
ಬೆಂಗಳೂರು: ಶಾಲಾ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಬಳಸಿ ರೂಪಿಸಲಾದ ವಿಶಿಷ್ಟ ವಿದ್ಯಾ ಗಣಪತಿ ಅಲಂಕಾರವು ಭಕ್ತರು, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನ ಸೆಳೆಯುತ್ತಿದೆ. ಯುವ ಪೀಳಿಗೆಯನ್ನು ಭಕ್ತಿ, ಸಂಸ್ಕöÈತಿ ಮತ್ತು ಜ್ಞಾನದೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ರೂಪಿಸಲಾದ ಈ ವಿಶೇಷ ಅಲಂಕಾರವನ್ನು ಸಾರ್ವಜನಿಕ ದರ್ಶನಕ್ಕೆ ತೆರೆದಿಡಲಾಗಿದೆ.
ದೇವಸ್ಥಾನದ ಸಂಸ್ಥಾಪಕ ಸಮಿತಿ ಅಧ್ಯಕ್ಷರಾದ ರಾಮ್ ಮೋಹನ್ ರಾಜು ಮಾತನಾಡಿ, ಕಳೆದ ೧೦ ವರ್ಷಗಳಿಂದ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಗಣೇಶನಿಗೆ ವಿಭಿನ್ನ ಅಲಂಕಾರ ಮಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ವಿದ್ಯಾ ಗಣಪತಿ ಪರಿಕಲ್ಪನೆ ರೂಪಿಸಲಾಗಿದೆ ಎಂದರು.
ಸುಮಾರು ೪೦ ಮಂದಿ ೧೫ ದಿನಗಳ ಕಾಲ ಹಗಲು-ರಾತ್ರಿ ಶ್ರಮಿಸಿ ಈ ಅಲಂಕಾರವನ್ನು ಸಿದ್ಧಪಡಿಸಿದ್ದಾರೆ. ಸ್ಲೇಟು, ಬಳಪ, ಡಸ್ಟರ್, ಪೆನ್ಸಿಲ್, ರಬ್ಬರ್, ಪೆನ್ನು, ಸ್ಕೆಚ್ ಪೆನ್, ಮಾರ್ಕರ್, ಸ್ಕೂಲ್ ಬ್ಯಾಗ್, ಲಂಚ್ ಬಾಕ್ಸ್, ವಾಟರ್ ಬಾಟಲ್, ಕತ್ತರಿ, ಸ್ಟೇಪ್ಲರ್ ಪಿನ್ ಸೇರಿದಂತೆ ವಿದ್ಯಾರ್ಥಿಗಳ ದಿನನಿತ್ಯದ ಬಳಕೆಯ ವಸ್ತುಗಳನ್ನು ಅಲಂಕಾರದಲ್ಲಿ ಕಲಾತ್ಮಕವಾಗಿ ಅಳವಡಿಸಲಾಗಿದೆ.
ಅಲಂಕಾರದ ಪ್ರಮುಖ ಆಕರ್ಷಣೆಯಾಗಿ ನಟರಾಜ ಪೆನ್ಸಿಲ್ಗಳಿಂದ ಸಿದ್ಧಪಡಿಸಲಾದ ವಿಶೇಷ ಬ್ಯಾಕ್ಡ್ರಾಪ್ ಭಕ್ತರ ಗಮನ ಸೆಳೆಯುತ್ತಿದೆ.
ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳನ್ನು ದೇವಸ್ಥಾನದತ್ತ ಆಕರ್ಷಿಸುವುದರ ಜೊತೆಗೆ, ಜ್ಞಾನ ಮತ್ತು ಭಕ್ತಿಯ ನಡುವಿನ ಸಂಬAಧವನ್ನು ಅರ್ಥಮಾಡಿಕೊಡುವುದು ಈ ವರ್ಷದ ವಿದ್ಯಾ ಗಣಪತಿಯ ಉದ್ದೇಶ, ಎಂದು ಮೋಹನ್ ರಾಜು ಹೇಳಿದರು.
ಈ ವಿಶಿಷ್ಟ ಅಲಂಕಾರವನ್ನು ವೀಕ್ಷಿಸಲು ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ಮುಂದಿನ ೧೦ ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.





