BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ
  • ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)
  • ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ
  • ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ
  • ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
  • ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ
  • ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ
  • ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
news

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleUpdated:September 23, 2026 5:51 pm

ತುಮಕೂರು: ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಪ್ರದೇಶಗಳಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಗುರುತಿಸಿ, ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಂP ಯೋಜನೆಯಡಿ ಕೊರೆಯಲಾದ ವಿಫಲ ಬೋರ್‌ವೆಲ್‌ಗಳ ಕುರಿತು ಸುದೀರ್ಘವಾಗಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಪ್ರಸ್ತುತ ಕುಡಿಯುವ ನೀರಿನ ಸರಬರಾಜಿನ ಸ್ಥಿತಿ-ಗತಿ ಕುರಿತು ಅಧಿಕಾರಿಗಳಿಂದ ತಾಲೂಕುವಾರು ಮಾಹಿತಿ ಪಡೆದು ಪರಿಶೀಲಿಸಿದರು.
ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ವಿಫಲ ಬೋರ್‌ವೆಲ್‌ಗಳ ಸ್ಥಳ ಪರಿಶೀಲನೆ ನಡೆಸಿ, ಉPS ಛಾಯಾಚಿತ್ರಗಳೊಂದಿಗೆ ಸಮಗ್ರ ತಾಂತ್ರಿಕ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದರು.
ತಾಂತ್ರಿಕವಾಗಿ ಸಾಧ್ಯವಿರುವ ಕಡೆಗಳಲ್ಲಿ ಬೋರ್‌ವೆಲ್ ಪುನಶ್ಚೇತನ ಅಥವಾ ಅಗತ್ಯವಿದ್ದಲ್ಲಿ ಆಳಗೊಳಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ತಾಂತ್ರಿಕವಾಗಿ ಪುನಶ್ಚೇತನಗೊಳಿಸಲು ಸಾಧ್ಯವಾಗದ ಬೋರ್‌ವೆಲ್‌ಗಳಿದ್ದಲ್ಲಿ ಪರ್ಯಾಯ ಸ್ಥಳ ಗುರುತಿಸಿ ಹೊಸ ಬೋರ್‌ವೆಲ್ ಕೊರೆಯಲು ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ವಿಫಲ ಬೋರ್‌ವೆಲ್‌ಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ, ಅಗತ್ಯವಿರುವ ಪ್ರದೇಶಗಳಲ್ಲಿ ತಕ್ಷಣವೇ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಅಲ್ಲದೆ, ವಿಫಲ ಬೋರ್‌ವೆಲ್‌ಗಳ ಸುರಕ್ಷಿತ ಮುಚ್ಚುವಿಕೆ, ಸ್ಥಳದ ದಾಖಲೀಕರಣ ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ಜಿಪಿಎಸ್ ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೇವಿನ ಲಭ್ಯತೆ ಪರಿಶೀಲನೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೇವಿನ ಲಭ್ಯತೆ ಮತ್ತು ಬೇಡಿಕೆ ಕುರಿತು ಮಾಹಿತಿ ಪಡೆದ ಅವರು, ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರದೇಶದಲ್ಲಿ ಮೇವು ಕೊರತೆ ಉಂಟಾಗದAತೆ ತಾಲೂಕು ಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಿನಿ ಕಿಟ್ ಹಾಗೂ ಬಿತ್ತನೆ ಪ್ರಗತಿ: ಸಭೆಯಲ್ಲಿ ಮಿನಿ ಕಿಟ್‌ಗಳ ವಿತರಣೆ ಹಾಗೂ ಬಿತ್ತನೆ ಪ್ರಗತಿ ಕುರಿತು ಸಹ ಪರಿಶೀಲನೆ ನಡೆಸಲಾಯಿತು. ಬಾಕಿ ಇರುವ ಮಿನಿ ಕಿಟ್‌ಗಳ ವಿತರಣೆ ಮತ್ತು ಬಿತ್ತನೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಸೂಚಿಸಿದರು.
ಬೆಳೆ ನಷ್ಟದ ಪರಿಶೀಲನೆ: ಜಿಲ್ಲೆಯ ವಿವಿಧ ತಾಲೂಕುಗಳ ಬೆಳೆ ನಷ್ಟದ ತಾಲೂಕುವಾರು ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಬೆಳೆ ಹಾನಿಯ ವಾಸ್ತವಿಕ ಸ್ಥಿತಿಯನ್ನು ಕ್ಷೇತ್ರಮಟ್ಟದಲ್ಲಿ ಪರಿಶೀಲಿಸಬೇಕು. ಬೆಳೆ ಹಾನಿಗೆ ಸಂಬAಧಿಸಿದ ಅಗತ್ಯ ದಾಖಲೆ ಹಾಗೂ ವರದಿಗಳನ್ನು ನಿಯಮಾನುಸಾರ ಮತ್ತು ಸಮರ್ಪಕವಾಗಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಲ್ಲಾ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮನ್‌ಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಮೇವು ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಕುರಿತು ನಿರಂತರ ನಿಗಾ ವಹಿಸಬೇಕು. ಇದೇ ಶುಕ್ರವಾರ ಎಲ್ಲಾ ತಾಲೂಕುಗಳಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸಭೆಯನ್ನು ಏರ್ಪಡಿಸಲು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ತಾಲೂಕು ಮಟ್ಟದ ಸಹಾಯವಾಣಿಗಳ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಸಹಾಯವಾಣಿ ಮೂಲಕ ಸ್ವೀಕರಿಸಲಾಗುತ್ತಿರುವ ಕರೆ ಹಾಗೂ ಸಾರ್ವಜನಿಕರಿಂದ ಬಂದಿರುವ ಕುಡಿಯುವ ನೀರಿಗೆ ಸಂಬAಧಿಸಿದ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಸಮಸ್ಯಾತ್ಮಕ ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚಿಸಿದರು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿರುವ ಗ್ರಾಮಗಳ ವಿವರ ಹಾಗೂ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪರಿಶೀಲಿಸಿದರು.
ಅಲ್ಲದೆ, ಈಗಾಗಲೇ ನೀರು ಸರಬರಾಜು ಮಾಡಿರುವ ಟ್ಯಾಂಕರ್‌ಗಳ ಬಿಲ್‌ಗಳ ಹಣ ಪಾವತಿ ಪ್ರಕ್ರಿಯೆಯ ಬಗ್ಗೆ ಮತ್ತು ಬರಗಾಲ ಘೋಷಣೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಹಾಗೂ ನಿಯಮಾನುಸಾರ ಬಾಕಿ ಇರುವ ಟ್ಯಾಂಕರ್‌ಗಳ ಹಣವನ್ನು ತ್ವರಿತವಾಗಿ ಪಾವತಿಸುವಂತೆ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ವಾಸುದೇವ್ ಬಿ.ಎಚ್. ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಶಿವಪ್ರಸಾದ್ ಎಚ್.ಎಂ. ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ್ ಎಸ್. ಕಳ್ಳಣ್ಣನವರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ಹುಳಿಯಾರು
Previous Articleಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ
Next Article ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ
News Desk Benkiyabale

Related Posts

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm news

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm news
ತಾಜಾ ಸುದ್ಧಿಗಳು
news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm
news

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm
news

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm
news

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm
news

ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 09, 2026 5:42 pm
news

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

November 07, 2026 5:44 pm
Our Youtube Channel
Our Picks

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

November 09, 2026 5:48 pm

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm

ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 09, 2026 5:42 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ದೀಪಾವಳಿ ಸಂಭ್ರಮ: ಲಕ್ಷಿ ್ಮ ಪೂಜೆಯಲ್ಲಿ ಮಿಂದೆದ್ದ ಹುಳಿಯಾರು ಪಟ್ಟಣ

By News Desk BenkiyabaleNovember 09, 2026 5:48 pm

ಹುಳಿಯಾರು: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಾದ್ಯಂತ ಭಾನುವಾರ ಮತ್ತು ಸೋಮವಾರ ಅಮಾವಾಸ್ಯೆಯ ಪ್ರಯುಕ್ತ ಲಕ್ಷ್ಮಿ ಪೂಜೆಯನ್ನು ಅತ್ಯಂತ ಸಡಗರ ಹಾಗೂ…

ಬಸ್ ಪ್ರಯಾಣ ದರ, ಹಾಲಿನ ದರ ಹೆಚ್ಚಳ ಬಡವರ ಜೇಬಿಗೆ ಕತ್ತರಿ: ಸಿಪಿಐ(ಎಂ)

November 09, 2026 5:46 pm

ತುಮಕೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ: ಸಿದ್ಧತೆಗೆ ಡಿಸಿ ಸೂಚನೆ

November 09, 2026 5:45 pm

ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ

November 09, 2026 5:43 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.