
ತುಮಕೂರು: ಮಕ್ಕಳಿಗೆ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಾಗಿ ವಿಜ್ಞಾನ ಮತ್ತು ವಾಣಿಜ್ಯ ಶಾಸ್ತçಕ್ಕೆ ಸಂಬ0ಧಿಸಿದ “ ವೇವ್ ಸೈನ್ಸ್ ಎಕ್ಸಪೋ-2025” ವಿಜ್ಞಾನ ವಸ್ತುಪ್ರದರ್ಶನವನ್ನು ಸತ್ಯಮಂಗಲದಲ್ಲಿರುವ ಜೈನ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಜೈನ್ ಪಿಯು ಕಾಲೇಜಿನ ೧೫೦ಕ್ಕೂ ಹೆಚ್ಚು ಮಕ್ಕಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ಸುಮಾರು ೮೨ ವಿವಿಧ ರೀತಿಯ ಪ್ರಾತಕ್ಷಿಕೆಗಳು, ವಿಜ್ಞಾನ, ವಾಣಿಜ್ಯ, ಜಾನಪದ,ಭಾಷಾ ವಿಜ್ಞಾನ ಸೇರಿದಂತೆ ಹಲವು ವಿಚಾರಗಳ ಕುರಿತ ತಯಾರಿಸಿದ್ದ ಪ್ರತಿಕೃತಿಗಳು, ಭವಿಷ್ಯದಲ್ಲಿ ಭಾರತದ ವೈಜ್ಞಾನಿಕ ಬೆಳವಣಿಗೆ ಮತ್ತು ಅವುಗಳ ಉಪಯೋಗಗಳ ಕುರಿತ ಮಾಹಿತಿಯನ್ನು ಜೈನ್ ಪಿಯು ಕಾಲೇಜಿನ ಪ್ರಥಮ ಮತ್ತು ದ್ವಿತಿಯ ವರ್ಷದ ವಿದ್ಯಾರ್ಥಿಗಳು ನೋಡುಗರಿಗೆ ವಿವರಿಸುವ ಮೂಲಕ ವಿಜ್ಞಾನ ವಸ್ತು ಪ್ರದರ್ಶನದ ಮಹತ್ವವನ್ನು ಸಾರಿದರು.
ತಮ್ಮ ಕಾಲೇಜು ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ “ ವೇವ್ ಸೈನ್ಸ್ ಎಕ್ಸಪೋ-೨೦೨೫ ಕುರಿತು ಮಾತನಾಡಿದ ಜೈನ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ವರುಣ್‌ಕುಮಾರ್,ಮಕ್ಕಳ ಬೌತಿಕ ಮತ್ತು ಬೌದ್ಧಿಕ ಬೆಳೆವಣಿಗೆಯ ದೃಷ್ಟಿಯಿಂದ ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇದು ಪಠ್ಯ ಕ್ರಮದ ಒಂದು ಭಾಗವೇ ಆಗಿದ್ದು, ಮಕ್ಕಳು ತಮಗೆ ಇಷ್ಟಪಟ್ಟ ಪ್ರಾಜೆಕ್ಟನ್ನು ತಾವೇ ತಯಾರಿ, ಇಲ್ಲಿ ಪ್ರದರ್ಶನಕ್ಕೆ ಇಟ್ಟಿದಲ್ಲದೆ, ಅದರ ಬಗ್ಗೆ ವಿವರಣೆಯನ್ನು ನೀಡುತ್ತಿದ್ದಾರೆ. ಇದು ಮಕ್ಕಳಲ್ಲಿನ ಕೀಳಿರಿಮೆಯನ್ನು ಹೋಗಲಾಡಿಸಿ,ನಾಲ್ವರ ಮಧ್ಯ ಧೈರ್ಯದಿಂದ ಮಾತನಾಡುವ ಕಲೆಯನ್ನು ರೂಢಿಸುವುದರ ಜೊತೆಗೆ, ಆಸಕ್ತಿ ವಿಷಯಗಳ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ ಎಂದರು.
ಜೈನ್ ಪಿಯು ಕಾಲೇಜಿನ ಎಲ್ಲಾ ಉಪನ್ಯಾಸಕರು ತಮ್ಮ ತಮ್ಮ ವಿಷಯಗಳಿಗೆ ಸಂಬ0ಧಿಸಿದ0ತೆ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣಮವಾಗಿ ಪ್ರಾತಕ್ಷಿಕೆಗಳನ್ನು ತಯಾರಿಸಲು ಸಹಕಾರ ನೀಡಿದ ಪರಿಣಾಮ ಒಂದಕ್ಕಿ0ತ ಒಂದು ಪ್ರಾಜೆಕ್ಟ್ ಉತ್ತಮವಾಗಿ ಮೂಡಿ ಬಂದಿವೆ.ಇ0ದಿನ ಅಧುನಿಕತೆ ಮತ್ತು ಭವಿಷ್ಯದ ಕೊರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಐ ತಂತ್ರಜ್ಞಾನ, ತ್ರಿಡಿ ಪ್ರಿಂಟ್ ಸೇರಿದಂತೆ ಹಲವಾರು ಉಪಯುಕ್ತ ಪ್ರಾಜೆಕ್ಟ್ಗಳು ಮಕ್ಕಳಿಂದ ಮೂಡಿಬಂದಿವೆ. ಅಲ್ಲದೆ ಗ್ರಾಮೀಣ ಬದುಕು, ಅದರಲ್ಲಿಯೂ ಕೃಷಿ ಮತ್ತು ಅದಕ್ಕೆ ಬಳಕೆಯಾಗುವ ಪರಿಕರಗಳ ಕುರಿತು ಜಾನಪದ ಲೋಕ ಉತ್ತಮವಾಗಿದೆ.ಇಂತಹ ಒಳ್ಳೆಯ ಸೈನ್ಸ್ ಎಕ್ಸಪೋ ಮೂಡಿಬರಲು ಸಹಕರಿಸಿದ ಎಲ್ಲಾ ಉಪನ್ಯಾಸಕರಿಗೂ ಅಭಿನಂದನೆ ಸಲ್ಲಿಸುವುದಾಗಿ ಪ್ರಾಂಶುಪಾಲರಾದ ವರುಣ್ ಕುಮಾರ್ ತಿಳಿಸಿದರು.
ಬ್ರೆöÊನ್‌ವೇವ್ ಸೈನ್ಸ್ ಎಕ್ಸಪೋ-೨೦೨೫ ರಲ್ಲಿ ರಾಸಾಯನಶಾಸ್ತç ವಿಭಾಗದ ಮಕ್ಕಳು ತಯಾರಿಸಿರುವ ಎಸ್.ಟಿ.ಪಿ ಪ್ಲಾಂಟ್, ಮಳೆ ನೀರು ಕೊಯ್ಲು, ಸ್ಮಾರ್ಟ್ಸಿಟಿ ಪರಿಕಲ್ಪನೆ, ಹಾಗೆಯೇ ಜೀವಶಾಸ್ತç ವಿಭಾಗದ ವಿದ್ಯಾರ್ಥಿಗಳು ಮಾನವನ ದೇಹ ರಚನೆ, ವಿವಿಧ ಗ್ರಂಥಿಗಳು, ಹೃದಯ, ಕಿಡ್ನಿ ಸೇರಿದಂತೆ ವಿವಿಧ ಅಂಗಾAಗಗಳ ಕೆಲಸ,ಡಯಾಲೀಸಿಸ್ ಇನ್ನಿತರ ವಿಚಾರಗಳನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ವಿವರಿಸಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಇರುವ ವೆತ್ಯಾಸ, ಅವುಗಳಿಂದ ಉಂಟಾಗುವ ಅಸಮಾತೋಲನ ಕುರಿತು ಪ್ರಾತಕ್ಷಿಕೆ,ಹಿಂದಿನ ಕಾಲದಲ್ಲಿ ಅಳತೆ ಮತ್ತು ತೂಕಕ್ಕೆ ಬಳಕೆ ಮಾಡುತಿದ್ದ ವಸ್ತುಗಳು,ಕಂಚು, ಹಿತ್ತಾಳೆಯ ಗೃಹೋಪಯೋಗಿ ವಸ್ತುಗಳು, ರಾಗಿ, ಭತ್ತ, ಕಬ್ಬಿನಿಂದ ಅವೃತ್ತವಾದ ಕೃಷಿ ಉತ್ಪನ್ನಗಳ ರಾಶಿ ಎಲ್ಲವೂ ಗಮನ ಸೆಳೆದವು.
ಜೈನ್ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಬ್ರೆöÊನ್ ವೇವ್ ಸೈನ್ಸ್ ಎಕ್ಸಪೋ-೨೦೨೫ ವೀಕ್ಷಿಸಲು ನಗರದ ೧೨ಕ್ಕೂ ಹೆಚ್ಚು ವಿವಿಧ ಶಾಲೆಗಳ ೧೦ನೇ ತರಗತಿಯ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ತಮ್ಮ ಕುತೂಹಲವನ್ನು ತಣಿಸಿಕೊಂಡರು.
ಈ ವೇಳೆ ಜೈನ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ವರುಣ್‌ಕುಮಾರ್,ವ್ಯವಸ್ಥಾಪಕರಾದ ಹರೀಶ್‌ಕುಮಾರ್, ಉಪನ್ಯಾಸಕರಾದ ಪ್ರಶಾಂತ್ ಲಿಂಗ0,ರಾಮಚ0ದ್ರಪ್ಪ, ನಾಗಲಕ್ಷಿö್ಮ, ಭವ್ಯಶ್ರೀ, ನಂದಿನಿ, ಹೇಮಲತ, ಶಿವಕುಮಾರ್, ರಾಜಶೇಖರ್, ದೀಪಶ್ರೀ ಹಾಗೂ ಶ್ವೇತಾ ಅವರುಗಳು ಮಕ್ಕಳಿಗೆ ನೆರವಾದರು.





