
ತುಮಕೂರು: ಭಾರತೀಯ ಸೇನೆಯ ನಿವೃತ್ತ ಯೋಧ ರಿಗೆ ಭೂಮಿ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಲ್ಲಿರುವ ಎನ್‌ಸಿಸಿ-೪ರ ಬೆಟಾಲಿಯನ್‌ನಲ್ಲಿ ನಡೆದ ಸೇನಾ ದಿವಸ್, ಮಾಜಿ ಯೋಧನ ದಿವಸ್, ರಕ್ತದಾನ ಶಿಬಿರ ಹಾಗೂ ಸಂಕ್ರಾAತಿ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಯೋಧರಿಗೆ ನಿರ್ದೇಶನಾಲಯದ ಮೂಲಕ ಸಹಾಯ ಮಾಡುವ ಕೆಲಸ ನಡೆಯುತ್ತಿದೆ. ನಿವೃತ್ತ ಯೋಧರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ಸಂಬ0ಧ ಈ ಕುರಿತು ಪ್ರತ್ಯೇಕವಾಗಿ ನಿವೃತ್ತ ಸೇನಾನಿಗಳ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದರು.
ನಿವೃತ್ತ ಸೈನಿಕರು ಈ ಇಲಾಖೆ ನಿರ್ದೇಶನಾಲಯ ನಮ್ಮ ಜತೆಯಲ್ಲೇ ಇದೆ. ನಿವೃತ್ತರಾದ ಮೇಲೆ ಕೃಷಿ ಮಾಡುವವರಿಗೆ ಭೂಮಿ ಕೊಡಬೇಕು, ಬ್ಯುಸಿನೆಸ್ ಮಾಡುವವರಿಗೆ ಸಹಾಯ ಮಾಡಬೇಕು ಎಂದು ಪ್ರತಿಯೊಂದು ರಾಜ್ಯದಲ್ಲೂ ಒಂದೊ0ದು ನಿರ್ದೇಶನಾಲ ಯವನ್ನು ಸ್ಥಾಪಿಸಲಾಗಿದೆ ಎಂದರು.
ಇಡೀ ಜಿಲ್ಲೆಯಲ್ಲಿ ಇರುವ ನಿವೃತ್ತ ಯೋಧರನ್ನು ಮತ್ತೊಂದು ಬಾರಿ ನಾನು ಭೇಟಿ ಮಾಡುತ್ತೇನೆ. ನಮ್ಮ ಜಿಲ್ಲೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಗೆಹರಿಸೋಣ ಎಂದು ಹೇಳಿದರು.
ನಾನು ಸಹ ೫ ವರ್ಷಗಳ ಕಾಲ ಎನ್‌ಸಿಸಿಯಲ್ಲಿ ಇದ್ದೆ. ಇದು ಬಹಳ ಜನರಿಗೆ ಗೊತ್ತಿಲ್ಲ ಎಂದು ತಾವು ಎನ್‌ಸಿಸಿ ಯಲ್ಲಿದ್ದ ಅವಧಿಯ ನೆನಪುಗಳನ್ನು ಮೆಲುಕು ಹಾಕಿದರು.
ಉತ್ತರ ಭಾರತದ ಜನರಿಗಾಗಿ ಎನ್‌ಸಿಸಿ-೪ನೇ ಬೆಟಾಲಿಯನ್‌ಲ್ಲಿ ಸಂಕ್ರಾ0ತಿ ಹಬ್ಬ ಆಚರಣೆ ಮಾಡುತ್ತಿ ರುವುದರ ಬಗ್ಗೆ ಗೊತ್ತಾಯಿತು. ಅವರಿಗೂ ನಮ್ಮ ಸಂಸ್ಕöÈತಿ, ಪರಂಪರೆಯನ್ನು ತಿಳಿಸುವ ಕಾರ್ಯ ಶ್ಲಾಘನೀ ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, ೪ನೇ ಕರ್ನಾಟಕ ಬೆಟಾ ಲಿಯನ್ ಲೆಫ್ಟಿನೆಂಟ್ ಕರ್ನಲ್ ಅವಿನಾಶ್, ಸುಬೇದಾರ್ ಮೇಜರ್ ದಿನೇಶ್ ಸಿಂಗ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬೊಮ್ಮಲಿಂಗಯ್ಯ, ವಿ.ಡಿ. ನಾಗರಾಜು, ಎನ್ ಸಿಸಿ ಅಧಿಕಾರಿಗಳಾದ ಕ್ಯಾ. ರಾಮಲಿಂಗಾರೆಡ್ಡಿ, ಕ್ಯಾ. ಪ್ರದೀಪ್‌ಕುಮಾರ್, ಲೆಫ್ಟಿನೆಂಟ್ ಕವಿತಾ, ಲೆಫ್ಟಿನೆಂಟ್ ಶೃತಿ, ಲೆಫ್ಟಿನೆಂಟ್ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.





