BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ
  • ಪುಟ್ಟ ಮನೆ ಬೆಂಕಿಗೆ ಆಹುತಿ
  • ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ
  • ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ
  • ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
  • ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ
  • ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ
Trending

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

ತುಮಕೂರಿನ ಹಲವು ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ನೆರವಿಗೆ ಸೂಚನೆ
By News Desk BenkiyabaleUpdated:September 22, 2026 4:57 pm

ತುಮಕೂರು
ತುಮಕೂರು ತಾಲ್ಲೂಕಿನ ಕಣಕೂಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕುಪ್ಪೆ, ಕೆಂಬಳಲು, ಚನ್ನೇಹಳ್ಳಿ ಹಾಗೂ ಉರ್ಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತಘಟ್ಟ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೇಟಿ ನೀಡಿ, ಬೆಳೆ ಹಾನಿ, ಕುಡಿಯುವ ನೀರು, ಮೇವು ಲಭ್ಯತೆ ಹಾಗೂ ಆಶ್ರಯ ನಿವೇಶನಗಳ ಪ್ರಗತಿ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರೈತರಿಂದ ಬೆಳೆ ಹಾನಿಯ ಪ್ರಮಾಣ ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಸರ್ಕಾರದ ನಿಯಮಾನುಸಾರ ಬೆಳೆ ಹಾನಿ ಕುರಿತು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸುವಂತೆ ಸೂಚಿಸಿದರು.
ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅಂP ವತಿಯಿಂದ ಕೊರೆಯಲಾಗಿರುವ ಬೋರ್‍ವೆಲ್‍ಗಳನ್ನೂ ವೀಕ್ಷಿಸಿದರು. ಬೋರ್‍ವೆಲ್‍ಗಳ ನೀರಿನ ಲಭ್ಯತೆ ಹಾಗೂ ಗ್ರಾಮಗಳಿಗೆ ನೀರು ಪೂರೈಕೆ ವ್ಯವಸ್ಥೆಯ ಕುರಿತು ಮಾಹಿತಿ ಪಡೆದು, ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ತುಮುಲ್ ವತಿಯಿಂದ ಮಿನಿ ಕಿಟ್‍ಗಳ ಮೂಲಕ ಕೈಗೊಂಡಿರುವ ಮೇವು ಬೆಳೆ ಉತ್ಪಾದನೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಲಭ್ಯವಾಗುವಂತೆ ರೈತರಿಗೆ ಮೇವು ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಹಾಗೂ ವಿತರಿಸಿರುವ ಮಿನಿ ಕಿಟ್‍ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆಶ್ರಯ ಯೋಜನೆಯಡಿ ಗುರುತಿಸಲಾಗಿರುವ ನಿವೇಶನ ಸ್ಥಳಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ನಿವೇಶನಗಳ ಲಭ್ಯತೆ, ಸ್ಥಳದ ಸ್ಥಿತಿ ಹಾಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಸೌಲಭ್ಯವನ್ನು ಸರ್ಕಾರದ ನಿಯಮಾನುಸಾರ ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿವೇಶನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಯಾವುದೇ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗ್ರಾಮಸ್ಥರು ಹಾಗೂ ರೈತರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು, ಕೃಷಿ, ಮೇವು ಹಾಗೂ ಜಾನುವಾರುಗಳಿಗೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಸ್ಥಳ ಪರಿಶೀಲನಾ ಸಮಯದಲ್ಲಿ ವಾಸುದೇವ್ ಬಿ.ಹೆಚ್. ಕಾರ್ಯಪಾಲಕ ಇಂಜಿನಿಯರ್, ಗ್ರಾಕುನೀ &ನೈವಿ, ತುಮಕೂರು, ಶಿವಪ್ರಸಾದ್ ಉಪನಿರ್ದೇಶಕರು, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ, ತುಮಕೂರು, ಎಸ್ ಲಕ್ಷ್ಮಣ್ ಕಳ್ಳನವರ್ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ತುಮಕೂರು. ರಾಜೇಶ್ವರಿ ಪಿ.ಎಸ್. ತಹಶೀಲ್ದಾರ್, ತುಮಕೂರು ತಾಲ್ಲೂಕು , ಲಕ್ಷ್ಮೀನಾರಾಯಣ್, ತಾಲ್ಲುಕು ಪಂಚಾಯತಿ, ತುಮಕೂರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

 

 

(Visited 1 times, 1 visits today)
DC dc tumkur tumakur
Previous Articleಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ
Next Article ಪುಟ್ಟ ಮನೆ ಬೆಂಕಿಗೆ ಆಹುತಿ
News Desk Benkiyabale

Related Posts

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm news

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm ಇತರೆ ಸುದ್ಧಿಗಳು

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm news
ತಾಜಾ ಸುದ್ಧಿಗಳು
news

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm
ಇತರೆ ಸುದ್ಧಿಗಳು

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm
Trending

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm
news

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm
news

ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ

September 21, 2026 5:54 pm
news

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm
Our Youtube Channel
Our Picks

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

September 22, 2026 5:05 pm

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm

ಜನ ಮೆಚ್ಚಿದ ಅಧಿಕಾರಿಗೆ ಜನರಿಂದಲೇ ಅದ್ದೂರಿ ಸೀಮಂತ

September 21, 2026 5:54 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‍ಗಳು ಪುಡಿಪುಡಿ

By News Desk BenkiyabaleSeptember 22, 2026 5:05 pm

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಯ ಕಿಟಕಿ ಗ್ಲಾಸ್‍ಗಳನ್ನ ಕಿಡಿಗೇಡಿಗಳ ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ…

ಪುಟ್ಟ ಮನೆ ಬೆಂಕಿಗೆ ಆಹುತಿ

September 22, 2026 5:01 pm

ಬೆಳೆ ಹಾನಿ, ಆಶ್ರಯ ನಿವೇಶನಗಳ ಸ್ಥಳ ಪರಿಶೀಲನೆ

September 22, 2026 4:57 pm

ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕೆಂದು ಬೃಹತ್ ಪಾದಯಾತ್ರೆ

September 21, 2026 5:56 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.