
ಮಧುಗಿರಿ: ಸಾಹಿತ್ಯಕ್ಕೆ ಮನುಷ್ಯನ ಗುಣವನ್ನು ಬದಲಾಯಿಸುವ ಶಕ್ತಿ ಇದೆ ಎಂದು ಖ್ಯಾತ ವಕೀಲರು ಹಾಗೂ ಸಾಮಾಜಿಕ ಚಿಂತಕರು ಆದ ಪ್ರೊಫೆಸರ್ ರವಿವರ್ಮ ಕುಮಾರ್ ತಿಳಿಸಿದ್ದಾರೆ ಪಟ್ಟಣದ ಕನ್ನಡ ಭವನ ನದಲ್ಲಿ ನಡೆದ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿ ಕಟ್ಟ ಆರ್ ಎಸ್ ಎಸ್ ವಾಧಿಯಾಗಿದ್ದ ನನ್ನನ್ನು ಕುವೆಂಪುರವರ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಎಂಬ ಒಂದು ಪುಸ್ತಕ ಆರ್ ಎಸ್ ಎಸ್ ನಿಂದ ದೂರ ಮಾಡಿತು ಎಂದವರು ಇದು ಸಾಹಿತ್ಯಕ್ಕೆ ಇರುವ ಶಕ್ತಿ ಎಂದು ತಿಳಿಸಿದರು.
ನಮ್ಮ ತಂದೆ ಕೆಂಗರಾಮಯ್ಯ ನವರು ಮಿಡಿಗೇಶಿಯಲ್ಲಿ ಶಿಕ್ಷಕರಾಗಿದ್ದು ಈ ಸಂದರ್ಭದಲ್ಲಿ ಬಾಲ್ಯದಲ್ಲಿ ಮಧುಗಿರಿಯಲ್ಲಿ ಶಿಕ್ಷಣ ಪಡೆದಿದ್ದನ್ನು ನೆನಪಿಸಿಕೊಂಡ ಅವರು ೫೦ ವರ್ಷಗಳಿಂದ ಸಂಪೂರ್ಣವಾಗಿ ನಾಡಿನ ಹೆಸರಾಂತ ಕುವೆಂಪು ಪೂರ್ಣಚಂದ್ರ ತೇಜಸ್ವಿ ಲಂಕೇಶ್ ಕಾರಂತ ಮುಂತಾ ದವರ ಕೃತಿಗಳು ನನಗೆ ಪ್ರೇರಣೆಯಾಗಿವೆ ಇದೇ ಅಲ್ಲದೆ ತೇಜಸ್ವಿ ರವರ ಕಾರ್ವಾಲೊ ಕಾದಂಬರಿಯ ಬರವಣಿಗೆಯ ಸಂದರ್ಭದಲ್ಲಿ ಪ್ರತಿಪುಟಕ್ಕೂ ಸಾಕ್ಷಿಯಾಗಿದ್ದು ನನ್ನ ಪುಣ್ಯ ಐದಾರು ದಶಕಗಳಲ್ಲಿ ರೂಪಗೊಂಡಿರುವ ಸಾಹಿತ್ಯ ಚಳುವಳಿಗೆ ನಾನು ಸಾಕ್ಷಿ ಭೂತನಾಗಿರುವುದು ಸಹ ನನ್ನ ಪುಣ್ಯ ನಾಡಿನ ಹೆಸರಾಂತ ರೈತ ಹೋರಾಟಗಾರರಾದ ಪ್ರೊಫೆ ಸರ್ ಎಂ ಡಿ ನಂಜು0ಡಸ್ವಾಮಿ ರವರ ಮಾರ್ಗದರ್ಶನದಲ್ಲಿ ಸಮಾಜವಾದಿ ಯುವಜನ ಸಭಾ ಸ್ಥಾಪಿಸಿ ಹೋರಾಟ ರೂಪಿಸುವಲ್ಲಿ ಸಾಧ್ಯವಾಯಿತು ಎಂದರು.
ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಭಾಷಣವನ್ನು ವಿದ್ಯಾರ್ಥಿ ದೆಸೆಯಲ್ಲಿ ಕೇಳಿದ್ದರಿಂದ ಅಂದಿನಿ0ದ ಕುವೆಂಪುರವರ ಚಿಂತನೆಗಳನ್ನು ನಿರಂತರವಾಗಿ ಪಾಲಿಸಿಕೊಂಡು ಬರುತ್ತಿ ದ್ದೇನೆ ಎಂದು ತಿಳಿಸಿದರು ಲೋಹಿಯಾ ಅವರು ಮಾಜಿ ಪ್ರಧಾನಿ ದಿವಂಗತ ಜವಹರ ಲಾಲ್ ನೆಹರು ಅವರನ್ನು ಟಚ್ ಸಮಾಜವಾದಿ ಎಂದು ಕರೆಯು ತ್ತಿದ್ದರು ಹಾಗೆ ನಾನು ಸ್ವತಃ ಸಾಹಿತಿ ಅಲ್ಲದಿದ್ದರೂ ಟಚ್ ಸಾಹಿತಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಬಿ ನಾಗೇಶ ಬಾಬು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಕೆ ಪಿ ನಟರಾಜು ನಿವೃತ್ತ ಪ್ರಾಂಶಪಾಲ ಮುನೀಂದ್ರ ಕುಮಾರ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಹನ ನಾಗೇಶ್ ಕಾರ್ಯದರ್ಶಿಗಳಾದ ರಂಗಧಾಮಯ್ಯ ಎಂ ಎಸ್ ಶಂಕರ್ ನಾರಾಯಣ ಎಂವಿ ಡಾ.ಬಂದ್ರೆ ಹಳ್ಳಿ ಕುಮಾರ್,ಕವಯತ್ರಿ ವೀಣಾ ಶ್ರೀನಿವಾಸ್ ಉಮಾ ಮಲ್ಲೇಶ್ ನರಸಿಂಹಮೂರ್ತಿ ಗುಟ್ಟೇ ರಮೇಶ್ ಡಿ ಜಿ ಶಂಕರನಾರಾಯಣ ಶೆಟ್ಟಿ ಮತ್ತಿತರರು ಹಾಜರಿದ್ದರು.





