
ಮಧುಗಿರಿ: ರಾಜ್ಯದಲ್ಲಿ ಅನ್ನಬಾಗ್ಯ ಹಸಿವನ್ನು ನೀಗಿಸಿದೆ. ಅನ್ನ ಭಾಗ್ಯ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಇದು ಎಲ್ಲ ಸಮುದಾಯದ ಬಡವರಿಗೆ ಸಲ್ಲುವ ಯೋಜನೆಯಾಗಿದೆ. ಅನ್ನ ಭಾಗ್ಯ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಲ್ಲುತ್ತಿವೆ ಎಂದು ಮಾಜಿ ಸಚಿವ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲೂಕಿನ ಚಿಕ್ಕಮಾಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಗನಾಡಿ ಕಟ್ಟಡ, ಶುದ್ಧಕುಡಿಯುವ ನೀರಿನ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ೫ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳ ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಮುಖ್ಯ. ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸದೇ ಉತ್ತಮ ಶಿಕ್ಷಣಕೊಡಿಸಿ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು. ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು.
ಇಂದು ಆಧಿಕಾರ ಬರಬಹುದು ಹೋಗಬಹುದು. ಆಧಿಕಾರದಲ್ಲಿ ಇದ್ದಾಗ ಅದರ ಲಾಭ ಜನರ ಸೇವೆಗೆ ಮುಡಿಪಾಗಿರಬೇಕು. ನಮ್ಮ ಕೊಡಿಗೇನಹಳ್ಳಿ ಹೋಬಳಿ ಪ್ರತಿ ಚುನಾವಣಿಯಲ್ಲೂ ನನಗೆ ಹೆಚ್ಚು ಮತಗಳನ್ನು ನೀಡಿದ್ದು ಈ ಭಾಗದ ಅಭಿವೃಧ್ಧಿಗೆ ಹೆಚ್ಚು ಅನುಧಾನ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮನವಿ ಮಾಡಿದ್ದು, ಈ ಭಾಗದ ಅಭಿವೃದ್ದಿಗೆ ಬದ್ದ ಎಂದರು.
ಮಧುಗಿರಿ ಕ್ಷೇತ್ರದ ಅಭಿವೃದ್ಧಿ ನೋಡಿ ಪುರವರ ಹೋಬಳಿಯವರು ನಮ್ಮನ್ನು ಮಧುಗಿರಿ ಕ್ಷೇತ್ರಕ್ಕೆ ಸೇರಿಸಿಕೊಳ್ಳಿ ಎನ್ನುತ್ತಿದ್ದು, ಅಭಿವೃಧ್ಧಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ.
ನಾನು ತಳಮಟ್ಟದಿಂದ ಬೆಳೆದು ಬಂದಿದ್ದು, ಬಡವರ ನೋವು ಕಂಡವನಾಗಿದ್ದು, ರೈತರು ಕೃಷಿಯ ಜೊತೆಗೆ ಉಪಕಸುಬಾಗಿ ಹಸು, ಕುರಿ ಸಾಕಾಣಿಕೆ ಮಾಡಿ ತಮ್ಮ ಜೀವನ ರೂಪಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ನೀಡಲಾಗುವುದು. ಮಧುಗಿರಿ ಕ್ಷೇತ್ರಕ್ಕೆ ಹೆಚ್ವಿನ ಸಾಲ ನೀಡಿರುವ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆಯಾಗಿದ್ದು, ಈ ಭಾಗದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ವ್ಯವಸಾಯ ಮಾಡುವ ಬಡ ಕುಟುಂಬಗಳು ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಡಿಸಿಸಿ ಬ್ಯಾಂಕ್ ನಿಂದ ಇನ್ನೂ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತೇನೆ ಚಿಕ್ಕಮಾಲೂರು ಗ್ರಾಪಂ ಅನೇಕ ಕಾಮಗಾರಿಗಳಿಗೆ ಪಟ್ಟಿ ನೀಡಿದ್ದು ಹಂತ ಹಂತವಾಗಿ ಜಾರಿಮಾಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ತಹಶೀಲ್ದಾರ್ ಶ್ರೀನಿವಾಸ್, ಡಿಡಿಪಿಐ ಮಾಧವರೆಡ್ಡಿ, ಬಿಇಓ ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಸುವರ್ಣಮ್ಮ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾಯ್ಕ,ಸಂಜೀವ್ ಗೌಡ,ಚಿಕ್ಕಮಾಲೂರು ಗ್ರಾಮದ ಮುಖಂಡರಾದ ಜಗದೀಶ್, ಭಾಸ್ಕರ್ ಇತರರಿದ್ದರು.
ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ನೀಡುವ ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ದ್ವನಿ ಎತ್ತಲಾಗುವುದು. ಮುಂದಿನ ದಿನಗಳಲ್ಲಿಮಧುಗಿರಿ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಶೂಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು.
> ಕೆ.ಎನ್ ರಾಜಣ್ಣ, ಶಾಸಕ.




