
ಚಿಕ್ಕನಾಯಕನಹಳ್ಳಿ: ಕೊಬ್ಬರಿಗೆ ಉತ್ತಮ ಬೆಲೆ ಬಂದ ಸಮಯದಲ್ಲಿ ಈ ಕೀಟಬಾಧೆ ರೈತರ ನಿದ್ದೆಗೆಡಿಸಿದೆ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದು ಸಂಬAಧ ಪಟ್ಟ ಇಲಾಖೆಯ ಜವಾಬ್ದಾರಿ ಈ ನಿಟ್ಟಿನಲ್ಲಿ ಸಚಿವರನ್ನು ಭೇಟಿ ಮಾಡಿ ತೆಂಗು ಬೆಳೆಯನ್ನು ಕಾಪಾಡಿ ರೈತರನ್ನು ಕಾಪಾಡಿ ಎಂದು ಮನವಿ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತೀ.ನಂ.ಶ್ರೀ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆಗೆ ತಗುಲಿರುವ ಬಿಳಿ ನೊಣ ಮತ್ತು ಕಪ್ಪು ತಲೆಹುಳುವಿನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಾಣಿಜ್ಯ ಬೆಳೆಯಾದ ತೆಂಗನ್ನು ನಮ್ಮ ಭಾಗದಲ್ಲಿ ಹೆಚ್ಚು ಜನ ರೈತರು ಅವಲಂಬಿಸಿದ್ದು ಈ ಹಿಂದೆಲ್ಲ ಕೊಬ್ಬರಿಗೆ ಸರಿಯಾದ ಬೆಲೆ ಇಲ್ಲದೇ ಪರದಾಡುವಂತಾಗಿತ್ತು ಆದರೆ ತೆಂಗಿನಲ್ಲಿ ಬಿಳಿನೋಣ, ಕಪ್ಪು ತಲೆಹುಳುವಿನ ಕಾರಣದಿಂದ ಇಳುವರಿ ಇಲ್ಲದ ಈ ಅವಧಿಯಲ್ಲಿ ಉತ್ತಮವಾದ ಬೆಲೆ ಇದೆ ಆದರೆ ರೈತರ ಬಳಿ ಕೊಬ್ಬರಿ ಇಲ್ಲದಂತಾಗಿದೆ ಇದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಬೇಕೆಂದು ಈ ಹಿಂದೆ ಕಂದಿಕೆರೆ ಭಾಗದಲ್ಲಿ ರೈತರ ತೋಟದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಡ್ರೋಣ್ ಬಳಸಿ ಔಷಧಿ ಸಿಂಪಡನೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿತ್ತು ಇದರೊಂದಿಗೆ ಸಂಬAಧಪಟ್ಟ ಸಚಿವರೊಂದಿಗೆ ಮಾತನಾಡಿ, ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ತಿಳಿಸಲಾಗಿತ್ತು. ಇದರ ಹಿನ್ನೇಲೆಯಲ್ಲಿ ಇಂದು ಇಲಾಖೆಯವರು ಇಂದು ಈ ತೆಂಗು ಬೆಳೆಗೆ ತಗುಲಿರುವ ಬಿಳಿನೊಣ ಮತ್ತು ಕಪ್ಪು ತಲೆ ಹುಳುವಿನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಪ್ಪ ಮಾತನಾಡಿ, ರೈತರು ಈ ತೆಂಗಿಗೆ ಬರುವಂತಹ ರೋಗಗಳ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಯಾವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ಔಷಧಿ ಸಿಂಪಡಿಸಬೇಕು, ಗೊಬ್ಬರ ನೀಡುವುದು, ಮಣ್ಣು ಹಾಕುವುದು, ಸೇರಿದಂತೆ ಇತರೆ ವಿಚಾರಗಳನ್ನು ತಿಳಿಸಲಾಗುವುದು, ರೈತರು ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಈರಣ್ಣ, ಎಂ.ಆರ್.ಶಶಿಧರ್, ಶಿವಕುಮಾರ್ ಇತರರು ಇದ್ದರು.





