ತುಮಕೂರು: ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ವ್ಯಾಖ್ಯಾನಿಸಿದರು.
ಅವರು ತುಮಕೂರಿನ ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನಾಟಕೋತ್ಸವದ ಅಂಗವಾಗಿ ನಡೆದ ನಿರ್ದಿಗಂತ ತಂಡ ಪ್ರಸ್ತುತಪಡಿಸಿದ ಪ್ರಾಜೆಕ್ಟ ಪಂಚ ತಂತ್ರ ನಾಟಕ ಉದ್ಘಾಟಿಸಿ ಮಾತನಾಡಿದರು.
ಕಥೆ, ಕಥೆಗೊಂದು ಉಪಕಥೆ, ಉಪಕಥೆಗೊಂದು ವ್ಯಾಖ್ಯಾನ ಹೀಗೆ ಕಥಾ ಜಗತ್ತನ್ನು ಲೇಖಕರು ಹಿಗ್ಗಿಸುತ್ತಲೇ ಇರುತ್ತಾರೆ. ಅವೆಲ್ಲಾ ನಾಟಕಕ್ಕೆ ದ್ರವ್ಯವಾಗಿ ಬಳಕೆಯಾಗುತ್ತಿರುವ ಶ್ಲಾಘನೀಯ ಎಂದು ತಿಳಿಸಿದರು. ನಾಟಕಗಳ ಕಥಾ ವಸ್ತುಗಳು ಮುಂದಿನ ತಲೆಮಾರನ್ನು ಪ್ರಭಾವಿಸುವಂತಿರಬೇಕು. ನಟರ ಆಂಗಿಕ ಅಭಿನಯ, ಪರಿಕರ, ಧ್ವನಿ ಬೆಳಕು ಹೀಗೆ ಎಲ್ಲಾ ಆಯಾಮಗಳಲ್ಲೂ ವೃತ್ತಿಪರತೆ ಮೆರೆಯುವಂತಾಗಬೇಕು. ಅಂತಹ ಪ್ರಯತ್ನವನ್ನು ಕನ್ನಡ ರಂಗಭೂಮಿ ಮಾಡುತ್ತಲೇ ಇದೆ ಎಂದರು.
ನಾಟಕಗಳು ಹೊಸತನದಿಂದ ಕೂಡಿದ್ದು ಪ್ರತಿ ಪ್ರದರ್ಶನವೂ ಒಂದೊAದು ಅರ್ಥ ಮೂಡುವಂತೆ ಮಾಡುವ ಕೆಲಸವನ್ನು ನಿರ್ದೇಶಕರು ಮಾಡಬೇಕು. ಆಗ ನಾಟಕ ಸೇರಿದಂತೆ ಯಾವುದೇ ಕೃತಿ ತಲೆಮಾರುಗಳನ್ನು ಪ್ರಭಾವಿಸುತ್ತದೆ ಎಂದರು.
ಜಾನಪದ ಕಲಾವಿದ ಕಂಟಲಗೆರೆ ಸಣ್ಣ ಹೊನ್ನಯ್ಯ ಮಾತನಾಡಿ ರಂಗಭೂಮಿ ಎಲ್ಲಾ ಪ್ರಾಕಾರಗಳನ್ನು ಒಳಗೊಂಡ ಒಂದು ಕ್ರಿಯೆ. ಪುರಾಣ ರಂಗಭೂಮಿ, ಇತಿಹಾಸ ಹಾಗೂ ಜಾನಪದ ರಂಗಭೂಮಿ ಹೀಗೆ ಬಹು ಆಯಾಮಗಳಲ್ಲಿ ಚಲಿಸುವ ಒಂದು ಮಾಧ್ಯಮ ಎಂದು ಬಣ್ಣಿಸಿದರು. ತುಮಕೂರು ಜಿಲ್ಲೆಯ ನಾಟಕ ಪರಂಪರೆಗೆ ದೊಡ್ಡ ಇತಿಹಾಸವಿದೆ. ಅದರಲ್ಲೂ ಪೌರಾಣಿಕ ರಂಗಭೂಮಿ ವಿಶೇಷ ಸ್ಥಾನ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಿಲ್ಪಾ ಅವರು ಮಾತನಾಡಿ ತುಮಕೂರಿನಲ್ಲಿ ನಾಟಕ ಅಕಾಡೆಮಿ, ಝೆನ್ ಟೀಮ್ ವತಿಯಿಂದ ನಡೆಯುತ್ತಿರುವ ಈ ನಾಟಕ ಯಶಸ್ವಿಯಾಗಲಿ ಎಂದು ಆಶಿಸಿದರು.
ಪತ್ರಕರ್ತ ಎಸ್. ನಾಗಣ್ಣ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮಾತನಾಡಿ ತುಮಕೂರಿನಲ್ಲಿ ರಂಗ ಚಟುವಟಿಕೆಗಳು ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ವತಿಯಿಂದ ನಡೆಯುತ್ತಿರುವ ಜಿಲ್ಲಾ ನಾಟಕೋತ್ಸವದಲ್ಲಿ ಹೊಸ ಅಲೆಯ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮಾತನಾಡಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಈಗಾಗಲೇ ತುಮಕೂರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷ ಕೂಡ ಜಿಲ್ಲಾ ನಾಟಕೋತ್ಸವ ನಡೆಸಲಾಗಿತ್ತು. ಅಲ್ಲದೇ ಗುಬ್ಬಿಯಲ್ಲಿ ದಿವಂಗತ ನರಸಿಂಹರಾಜು ನೆನಪಿನ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಹಾಗೆಯೇ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶರಣರ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ವಿಶ್ವ ರಂಗಭೂಮಿ ದಿನ ಸೇರಿದಂತೆ ಈ ವರ್ಷವೂ ಜಿಲ್ಲಾ ನಾಟಕೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ಶೀಘ್ರದಲ್ಲಿ ಪೌರಾಣಿಕ ನಾಟಕೋತ್ಸವನ್ನು ಆಯೋಜಿಸುವ ಕೆಲಸವನ್ನು ಅಕಾಡೆಮಿ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಬಳಿಕ ಪ್ರಕಾಶ್ ರಾಜ್ ಅವರ ನಿರ್ದಿಗಂತ ತಂಡ ಪ್ರಾಜೆಕ್ಟ್ ಪಂಚತAತ್ರ ಎಂಬ ನಾಟಕವನ್ನು ಪ್ರದರ್ಶಿಸಿದರು.
(Visited 1 times, 1 visits today)





