BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ
  • ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ
  • ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ
  • ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ
  • ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ
  • ವಿಕಲಚೇತನರು ಸ್ವಾವಲಂಬಿಗಲು ಅವಕಾಶ ಕಲ್ಪಿಸಿ
  • ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ
  • ಕುಡಿಯುವ ನೀರಿನ ಅಸಮರ್ಪಕ ಸರಬರಾಜು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ ವಿಜೃಂಭಣೆಯ ಆಚರಣೆಗೆ ನಿರ್ಧಾರ
ತುಮಕೂರು ಜಿಲ್ಲಾ ಸುದ್ಧಿಗಳು

ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ ವಿಜೃಂಭಣೆಯ ಆಚರಣೆಗೆ ನಿರ್ಧಾರ

By News Desk BenkiyabaleUpdated:January 14, 2019 4:06 pm

ತುಮಕೂರು:

      ಈ ಬಾರಿಯ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಆಕರ್ಷಕವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

      ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜನವರಿ 26ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಜನವರಿ 20ರೊಳಗಾಗಿ ಸುಣ್ಣ ಬಣ್ಣ ಬಳಿದು ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರ ನಿಲಯ, ವಸತಿ ನಿಲಯ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡುವುದು ಮೂಲಭೂತ ಕರ್ತವ್ಯವಾಗಿದ್ದು, ಸಂಬಂಧಿಸಿದವರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.

      ಗಣರಾಜ್ಯೋತ್ಸವವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳನ್ನೊಳಗೊಂಡ ಸ್ವಾಗತ ಸಮಿತಿ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ, ಪೆರೇಡ್ ಸಮಿತಿ, ಕ್ರೀಡಾಂಗಣ ಸಮಿತಿ , ಆಯ್ಕೆ ಸಮಿತಿ, ಸಿಹಿ ತಿಂಡಿ ವಿತರಣೆ ಸಮಿತಿಗಳನ್ನು ರಚಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಕಾರ್ಯೋನ್ಮುಖರಾಗಲು ನಿರ್ದೇಶನ ನೀಡಿದರು.

Displaying DSC_7145.JPG

     ಕಾರ್ಯಕ್ರಮದಲ್ಲಿ ಆಕರ್ಷಕ ಕವಾಯತು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಬೇಕು. ಕವಾಯತು ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಪೂರ್ವಾಭ್ಯಾಸ ಮಾಡುವ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ತಾಲೀಮು ನಡೆಸಲು ಅನುವಾಗುವಂತೆ ಧೂಳು ಬರದ ರೀತಿಯಲ್ಲಿ ನೀರು ಸಿಂಪಡಿಸಿ ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಧ್ವಜ ಸ್ತಂಭ ಹಾಗೂ ವೇದಿಕೆ ಸುತ್ತಮುತ್ತ ಹೂಕುಂಡಗಳಿಂದ ಅಲಂಕರಿಸಬೇಕು ಎಂದು ತಿಳಿಸಿದರು.

      ಗಣರಾಜ್ಯೋತ್ಸವದ ಅಂಗವಾಗಿ ಜನವರಿ 25 ಹಾಗೂ 26ರಂದು ನಗರದ ಪ್ರಮುಖ ವೃತ್ತಗಳು ಹಾಗೂ ಎಲ್ಲಾ ಸರ್ಕಾರಿ ಕಛೇರಿಗಳಿಗೆ ವಿದ್ಯುತ್ ದೀಪಾಲಂಕಾರ, ತಳಿರು-ತೋರಣಗಳಿಂದ ಅಲಂಕರಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದರು.Displaying DSC_7152.JPG

      ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದಂತಹ ಕ್ರೀಡಾಪಟುಗಳನ್ನು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾದಳ, ಎನ್‍ಸಿಸಿ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪಡೆದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

      ಅಂದು ಸಂಜೆ ನಗರದ ಗಾಜಿನ ಮನೆಯಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಬೇಕು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಚಲನ ಚಿತ್ರಗೀತೆಗಳನ್ನು ಹಾಡುವ, ವೇದಿಕೆ ಮೇಲೆ ಮದ್ದು ಸಿಡಿಸುವ ಕಾರ್ಯಕ್ರಮಗಳನ್ನು ನಡೆಸದಂತೆ ಎಚ್ಚರ ವಹಿಸಬೇಕು. ರಾಷ್ಟ್ರ ಹಾಗೂ ರಾಜ್ಯದ ಸಂಸ್ಕøತಿ, ಪರಂಪರೆಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದರಲ್ಲದೆ, ಧ್ವಜಾರೋಹಣ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಿದರು. 

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

(Visited 27 times, 1 visits today)
Previous Articleಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಲು ಸಾರಿಗೆ ಸಚಿವ ಚಿಂತನೆ
Next Article ಸಮಾಜವನ್ನು ಮುನ್ನಡೆಸುವ ಪ್ರಯತ್ನ ಯುವಜನಾಂಗದ ಮೇಲಿದೆ : ಬಿ.ವೈ.ವಿಜಯೇಂದ್ರ
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm
ಇತರೆ ಸುದ್ಧಿಗಳು

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm
ಇತರೆ ಸುದ್ಧಿಗಳು

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
ಇತರೆ ಸುದ್ಧಿಗಳು

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
ಇತರೆ ಸುದ್ಧಿಗಳು

ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ

March 03, 2026 2:50 pm
ಇತರೆ ಸುದ್ಧಿಗಳು

ವಿಕಲಚೇತನರು ಸ್ವಾವಲಂಬಿಗಲು ಅವಕಾಶ ಕಲ್ಪಿಸಿ

March 03, 2026 2:47 pm
Our Youtube Channel
Our Picks

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm

ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ

March 03, 2026 2:50 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

By News Desk BenkiyabaleMarch 03, 2026 2:57 pm

ತುಮಕೂರು: ಶುಶ್ರೂಷಕಿಯರ ಕೆಲಸ ಜಗತ್ತಿನಲ್ಲೇ ಬಹಳ ಅತ್ಯುತ್ತಮವಾದ ಕೆಲಸವಾಗಿದೆ, ಶುಶ್ರೂಷಕಿಯರು ನೀಡುವ ನಿಸ್ವಾರ್ತ ಸೇವಾಮನೋಭಾವ ಎಲ್ಲರೂ ಮೆಚ್ಚುವಂತಹ ಕೆಲಸವಾಗಿದೆ ಎಂದು…

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.