BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ
  • ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ
  • ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ
  • ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ
  • ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ
  • ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು
  • ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ
  • ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು
news

ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು

ಹುಳಿಯಾರಿನ ಮದ್ಯವರ್ಜನ ಶಿಬಿರದಲ್ಲಿ ಮೂಡಿದ ಪರಿವರ್ತನೆಯ ಬೆಳಕು!
By News Desk BenkiyabaleUpdated:July 18, 2026 4:13 pm

ಹುಳಿಯಾರು: ಮದ್ಯವೆಂಬ ಹೆಮ್ಮಾರಿಗೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಿದ್ದ ನೂರಾರು ಜೀವಗಳಿಗೆ ಹೊಸ ಭರವಸೆ ತುಂಬುವ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿರುವ ಮದ್ಯವರ್ಜನ ಶಿಬಿರಗಳು ಸಮಾಜದಲ್ಲಿ ಮಹತ್ತರ ಬದಲಾವಣೆ ತರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಹುಳಿಯಾರಿನಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರ.
ಆರಂಭದಲ್ಲಿ ಹೆದರಿ ಓಡಲು ಯತ್ನಿಸುತ್ತಿದ್ದ ಶಿಬಿರಾರ್ಥಿಗಳು, ಕೇವಲ ಐದಾರು ದಿನಗಳಲ್ಲಿ ಶಿಸ್ತು ಮತ್ತು ಸಂಸ್ಕಾರದ ಹಾದಿಗೆ ಮರಳಿರುವುದು ಇಡೀ ಯೋಜನೆಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.
ಆತಂಕದಿ0ದ ಆರಂಭವಾದ ಕಾವಲು: ಹುಳಿಯಾರಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಆರಂಭದ ದಿನಗಳಲ್ಲಿ ಆಯೋಜಕರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಒಂದು ದೊಡ್ಡ ಆತಂಕವಿತ್ತು. ಮದ್ಯದ ವ್ಯಸನದಿಂದ ಹೊರಬರಲಾರದೆ ಶಿಬಿರಾರ್ಥಿಗಳು ಎಲ್ಲಿ ಮಧ್ಯದಲ್ಲೇ ಓಡಿಹೋಗುತ್ತಾರೋ ಎಂಬ ಭಯದಿಂದಾಗಿ ಕಲ್ಯಾಣ ಮಂಟಪದ ಬಾಗಿಲುಗಳನ್ನು ಸಂಪೂರ್ಣವಾಗಿ ಲಾಕ್ ಮಾಡಿ ಶಿಬಿರ ನಡೆಸಲಾಗುತ್ತಿತ್ತು. ಶಿಬಿರಾರ್ಥಿಗಳು ಕೂಡ ಸಣ್ಣದೊಂದು ಸಂದಿ ಸಿಕ್ಕರೂ, ಬಾಗಿಲು ಸ್ವಲ್ಪ ತೆರೆದರೂ ಸಾಕು ಕಾಲ್ಕಿತ್ತಲು ಸನ್ನದ್ಧರಾಗಿ ಕುಳಿತಿರುತ್ತಿದ್ದರು. ಎಷ್ಟೇ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ ಆರಂಭದಲ್ಲಿ ಓರ್ವ ವ್ಯಕ್ತಿ ಶಿಬಿರದಿಂದ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದ. ಇದರಿಂದ ಎಚ್ಚೆತ್ತ ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು ಇಡೀ ಕಲ್ಯಾಣ ಮಂಟಪಕ್ಕೆ ಸರ್ಪಗಾವಲು ಹಾಕಿ ಶಿಬಿರವನ್ನು ಮುನ್ನಡೆಸುತ್ತಿದ್ದರು.
ಮನಸು ಬದಲಿಸಿದ ಐದು ದಿನಗಳ ಸಾಧನೆ: ಆದರೆ, ಕೇವಲ ಐದಾರು ದಿನಗಳ ಸತತ ಕೌನ್ಸಿಲಿಂಗ್, ಪ್ರೀತಿ ಮತ್ತು ಶಿಸ್ತಿನ ವಾತಾವರಣ ಶಿಬಿರಾರ್ಥಿಗಳಲ್ಲಿ ಅಸಾಧ್ಯ ಬದಲಾವಣೆಯನ್ನು ತಂದಿದೆ. ಇಂದು ಬೆಳಗಿನ ಉಪಹಾರದ ವಿತರಣೆಯ ವೇಳೆ ಕಂಡು ಬಂದ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವಂತಿತ್ತು. ಕಲ್ಯಾಣ ಮಂಟಪದ ಬಾಗಿಲುಗಳನ್ನು ಪೂರ್ತಿಯಾಗಿ ತೆರೆದು ಹೊರಗಡೆ ಮುಕ್ತ ವಾತಾವರಣದಲ್ಲಿ ಉಪಹಾರ ವಿತರಿಸಲಾಗುತ್ತಿತ್ತು. ಆದರೂ ಕೂಡ ಯಾರೊಬ್ಬರೂ ಅಲ್ಲಿಂದ ಓಡಿಹೋಗುವ ಪ್ರಯತ್ನ ಮಾಡಲೇ ಇಲ್ಲ! ಬದಲಾಗಿ, ತಾವಾಗಿಯೇ ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಂತು, ಉಪಹಾರ ಪಡೆದು, ಸಮಾಧಾನದಿಂದ ತಿಂದು ಮುಗಿಸಿದರು. ಅಷ್ಟೇ ಅಲ್ಲದೆ, ಎಂದಿನ0ತೆ ಕಲ್ಯಾಣ ಮಂಟಪದ ಒಳಗೆ ಪ್ರವೇಶಿಸಿ ಇಂದಿನ ಶಿಬಿರದ ಕಾರ್ಯಕ್ರಮಗಳಲ್ಲಿ ಅತ್ಯಂತ ಸಡಗರದಿಂದ ಭಾಗಿಯಾಗಿದ್ದಾರೆ.
ಶ್ರಮಕ್ಕೆ ಸಿಕ್ಕ ನಿಸ್ವಾರ್ಥ ಸಾರ್ಥಕತೆ: ಇದೇ ಅಲ್ಲವೇ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಮದ್ಯವರ್ಜನ ಶಿಬಿರದ ನಿಜವಾದ ಯಶಸ್ಸು? ಕಳೆದ ಐದಾರು ದಿನಗಳಿಂದ ಹಗಲಿರುಳು ಶ್ರಮಿಸುತ್ತಿರುವ ಧರ್ಮಸ್ಥಳ ಯೋಜನೆಯ ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮ, ವ್ಯವಸ್ಥಾಪನಾ ಸಮಿತಿಯವರ ನಿಸ್ವಾರ್ಥ ಸೇವೆ ಹಾಗೂ ಸ್ಥಳೀಯ ಸಾರ್ವಜನಿಕರು ನೀಡಿದ ಉದಾರವಾದ ದೇಣಿಗೆ ಇಂದು ನೂರಾರು ಕುಟುಂಬಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸುವ ಮೂಲಕ ಸಾರ್ಥಕವೆನಿಸಿದೆ. ತಪ್ಪು ದಾರಿಗೆ ತುಳಿದಿದ್ದ ಪಾದಗಳು ಇಂದು ಸನ್ಮಾರ್ಗದತ್ತ ಹೆಜ್ಜೆ ಇಡುತ್ತಿರುವುದಕ್ಕೆ ಹುಳಿಯಾರಿನ ಈ ಶಿಬಿರವೇ ಜೀವಂತ ಸಾಕ್ಷಿ.

(Visited 1 times, 1 visits today)
Chikkanayakanahalli kannada news local news tumakur tumkur ಚಿಕ್ಕನಾಯಕನಹಳ್ಳಿ ಹುಳಿಯಾರು
Previous Articleಬಾರಪ್ಪಾ ಮಳೆರಾಯ.. ನಿನ್ನ ನಂಬಿದ ರೈತರ ಗತಿಯೇನಪ್ಪಾ?
Next Article ತುಮಕೂರು ಏರ್ ಪೋರ್ಟ್: ಬಿ.ಎಸ್.ವಿಜಯೇಂದ್ರರವರ ನಿಲುವಿಗೆ ಸ್ವಾಗತ
News Desk Benkiyabale

Related Posts

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm news
ತಾಜಾ ಸುದ್ಧಿಗಳು
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm
news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm
news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm
news

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
news

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm
Our Youtube Channel
Our Picks

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

By News Desk BenkiyabaleSeptember 02, 2026 5:37 pm

ತುಮಕೂರು: ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಮುದಾಯದವರಾಗಿದ್ದು, ವೈದಿಕ ಅಥವಾ ಶಿಷ್ಟ ಸಂಸ್ಕೃತಿಯ ಪ್ರಭಾವದಿಂದ ತನ್ನ ಮೂಲ ಸಂಸ್ಕೃತಿ ಹಾಗೂ ಆಚರಣೆಗಳನ್ನು…

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.