
ತುಮಕೂರು: ನಗರದಲ್ಲಿ ಈಗಾಗಲೇ ೩೦ ಘೋಷಿತ ಕೊಳಚೆ ಪ್ರದೇಶಗಳಿದ್ದು, ಇಂತಹ ಗುಣಲಕ್ಷಣಗಳು ಇರುವ ಮತ್ತಷ್ಟು ಪ್ರದೇಶಗಳಿದ್ದು, ಇಂತಹ ಪ್ರದೇಶಗಳನ್ನು ಸರ್ವೆ ಮೂಲಕ ಗುರುತಿಸಿ, ಘೋಷಿತ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತುಮಕೂರು ನಗರ ಶಾಸಕ ರಾದ ಜಿ.ಬಿ.ಜ್ಯೋತಿಗಣೇಶ್ ರವರು ಸೂಚನೆ ನೀಡಿದರು.
ಅವರು ತುಮಕೂರು ಮಹಾನಗರ ಪಾಲಿಕೆ ಯಲ್ಲಿ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆರೆಯಂಗಳದಲ್ಲಿರುವ ನಿರಾಶ್ರಿತರಿಗೆ ಬೇರೆಡೆಗೆ ವಸತಿ ಸೌಲಭ್ಯ ಕಲ್ಪಿಸಿದ ನಂತರವೇ ಸ್ವತ್ತನ್ನು ಸರ್ಕಾರದನ್ವಯ ಸ್ವಾಧೀನಪಡಿಸುವ ಪ್ರಕ್ರಿಯೆ ಮಾಡಬೇಕೆಂದರು. ಅವರು ತುಮಕೂರು ನಗರವು ಜಿಲ್ಲಾ ಕೇಂದ್ರವಾಗಿರುವುದರಿ0ದ ವಸತಿ ವಂಚಿತರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರಿ ಭೂಮಿಗಳನ್ನು ಗುರುತಿಸಿ ವಸತಿ ಯೋಜನೆಗೆ ಭೂಮಿಯನ್ನು ಮೀಸಲು ಇಡಲು ಅಧಿಕಾರಿಗಳಿಗೆ ಸೂಚಿಸ ಲಾಗಿದೆ ಎಂದು ತಿಳಿಸಿದರು.
ವಸತಿ ವಂಚಿತ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡ ಬೇಕಾಗಿದೆ. ವಿವಿಧ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಲು ಕೆಲವು ಸ್ವತ್ತುಗಳನ್ನು ಸರ್ಕಾರದಿಂದ ಮೀಸಲಿಡಲಾಗಿದ್ದು, ಇಂತಹ ಸ್ವತ್ತುಗಳನ್ನು ಸ್ಥಳ ಪರಿಶೀಲನೆ ಮಾಡಿ, ಸಾಧಕ-ಬಾಧಕಗಳ ಬಗ್ಗೆ ತಿಳಿಸುವಂತೆ ಶಾಸಕರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಆಶ್ರಯ ಸಮಿತಿ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ಶುಭ, ತುಮಕೂರು ತಾಲ್ಲೂಕು ತಹಶೀಲ್ದಾರರಾದ ರಾಜೇಶ್ವರಿ, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರಾದ ಶ್ರೀ ಯೋಗಾನಂದ, ಪಾಲಿಕೆ ಉಪ-ಆಯುಕ್ತರಾದ ಶ್ರೀ ಮನು, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ಕಂದಾ ಯ ಇಲಾಖೆಯ ಅಧಿಕಾರಿಗಳು ಹಾಗೂ ಮಹಾ ನಗರಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.





