೫೦೦ ಬೀದಿ ಬದಿ ವ್ಯಾಪಾ ರಿಗಳು ಈಗಾಗಲೇ ನೋಂದಾಯಿಸಿ ಕೊಂಡಿದ್ದು ಉಳಿದವರು ಸಹ ಇನ್ನೂ ಇದ್ದು ಅವರಿಗೂ ಸಹ ಬೀದಿಬದಿ ವ್ಯಾಪಾರಿಗಳ ಕಾರ್ಡನ್ನ ಮಾಡಿಸಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖಾಧಿಕಾರಿ ಹರೀಶ್ ಕುಮಾರ್, ಪುರಸಭೆಯ ಸಮುದಾಯ ಸಂಘಟಿತ ಅಧಿಕಾರಿ ನಾಗರಾಜ್, ಮಹಿಳಾ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಬ್ಲಡ್ ಶಶಿಕಲಾ, ಕಾರ್ಮಿಕ ಮುಖಂಡ ಗೌಡ ರಂಗಪ್ಪ,ಸಿಬ್ಬ0ದಿ ಪವನ್ ಕುಮಾರ್ ,ಪ್ರತಿಮಾ ಮತ್ತಿತರರು ಹಾಜರಿದ್ದರು.





