
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ , ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಹಾಲಿ ನಿರ್ದೇಶಕ ಹಾಗೂ ಪತ್ರಕರ್ತ ಮಾರುತಿ ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಸೂಚನೆಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಖ್ಯೆ ೨೮೧/೨೦೨೬ ರಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಘದ ನಿರ್ದೇಶಕರೊಬ್ಬರ ಅಮಾನತು, ದಾಖಲೆಗಳ ಸೃಷ್ಟಿ ಹಾಗೂ ನಿರ್ವಹಣೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾದ ವಿಷಯಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊAಡು ನೊಂದ ನಿರ್ದೇಶಕ ಮಾರುತಿ ಪ್ರಸಾದ್ ಅವರ ದೂರಿನಲ್ಲಿ ದಾಖಲಾಗಿದೆ.
ದೂರಿನಲ್ಲಿ ಬಿಎನ್‌ಎಸ್ ಸೆಕ್ಷನ್ ೩೩೬, ೩೩೫, ೨೪೮, ೨೪೧,೩೧೮, ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೦(ಸೆಕ್ಷನ್ ೬೭) ಸೇರಿದಂತೆ ವಿವಿಧ ವಿಧಿಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಎಲೆಕ್ಟಾçನಿಕ್ ಮಾಧ್ಯಮದಲ್ಲಿ ಅಶ್ಲೀಲ ಅಥವಾ ಅಸಭ್ಯ ವಿಷಯ ಪ್ರಕಟಿಸಿರುವ ಆರೋಪಕ್ಕೆ ಸಂಬ0ಧಿಸಿದ0ತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೭ನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಅಮಾನತು ಆದೇಶದ ಬಗ್ಗೆ ಆಕ್ಷೇಪ: ನೊಂದ ದಲಿತ ನಿರ್ಧೇಶಕ ಮಾರುತಿ ಪ್ರಸಾದ್ ಅವರು ತಮ್ಮನ್ನು ಸಂಘದಿAದ ಅಮಾನತುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿದ್ದು, ಸಂಘದ ಬೈಲಾ ಮತ್ತು ನಿಯಮಾವಳಿಗಳಿಗೆ ವಿರುದ್ಧವಾಗಿ ಅಮಾನತು ಆದೇಶ ಹೊರಡಿಸಲಾಗಿದೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.
ಅಮಾನತು ಕ್ರಮಕ್ಕೆ ಜಿಲ್ಲಾ ಘಟಕಕ್ಕೆ ಅಧಿಕಾರವಿದೆಯೇ, ಸಂಘದ ಬೈಲಾದಲ್ಲಿ ಅಂತಹ ಕ್ರಮಕ್ಕೆ ಅವಕಾಶವಿದೆಯೇ ಹಾಗೂ ಸಂಬ0ಧಿತ ದಾಖಲೆಗಳ ಪ್ರಕ್ರಿಯೆ ನಿಯಮಾನುಸಾರ ನಡೆದಿದೆಯೇ ಎಂಬ ಪ್ರಶ್ನೆಗಳೂ ಇದೀಗ ಚರ್ಚೆಗೆ ಬಂದಿವೆ.
ಇದರ ಜೊತೆಗೆ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯ ಪ್ರಕಟಿಸಲಾಗಿದೆ, ಸುಳ್ಳು ಆರೋಪ ಮಾಡಲಾಗಿದೆ ಹಾಗೂ ದಾಖಲೆಗಳಿಗೆ ಸಂಬ0ಧಿಸಿದ0ತೆ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಮಾರುತಿ ಪ್ರಸಾದ್ ಅವರು ದೂರಿನಲ್ಲಿ ಆರೋಪ ಮಾಡಿದ್ದಾರೆ ಎಂದು ದಾಖಲಾಗಿದೆ. ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ
ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳು, ಸಂಬ0ಧಿತ ದಾಖಲೆಗಳು, ಸಂಘದ ಬೈಲಾ, ಅಮಾನತು ಆದೇಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ವಿಷಯಗಳನ್ನು ಪರಿಶೀಲಿಸಬೇಕಿದೆ.
ಪ್ರಕರಣ ದಾಖಲಾಗಿರುವುದೇ ಆರೋಪಗಳು ಸಾಬೀತಾದವು ಎಂಬ ಅರ್ಥವಲ್ಲ. ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಹಾಗೂ ಕಾನೂನುಬದ್ಧ ಹೊಣೆಗಾರಿಕೆ ಕುರಿತು ಸ್ಪಷ್ಟತೆ ದೊರೆಯಲಿದೆ. ಆರೋಪಕ್ಕೆ ಒಳಗಾಗಿರುವ ಯೋಗೀಶ್ ಅವರ ಪ್ರತಿಕ್ರಿಯೆಯೂ ಪ್ರಕಟವಾಗಬೇಕಿದೆ.
ಕೆಯುಡಬ್ಲು÷್ಯಜೆ ಜಿಲ್ಲಾ ಘಟಕದ ಒಳಗಿನ ಭಿನ್ನಾಭಿಪ್ರಾಯ ಇದೀಗ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿರುವುದು ಪತ್ರಕರ್ತರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ, ಪತ್ರಕರ್ತರು ಎಂದರೆ ಎಲ್ಲರಿಗೂ ಮಾರ್ಗದರ್ಶನ ನೀಡಬೇಕಾದವರು ಆದರೆ ಪತ್ರಕರ್ತರ ಸಂಘದಲ್ಲಿಯೇ ಸಂಘರ್ಷ ಏರ್ಪಟ್ಟು ದಲಿತ ನಿರ್ದೇಶಕ ಮನನೊಂದು ನ್ಯಾಯಾಲಯದ ಮೆಟ್ಟಿಲೇರಿರುವುದು ಸರಿಯಲ್ಲ , ಅಧ್ಯಕ್ಷರ ನಡೆ ಸರಿಯಲ್ಲ ಎನ್ನುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೇಳಿಕೆ ಮಾತುಗಳನ್ನು ಕೇಳುವ ಆಪಾದನೆ ಹೊತ್ತ ಅನನುಭವಿ ಅಧ್ಯಕ್ಷರ ಈ ರೀತಿಯ ವರ್ತನೆಯಿಂದ ಬಹುತೇಕ ಪತ್ರಕರ್ತರು ಮನ ನೊಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೇಸಿಗೆ ಸಿಲುಕಿ ಪೇಚಾಡುತ್ತಿರುವ ಜಿಲ್ಲಾಧ್ಯಕ್ಷರು ಇನ್ನಾದರೂ ತಮ್ಮ ವರ್ತನೆಯನ್ನು ಬದಲಾಯಿಸಿ ಪತ್ರಕರ್ತರ ಏಳ್ಗೆಗೆ ನಿಲ್ಲುತ್ತಾರಾ ಅಥವಾ ಪ್ರತ್ರಕರ್ತರ ಸಂಘದ ಮಾನ ಹರಾಜು ಹಾಕುತ್ತಾರಾ ಕಾದುನೋಡೋಣ.





