ಚಿಕ್ಕನಾಯಕನಹಳ್ಳಿ: ವಿಬಿ-ಜಿ ರಾಮ್ ಜಿ ಯೋಜನೆ ಗ್ರಾಮೀಣ ಜನರಿಗೆ ವರದಾನವಾಗಿದೆ ?ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫ ದಿನಗಳ ಕೆಲಸ ದೊರೆಯಲಿದೆ, ಎಲ್ಲರೂ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರ್ಷ ಎಸ್ . ಎಂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಯಳನಡು ಗ್ರಾಮ ಪಂಚಾಯಿತಿ ಸಮೀಪದ ಬಸ್ ನಿಲ್ದಾಣದಲ್ಲಿ ಮಂಗಳವಾರದAದು ವಿಬಿ- ಜಿ ರಾಮ್ ಜಿ ಯೋಜನೆಯಡಿ ಬೀದಿನಾಟಕ ಹಾಗೂ ಐಇಸಿ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಗುಳೆ ಹೋಗದೆ ತಮ್ಮ ಊರಿನಲ್ಲಿ ಸರ್ಕಾರ ನಿಗದಿ ಪಡಿಸಿದ ದಿನಗಳ ವರೆಗೆ ಕೆಲಸ ಮಾಡಬಹುದು. ವೈಯಕ್ತಿಕ ಕಾಮಗಾರಿಗಳ ಲಾಭ ಪಡೆದುಕೊಳ್ಳಬೇಕು ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫ ದಿನಗಳ ಕೆಲಸ ಪಡೆಯಬಹುದು ಅದೇ ರೀತಿ ಪ್ರಸ್ತುತ ಬರಗಾರ ಇರುವ ಕಾರಣ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ, ಆ ನಿಟ್ಟಿನಲ್ಲಿ ಅರ್ಹ ಎಲ್ಲಾ ಕೂಲಿಕಾರರು ಕೆಲಸ ಮಾಡಬಹುದು ಎಂದರು.
ಬೀದಿನಾಟಕ ಐಇಸಿ ಚಟುವಟಿಕೆ: ಯೋಜನೆಯ ಸಂಬAಧಿಸಿದ ಮಾಹಿತಿಯನ್ನೊಳಗೊಂಡು ಜಾನಪದ ಗೀತೆಗಳು ಹಾಗೂ ಜಾಗೃತಿ ಗೀತೆಗಳನ್ನು ಹಾಡುತ್ತಾ ಸಂಪೂರ್ಣ ಮಾಹಿತಿಯುಳ್ಳ ನೈಜವಾಗಿ ಹಳ್ಳಿಯ ಸೊಗಡನ್ನು ಆಕರ್ಷಕವಾಗಿ ಸಾರ್ವಜನಿಕರ ಗಮನ ಸೆಳೆಯುವಂತೆ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.
ಈ ವೇಳೆ ಪಂಚಾಯಿತಿ ಹರ್ಷ ಎಸ್. ಎಂ, ದ್ವಿತಿಯ ದರ್ಜೆ ಸಹಯಕರಾದ ಓಂಕಾರ್ ಮೂರ್ತಿ, ತಾಂತ್ರಿಕ ಸಹಾಯಕರಾದ ಮಂಜುನಾಥ್ , ಡಿಇಒ ನಿಶ್ಚಿತ , ಬಿಎಫ್ ಟಿ ಜಯನಾಯ್ಕ , ಪಂಚಾಯಿತಿ ಸಿಬ್ಬಂದಿಗಳು, ಎಂಬಿಕೆ, ಸಂಜೀವಿನಿ ಸಂಘದ ಸದಸ್ಯರು, ದವನ ಭೂಮಿಕೆ ಸಾಂಸ್ಕöÈತಿಕ ಟ್ರಸ್ಟ್ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.
(Visited 1 times, 1 visits today)





