BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ
  • ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು
  • ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್
  • ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು
  • ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು
  • ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ
  • ಸಮಾಜದ ಒಳಿತಿಗಾಗಿ ನಮ್ಮಲ್ಲಿ ಸಕರಾತ್ಮಕ ಬದಲಾವಣೆ ತಂದುಕೊಳ್ಳಬೇಕು
  • ಶೋಷಿತರ ವಿಕಾಸದ ಅರಿವಿನ ಜ್ಯೋತಿ ವಾಲ್ಮೀಕಿ ಮಹರ್ಷಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು
news

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

By News Desk BenkiyabaleUpdated:October 28, 2026 3:26 pm

ತುಮಕೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026(SIಖ-2026) ಪ್ರಕ್ರಿಯೆಯಡಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 20,94,762 ಮತದಾರಿದ್ದಾರೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯ ಎನ್‍ಐಸಿ ವೆಬ್‍ಸೈಟ್ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ಪ್ರಚುರಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳಿದ್ದಲ್ಲಿ, ಹೆಸರು ಬಿಟ್ಟು ಹೋಗಿದ್ದರೆ, ತಿದ್ದುಪಡಿಗಳಿದ್ದಲ್ಲಿ ನಿರಂತರ ಪರಿಷ್ಕರಣೆಯಡಿ ನಿಗದಿತ ನಮೂನೆ-6, 7 ಮತ್ತು 8ರಲ್ಲಿ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 10,36,724 ಪುರುಷ, 10,57,981 ಮಹಿಳೆಯರು ಹಾಗೂ 57 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 20,94,762 ಮತದಾರರಿದ್ದು, 18-19 ವರ್ಷದೊಳಗಿನ 15,754 ಪುರುಷರು, 14,543 ಮಹಿಳೆಯರು ಹಾಗೂ 4 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 30,301 ಯುವ ಮತದಾರರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಮೂನೆ-7ರಂತೆ ಮತದಾರರ ಪಟ್ಟಿಯಿಂದ 7,248 ಮತದಾರರನ್ನು ಕೈಬಿಡಲಾಗಿದ್ದು, ಈ ಪೈಕಿ 162 ಮರಣ ಹೊಂದಿದ, 25 ಗೈರು, 63 ಈಗಾಗಲೇ ನೋಂದಣಿಯಾದ, 4777 ಸ್ಥಳಾಂತರಗೊಂಡ ಹಾಗೂ 2221 ಇತರೆ ಸೇರಿದಂತೆ ಒಟ್ಟು 7,248 ಮತದಾರರನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯ ಹಾರ್ಡ್ ಕಾಪಿ ಮತ್ತು ಸಾಫ್ಟ್ ಕಾಪಿಯನ್ನು ವಿತರಿಸಲಾಯಿತು.
ಸಾರ್ವಜನಿಕರು ಸಂಬಂಧಿಸಿದ ಮತಗಟ್ಟೆಗಳಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್‍ಲೈನ್  ಮೂಲಕ ಅಥವಾ ಆಫ್‍ಲೈನ್ ಮೂಲಕ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್
Next Article ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ
News Desk Benkiyabale

Related Posts

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm news

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm news

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm news
ತಾಜಾ ಸುದ್ಧಿಗಳು
news

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm
news

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm
news

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm
news

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm
news

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm
news

ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ

October 27, 2026 5:47 pm
Our Youtube Channel
Our Picks

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm

ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು

October 27, 2026 5:58 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

By News Desk BenkiyabaleOctober 28, 2026 3:27 pm

ತುರುವೇಕೆರೆ: ಬ್ಯಾಂಕ್ ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು ಹಾಗೂ ಹರಾಜು ಮಾಡಿರುವ ಭೂಮಿಯನ್ನು ರೈತನಿಗೆ ವಾಪಸ್ಸು ನೀಡಬೇಕು…

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.