
ಶಿರಾ: ಯಂತ್ರಗಳಿ0ದ ಅನ್ನ ಸೃಷ್ಟಿಸಲು ಸಾಧ್ಯವಿಲ್ಲ ಭೂಮಿ ಉತ್ತಿ ರೈತರು ಬೆಳೆದರೆ ಮಾತ್ರ ಜಗತ್ತು ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯ ಅದರೂ ಅಳುವ ಸರ್ಕಾರಗಳು ರೈತರಿಗೆ ಕನ್ನಡಿಗಂಟು ತೋರಿಸಿ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ಬಿಡಬೇಕಿದೆ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ೨೩ ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು.
ಕೃಷಿ ಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿದರೆ ಯುವಜನರು ಕೂಡ ಅಸಕ್ತರಾಗಿ ಬದುಕು ಕಟ್ಟಿಕೊಳ್ಳುತ್ತಾರೆ ,ಶಿರಾ ತಾಲ್ಲೂಕಿನ ಜನರು ಗುಳೆ ಹೊರಡುವ ಪರಿಸ್ಥಿತಿಯಲ್ಲಿ ಶಾಸಕ ಜಯಚಂದ್ರ ಅವರು ಕಾನೂನಿನ ಸವಾಲುಗಳನ್ನು ಎದುರಿಸಿ ಹೇಮಾವತಿ ಹರಿಸಿದ ಫಲವನ್ನು ಇಂದು ಕಾಣಬಹುದಾಗಿದೆ.
ನೀರಾವರಿ ವಿಚಾರದಲ್ಲಿ ಅಪಾರ ಅನುಭವ ಇರುವ, ೫೦ ವರ್ಷಗಳ ಸುದೀರ್ಘ ರಾಜಕೀಯದ ಹಿರಿತನ ಜೊತೆಗೆ ಸರ್ಕಾರ ಮುನ್ನಡೆಸಿ ಯಶಸ್ವಿ ಯೋಜನೆಗಳಿಗೆ ಕಾರಣರಾಗುವಂತಹ ಎಲ್ಲಾ ಗುಣಗಳನ್ನು ಹೊಂದಿರುವ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ ಗೌರವಿಸುವಂತಹ ಕೆಲಸ ಸರ್ಕಾರ ಮಾಡಬೇಕು ಎಂದರು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಮಠದಲ್ಲಿ ನಾನು ಮಾತನಾಡುವ ಪ್ರತಿಯೊಂ ದು ಮಾತು ನನಗೆ ಅಂತಃ ಶಕ್ತಿಯಾಗಿ ಕೆಲಸ ಮಾಡಲು ಸ್ಪೂರ್ತಿ ತರುತ್ತದೆ ಮದಲೂರು ಕರೆಗೆ ನೀರು ತರಲು ಇದರಿಂದ ಸಾಧ್ಯವಾಯಿತು ಅಲ್ಲದೇ ಹೇಮಾವತಿ ಜೊತೆಯಲ್ಲಿ ಭದ್ರಾ ಮೇಲ್ದಂಡೆ, ಎತ್ತಿನಹೊಳೆಯ ಯೋಜನೆಯ ಪ್ರಯೋಜನವನ್ನು ನಮ್ಮ ತಾಲ್ಲೂಕಿನ ರೈತರಿಗೆ ಮುಂದಿನ ವರ್ಷದ ಒಳಗೆ ಸಿಗುವಂತೆ ಮಾಡುವೆ ಎಂದರು.
ಶಿರಾ ಜೆಡಿಎಸ್ ನಾಯಕ ಆರ್. ಉಗ್ರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರಿಗೆ ತಂತ್ರಜ್ಞಾನದ ಬಳಕೆ ಬಗ್ಗೆ ಈ ವಸ್ತು ಪ್ರದರ್ಶನದಿಂದ ಹೆಚ್ಚಿನ ಮಾಹಿತಿ ಲಭಿಸುತ್ತಿದ್ದು, ಶಿರಾಕ್ಷೇತ್ರಕ್ಕೆ ಹೇಮಾವತಿ ನೀರು ಹರಿಯಲು ನಂಜಾವಧೂತ ಶ್ರೀಗಳ ನೀರಾವರಿ ಹಕ್ಕು ದಿನವೇ ಪ್ರೇರಣೆ ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಗೋವಿಂದರಾಜು, ತಾ.ಪಂ.ಇಓ ಅರ್ .ಹರೀಶ್ ನಾದೂರು ಗ್ರಾ.ಪಂ.ಅಧ್ಯಕ್ಷೆ ತುಳಸಿ ಮಧುಸೂದನ್, ಮುಖಂಡರಾದ ಲಕ್ಷ್ಮೀಪತಿ,ಮಾಲೂರು ರಾಘ ವೇಂದ್ರ, ಬೊಪ್ಪಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ್, ಸಮಾಜ ಸೇವಕ ತಡಕಲೂರು ಕಿರಣ್ ಗೌಡ, ಚಿರತಹಳ್ಳಿ ಪ್ರಕಾಶ್ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್. ರಾಮಕೃಷ್ಣ ಸೇರಿದಂತೆ ಹಲವಾರು ಮುಖಂಡರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ವೈಭವಯುತವಾಗಿ ನಡೆದ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲು ಗಾಲಿ ರಥೋತ್ಸವ: ಜಾತ್ರಾ ಮಹೋತ್ಸವದ ಅಂಗವಾಗಿ ಐತಿಹಾಸಿಕ ಪ್ರಸಿದ್ಧ ಓಂಕಾರೇಶ್ವರ ಕಲ್ಲುಗಾಲಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಅಭಿಷೇಕ ,ಕಳಶಾರಾಧನೆ, ಸಾಯಂಕಾಲ ನಿತ್ಯ ಹೋಮ,ಅಗ್ನಿ ಕುಂಡ,ಕಲ್ಯಾಣೋತ್ಸವ ನೆರವೇರಿತು. ಓಂಕಾರೇಶ್ವರ ಸ್ವಾಮಿಯನ್ನು ಮೆರವಣಿಗೆಯಲ್ಲಿ ತಂದು ರಥದಲ್ಲಿ ಕುಳ್ಳರಿಸಿ ಜಯಘೋಷಗಳೊಂದಿಗೆ ಶ್ರೀ ನಂಜಾವಧೂತ ಸ್ವಾಮೀಜಿಗಳ ದಿವ್ಯ ಸಮಕ್ಷಮದಲ್ಲಿ, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತರ ಉಪಸ್ಥಿತಿಯಲ್ಲಿ ರಥ ಎಳೆಯಲಾಯಿತು.





