BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು
  • ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು
  • ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ
  • ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು
  • ಶೋಷಿತರ ವಿಕಾಸದ ಅರಿವಿನ ಜ್ಯೋತಿ ವಾಲ್ಮೀಕಿ ಮಹರ್ಷಿ
  • ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು
  • ಮಹರ್ಷಿ ವಾಲ್ಮೀಕಿಯವರ ಆದರ್ಶ, ತತ್ವಗಳು ಯುವಜನತೆಗೆ ದಾರಿದೀಪ
  • ರೋಟರಿ, ಇನ್ನರ್ ವ್ಹೀಲ್ ಸಂಸ್ಥೆಗಳಿಂದ ಪೋಲಿಯೊ ದಿನ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ
news

ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ

ಹೊನ್ನಮೇಡಿ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ: ತಾಪಂ ಆಕಾಂಕ್ಷಿ ವಿಷ್ಣು ಭೇಟಿ
By News Desk BenkiyabaleUpdated:October 27, 2026 5:47 pm

ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮೇಡಿ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ, ಬೀದಿ ದೀಪಗಳ ಅಭಾವ, ರಸ್ತೆ ಮತ್ತು ಸ್ವಚ್ಛತೆಯ ಸಮಸ್ಯೆಗಳಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿ ಕೇವಲ ಒಂದೇ ಒಂದು ಬೀದಿ ದೀಪವಿದ್ದು, ರಾತ್ರಿ ವೇಳೆ ಜನರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಮಂಜೂರಾಗಿದ್ದ ಹೈಮಾಸ್ಟ್ ದೀಪವನ್ನು ಪ್ರಭಾವ ಬಳಸಿ ಕನ್ನಮೇಡಿ ಗ್ರಾಮಕ್ಕೆ ವರ್ಗಾಯಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೀಪದ ಕಂಬ ಅಳವಡಿಸಲು ನಿರ್ಮಿಸಲಾಗಿದ್ದ ಪಿಲ್ಲರ್ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ ಎಂದು ದೂರಿದ್ದಾರೆ.
ಗ್ರಾಮದ ನಾಗೇಶ್ ಮಾತನಾಡಿ, ಕುಡಿಯುವ ನೀರಿಗಾಗಿ ಜನರು ಮೂರ್ನಾಲ್ಕು ಕಿಲೋಮೀಟರ್ ದೂರದ ಖಾಸಗಿ ಜಮೀನುಗಳಿಗೆ ತೆರಳಿ ನೀರು ತರುವ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮಕ್ಕೆ ಭೇಟಿ ನೀಡಿದ ಚೆನ್ನಕೇಶವಪುರ ತಾಲೂಕು ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿ ವಿಷ್ಣು ನಂದೀಶ್ವರಡು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಸುಮಾರು 80 ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಚೆನ್ನಕೇಶವಪುರ ತಾಲೂಕು ಪಂಚಾಯಿತಿ ಕ್ಷೇತ್ರವು ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ವಿದ್ಯಾವಂತ ಯುವಕರು ರಾಜಕೀಯಕ್ಕೆ ಪ್ರವೇಶಿಸಿ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಉದ್ದೇಶದಿಂದ ತಾವು ಮುಂದಾಗಿರುವುದಾಗಿ ವಿಷ್ಣು ನಂದೀಶ್ವರಡು ತಿಳಿಸಿದರು.
ಒಟ್ಟಿನಲ್ಲಿ, ಹೊನ್ನಮೇಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 1 times, 1 visits today)
kannada news karnataka local news madhugiri tumakur tumkur tumkur news ತುಮಕೂರು:
Previous Articleಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು
Next Article ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು
News Desk Benkiyabale

Related Posts

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm news

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm news

ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು

October 26, 2026 5:51 pm news
ತಾಜಾ ಸುದ್ಧಿಗಳು
news

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm
news

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm
news

ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ

October 27, 2026 5:47 pm
news

ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು

October 26, 2026 5:51 pm
news

ಶೋಷಿತರ ವಿಕಾಸದ ಅರಿವಿನ ಜ್ಯೋತಿ ವಾಲ್ಮೀಕಿ ಮಹರ್ಷಿ

October 26, 2026 5:36 pm
news

ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು

October 26, 2026 5:35 pm
Our Youtube Channel
Our Picks

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm

ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ

October 27, 2026 5:47 pm

ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು

October 26, 2026 5:51 pm

ಶೋಷಿತರ ವಿಕಾಸದ ಅರಿವಿನ ಜ್ಯೋತಿ ವಾಲ್ಮೀಕಿ ಮಹರ್ಷಿ

October 26, 2026 5:36 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

By News Desk BenkiyabaleOctober 27, 2026 5:59 pm

ಕೊರಟಗೆರೆ: ಕೆರೆಯ ಪಕ್ಕದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಐದು ಕುರಿ ಹಾಗೂ ಒಂದು ಮೇಕೆ…

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm

ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ

October 27, 2026 5:47 pm

ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು

October 26, 2026 5:51 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.