BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
  • ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ
  • ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ
  • ಮಠ ಮಾನ್ಯಗಳ ನೆರವಿನ ಫಲವಾಗಿ ವೀರಶೈವ, ಲಿಂಗಾಯಿತ ಸಮುದಾಯ ಶೈಕ್ಷಣಿಕವಾಗಿ ಮುಂದುವರೆದಿದೆ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ
  • ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗ ಭದ್ರತೆ : ಪಿಡಿಒ ಮುದ್ದಲಿಂಗಯ್ಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
news

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

By News Desk BenkiyabaleUpdated:September 09, 2026 5:34 pm

ತಿಪಟೂರು: ಹಲವು ದಶಕಗಳಿಂದ ಬಗರ್ ಹುಕುಂ ಅಡಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ತಾಲೂಕು ಆಡಳಿತ ಏಕಾಏಕಿ ಅರಣ್ಯ ಹಾಗೂ ಸರ್ಕಾರಿ ಜಮೀನು ಎಂದು ದಾಖಲಿಸಿ ವಶಪಡಿಸಿಕೊಳ್ಳುತ್ತಿರುವ ಕ್ರಮ ಖಂಡಿಸಿ, ತಾಲೂಕಿನ ಹೊನ್ನವಳ್ಳಿ ಹೋಬಳಿಯ ರುದ್ರಾಪುರದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಹಾಗೂ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಸಮಾವೇಶದಲ್ಲಿ ೫೦೦ಕ್ಕೂ ಹೆಚ್ಚು ರೈತರು ಭಾಗವಹಿಸಿ, ಭೂಮಿ ಹಕ್ಕಿಗಾಗಿ ಹೋರಾಟದ ಸಂಕಲ್ಪ ಮಾಡಿದರು.
ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದು ಅಕ್ಷಮ್ಯ ಅಪರಾಧ. ಕಂದಾಯ ಸಚಿವರು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳುತ್ತಿದ್ದರೂ, ಸ್ಥಳಿಯ ಮಟ್ಟದಲ್ಲಿ ಪಹಣಿಯಿಂದ ರೈತರ ಹೆಸರು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕಲ್ಲು-ಮಣ್ಣಿನ ಪ್ರದೇಶವನ್ನು ಭಾವಿತ ಅರಣ್ಯವೆಂದು ಗುರುತಿಸಿ ಜಮೀನು ಕಸಿಯಲು ಬರುವ ಅಧಿಕಾರಿಗಳನ್ನು ಗ್ರಾಮಸ್ಥರು ದೇವಾಲಯದ ಕಂಬಕ್ಕೆ ಕಟ್ಟಿಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಜಿಲ್ಲಾಧಿಕಾರಿ ನಿಂಗಪ್ಪ ಮಾತನಾಡಿ, ಕಾನೂನು ಎಂಬುದು ರೈತನನ್ನು ಎದುರಿಸುವ ಆಯುಧವಲ್ಲ, ಅದು ಭೂಮಿಯನ್ನು ರಕ್ಷಿಸುವ ಕವಚ. ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ರೈತರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗೃತ ರಾಗಿರಬೇಕು. ಪ್ರತಿಯೊಬ್ಬ ರೈತನು ತನ್ನ ಜಮೀನಿನ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳಬೇಕು. ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಇರುವ ಕಾನೂನು ಹಕ್ಕುಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದರು.
ಎಐಕೆಕೆಎಂಎಸ್ ಸಂಘಟನೆಯ ಅಧ್ಯಕ್ಷ ಎಂ.ಶಶಿಧರ್, ಉಪಾಧ್ಯಕ್ಷ ಶಿವಪ್ರಕಾಶ್, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಿದ್ದಬಸವಯ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶವಂತ್, ತೀಮ್ಮೇಗೌಡ ಗಡಬನಹಳ್ಳಿ, ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ರುದ್ರೇಶಹೊಸದುರ್ಗ, ಲೋಕೇಶ್ ಭೈರನಾಯಕನಹಳ್ಳಿ, ಅಲ್ಲಾಬಕಾಷ್, ರಾಜಮ್ಮ ರೈತರಾದ ಮಲ್ಲಪ್ಪ, ಕುಮಾರ್, ದಶರಥ, ಓಂಕಾರಮೂರ್ತಿ, ಬಸವನಾಯ್ಕ ಇದ್ದರು.

(Visited 1 times, 1 visits today)
Chikkanayakanahalli kannada news karnataka local news tumakur tumkur Tumkur mahanagara palike tumkur news ಜಿಲ್ಲಾಡಳಿತ ತುಮಕೂರು:
Previous Articleಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
Next Article ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
News Desk Benkiyabale

Related Posts

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm news
ತಾಜಾ ಸುದ್ಧಿಗಳು
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
news

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
news

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
news

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm
news

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm
Our Youtube Channel
Our Picks

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm

ಮಳೆಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ

September 07, 2026 5:14 pm

ತುಮಕೂರಿನಲ್ಲಿ ಮಣ್ಣಿನ ಗಣೇಶನಿಗೆ ಮಕ್ಕಳ ಕೈಚಳಕ

September 07, 2026 4:56 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

By News Desk BenkiyabaleSeptember 09, 2026 5:37 pm

ತುರುವೇಕೆರೆ: ತಾಲೂಕಿನಲ್ಲಿ ಹಲವಾರು ಕಾಮಗಾರಿಗಳು ಕಳಪೆಯಾಗಿದ್ದರೂ ಬಿಲ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು…

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm

ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ

September 08, 2026 5:26 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.