BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು
  • ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
  • ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ
  • ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು
  • ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್
  • ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು
  • ಕನ್ನಡದ ಮೂಲಕ ಜಗತ್ತನ್ನು ಕಾಣಬೇಕು: ಇಂಗ್ಲಿಷ್ ಮೂಲಕ ಕನ್ನಡವನ್ನು ಅರಿಯಬೇಕು
  • ನೀರು, ಬೀದಿ ದೀಪವಿಲ್ಲದೆ ಜನರ ಪರದಾಟ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು
news

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

ನಕಲಿ, ಕಲಬೆರಕೆ ಆಹಾರ, ಔಷಧಗಳ ಬಗ್ಗೆ ಜನ ಜಾಗೃತಿ ಅಭಿಯಾನ
By News Desk BenkiyabaleUpdated:October 28, 2026 5:59 pm

ತುಮಕೂರು: ಹಾಲಪ್ಪ ಪ್ರತಿಷ್ಠಾನ ತುಮಕೂರು ಇವರು, ಐಎಂಎ, ಬೀದಿ ಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ತುಮಕೂರು ಹಾಗು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಕಲಿ, ಕಲಬೆರಕೆ ಆಹಾರ, ಔಷಧಗಳ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜಾಗೃತಿ ಅಭಿಯಾನ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಔಷಧ, ಅಹಾರ ಇವರೆಡಕ್ಕೂ ನೇರವಾದ ಸಂಬಂಧವಿದೆ. ಕಲಬೆರಕ ರಹಿತ, ರುಚಿಯ ಜೊತೆಗೆ ಶುಚಿಯಿಂದ ಕೂಡಿದ ಆಹಾರ ಸೇವೆಯಿಂದ ಮನುಷ್ಯ ಔಷಧಗಳಿಂದ ದೂರವಿರಲು ಸಾಧ್ಯ. ಒಂದು ವೇಳೆ ಕಲಬೆರಕೆ, ಅಶುಚಿತ್ವ ಆಹಾರದಿಂದ ತೊಂದರೆಯಾಗಿ ಆಸ್ಪತ್ರೆಗೆ ಸೇರಿದಂತಹ ಸಂದರ್ಭದಲ್ಲಿ ಅಲ್ಲಿಯೂ ನಕಲಿ ಇಲ್ಲವೇ ಕಲಬೆರಕ ಔಷಧಗಳನ್ನು ಕೊಟ್ಟು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯ ಹೆಚ್ಚಿದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ. ಔಷಧ ನಿಯಂತ್ರಣ, ಆಹಾರ ಸುರಕ್ಷತೆ ಅಧಿಕಾರಿಗಳ ಜೊತೆಗೆ, ಬಿಸಿಯೂಟ(ಅಕ್ಷರದಾಸೋಹ) ಅಧಿಕಾರಿಗಳ ಸಹ ನಮ್ಮೊಂದಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ತಾಲೂಕು, ಹೋಬಳಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಗುರಿಯಿದೆ. ಜನರಿಗೆ ಶುಚಿಯಿಂದ ಗುಣಮಟ್ಟದ, ಕಲಬೆರಕೆ ರಹಿತ ಪೌಷ್ಠಿಕ ಆಹಾರ ಹಾಗೂ ಕಲಬೆರಕೆ ರಹಿತ ಔಷಧಗಳು ದೊರೆಯುಬೇಕೆಂಬುದು ನಮ್ಮ ಗುರಿಯಾಗಿದೆ. ಇದು ಯಾರ ವಿರುದ್ದವೂ ನಡೆಸುತ್ತಿರುವ ಹೋರಾಟವಲ್ಲ. ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಿದೆ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಧಾಕರ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 10 ರಿಂದ 1500 ಮಕ್ಕಳು ಇರುವ ಶಾಲೆಗಳಲ್ಲಿ ಬೆಳಗಿನ ಕ್ಷೀರಭಾಗ್ಯ,ಮದ್ಯಾಹ್ನದ ಬಿಸಿಯೂಟ ಹಾಗೂ ಸಂಜೆ ಗಣಿಭಾದಿತ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಅತ್ಯಂತ ಸುರಕ್ಷಿತವಾಗಿ ಬಿಸಿಯೂಟ ವಿತರಣೆ ನಡೆಯುತ್ತಿದೆ.ನಮ್ಮಲ್ಲಿರುವ ಬಿಸಿಯೂಟ ತಯಾರಕರಲ್ಲಿ ಶೇ70ರಷ್ಟು ಸಿಬ್ಬಂದಿ ವಿದ್ಯಾವಂತರಿದ್ದರೆ, ಶೇ30 ರಷ್ಟು ಸಿಬ್ಬಂದಿ ಅವಿದ್ಯಾವಂತರು. ಆದರೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ, ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಕಾಲಕಾಲಕ್ಕೆ ಅವರಿಗೆ ತರಬೇತಿ ನೀಡಲಾಗುತ್ತಿದೆ. ಇದರ ಜೊತೆಗೆ, ಕೇಂದ್ರೀಕೃತ ಅಡುಗೆ ಮನೆ ವ್ಯವಸ್ಥೆಯ ಬಗ್ಗೆಯೂ ಆಲೋಚನೆ ಇದೆ ಎಂದರು.
ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳಾದ ಚಂದ್ರಕಲಾ ಶಿಲ್ಪ ಮಾತನಾಡಿ, ಔಷಧಗಳ ಕಲಬೆರಕೆ ಮತ್ತು ಕಡಿಮೆ ಗುಣಮಟ್ಟದಿಂದ ಮನುಷ್ಯನ ಮೇಲೆ ಸಾಕಷ್ಟು ದುಷ್ಪರಿಣಾಮ ಎದುರಿಸಬೇಕಾಗುತ್ತಿದೆ. ಕಡಿಮೆ ಗುಣಮಟ್ಟದಿಂದ ಖಾಯಿಲೆ ವಾಸಿಯಾಗುವುದು ತಡವಾದರೆ, ಕಲಬೆರಕೆಯಿಂದ ಅಡ್ಡಪರಿಣಾಮಕ್ಕೆ ತುತ್ತಾಗಬೇಕಾಗುತ್ತೆದೆ. ಹಾಗಾಗಿ ಜನರು ಜಾಗೃತರಾಗಬೇಕು. ಅಧಿಕೃತ ಎಜೆನ್ಸಿಗಳಿಂದ ಸರಬರಾಜರಾಗಿರುವ ಔಷಧಗಳನ್ನು ಅಂಗಡಿಗಳಲ್ಲಿ ವೈದ್ಯರ ಸಲಹೆಯಂತೆ ಖರೀದಿಸಿ ಬಳಸಬೇಕು. ಡಿಸ್ಕೌಂಟ್‍ಗೆ ಮಾರು ಹೋಗಬೇಡಿ, ಸಾಧ್ಯವಾದಷ್ಟು ಅನ್‍ಲೈನ್‍ನಲ್ಲಿ ಔಷಧಿ ಖರೀದಿಯನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾ ಅಧಿಕಾರಿ ಹರೀಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 8000 ಕ್ಕೂ ಅಧಿಕ ಹೊಟೇಲ್, ಉಪಹಾರ ಮಂದಿರಗಳಿವೆ.ನಮಲ್ಲಿ ನೊಂದಣಿಯಾಗಿರುವುದು ಕೇವಲ 1700 ಮಾತ್ರ. ನೊಂದಣಿಯಾದರೆ ಮಾತ್ರ ಕ್ರಮ ಕೈಗೊಳ್ಳಲು ಅವಕಾಶ ಇದೆ.ಹೊಟೇಲ್ ಮತ್ತು ಉಪಹಾರ ಮಂದಿರಗಳಲ್ಲಿ ದೊರೆಯುವ ಆಹಾರದ ಬಗ್ಗೆ ಜನರು ಸ್ವಯಂ ಜಾಗೃತರಾಗಬೇಕು. ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ರಸ್ತೆ ಬದಿಯಲ್ಲಿ, ಸುರಕ್ಷತೆ ಇಲ್ಲದ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.ಆರ್ಟಿಪಿಸಿಯಲ್ ಬಣ್ಣ,ಕಚ್ಚಾವಸ್ತುಗಳನ್ನು ಬಳಸುವುದರಿಂದ ಕ್ಯಾನ್ಸರ್‍ನಂತಹ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಒಂದು ಸಮಿಕ್ಷೆಯ ಪ್ರಕಾರ 2067ರ ವೇಳೆ ಭಾರತದ ಪ್ರತಿ ಮನೆಯಲ್ಲಿಯೂ ಓರ್ವ ಕ್ಯಾನ್ಸರ್ ರೋಗಿ ಇರುತ್ತಾನೆ ಎನ್ನಲಾಗುತ್ತಿದೆ. ಇದರಿಂದ ಹೊರಬರಲು ಜನರು ಮನೆಯಲ್ಲಿ ಮತ್ತು ಹೊಟೇಲ್‍ಗಳಲ್ಲಿ ಮೊದಲು ಆಹಾರದ ಗುಣಮಟ್ಟ ಮತ್ತು ಶುಚಿತ್ವಕ್ಕೆ ಒತ್ತು ನೀಡಬೇಕು.ಸಾಧ್ಯವಾದಷ್ಟು ಜಂಕ್ ಪುಡ್‍ಗಳಿಂದ ದೂರ ಇರಬೇಕು.ಬೀದಿ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಆಹಾರ ಪದಾರ್ಥಗಳಾದ ಬೆಳೆ,ಬೆಲ್ಲ ಇನ್ನಿತರ ಪದಾರ್ಥಗಳನ್ನು ಕೊಳ್ಳಬೇಡಿ, ಅಧಿಕೃತ ಅಂಗಡಿಗಳಲ್ಲಿಯೇ, ದಿನಸಿ ಮಳಿಗೆಗಳಲ್ಲಿ ಕೊಳ್ಳಿ, ಒಂದು ವೇಳೆ ಕಲಬೆರಕ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ ಕಂಡುಬಂದರೆ ಇಲಾಖೆಯ ಕ್ಯೂ.ಆರ್. ಕೋಡ್ ಬಳಸಿ ದೂರು ನೀಡುವಂತೆ ಸಲಹೆ ನೀಡಿದರು.
ಔಷಧ ವ್ಯಾಪಾರಿಗಳ ಪರವಾಗಿ ಮಾತನಾಡಿ ಪಂಡಿತ ಜವಹರ್, ನೀರು, ಆಹಾರ, ಔಷಧ ಎಲ್ಲವೂ ಕಲಬೆರಕೆಯಾಗಿ ಮನುಷ್ಯ ಹಲವಾರು ತೊಂದರೆಗಳಿಗೆ ಸಿಲುಕುತಿದ್ದಾನೆ. ಜನರು ಎಚ್ಚೆತ್ತುಕೊಳ್ಳಬೇಕು.ಮೆಡಿಕಲ್ ರೆಪ್‍ಗಳು, ಮೆಡಿಕಲ್ ಶಾಫ್‍ನವರು ಶಿಫಾರಸ್ಸು ಮಾಡುವ ಔಷಧಗಳಿಂದ ದೂರವಿರಿ,ಔಷಧಿಯ ಉತ್ಪಾಧನೆ ಮತ್ತು ಎಕ್ಸ್ಫೇರಿ ದಿನಾಂಕಗಳನ್ನು ಖಚಿತ ಪಡಿಸಿಕೊಳ್ಳಿ, ಔಷಧಿಗೆ ಬಳಸಲಾಗಿರುವ ಕಚ್ಚಾವಸ್ತುಗಳ ಬಗ್ಗೆಯೂ ಅರಿವಿದ್ದರೆ ಮತ್ತೂ ಒಳ್ಳೆಯದು.ನಾವುಗಳು ಎಚ್ಚರಗೊಳ್ಳುವ ಮೂಲಕ ಸ್ವಾಥ, ಸದೃಢ ಸಮಾಜ ನಿರ್ಮಿಸಲು ಕೈಜೋಡಿಸೋಣ ಎಂದರು.
ಐಎಂಎ ಅಧ್ಯಕ್ಷ ಡಾ.ಲೋಕೇಶ್ ಬಾಬು ಮಾತನಾಡಿ,ನಕಲಿ ವೈದ್ಯ ಮತ್ತು ನಕಲಿ ಔಷಧದ ನಡುವೆ ಸಂಬಂಧವಿದೆ. ಇದೊಂದು ದೊಡ್ಡ ಜಾಲ.ಅಧಿಕೃತ ವೈದ್ಯನೊಬ್ಬ ನಕಲಿ ಔಷಧ ಬರೆಯಲು ಸಾಧ್ಯವೇ ಇಲ್ಲ. ಸರಕಾರದ ನಿಯಮದ ಪ್ರಕಾರ ಪ್ರತಿ ಆಸ್ಪತ್ರೆಯಲ್ಲಿ ಅಲ್ಲಿ ಕೆಲಸ ಮಾಡುವ ವೈದ್ಯರ ಪ್ರಮಾಣ ಪತ್ರಗಳನ್ನು ಸಾರ್ವಜನಿಕವಾಗಿ ಡಿಸ್‍ಪ್ಲೇ ಮಾಡಬೇಕು.ನಂಬಿಕೆ, ಕೈಗುಣಕ್ಕಿಂತ ಪ್ರಮಾಣ ಪತ್ರಗಳು ಮುಖ್ಯ.ಖಾಯಿಲೆ ವಾಸಿಯಾಗುವುದು ಎಷ್ಟು ಮುಖ್ಯವೋ, ಅಡ್ಡಪರಿಣಾಮ ಇಲ್ಲದಂತಹ ಔಷಧಿ ಪಡೆಯುವುದು ಅಷ್ಟೇ ಮುಖ್ಯ.ಹೊಟ್ಟೆಗೆ ಸೇವಿಸುವ ಪ್ರತಿ ಆಹಾರ ಮತ್ತು ಔಷಧದ ಬಗ್ಗೆ ಎಚ್ಚರ ಅಗತ್ಯ ಎಂದರು.
ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ವೇದಮೂರ್ತಿ ಮಾತನಾಡಿ,ನಾವು ಎರಡು ತಲೆಮಾರಿನಿಂದ ಹೊಟೇಲ್ ಉದ್ಯಮದಲ್ಲಿ ಇದ್ದೇವೆ. ಎಂದಿಗೂ ಕಳಪೆ ಮತ್ತು ನಕಲಿ ಆಹಾರಗಳನ್ನು ಬಳಸಿಲ್ಲ.ಹೊಟೇಲ್‍ಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಜಂಕ್ ಪುಡ್ ಹಾವಳಿಯಿಂದ ಕೊಂಚ ಏರುಪೇರಾಗಿದೆ.ಆಹಾರವನ್ನು ನಾವು ತಾಯಿ ಎಂಬಂತೆ ಪ್ರೀತಿಸುತ್ತವೆ.ಸಾಧ್ಯವಾದಷ್ಟು ಮಟ್ಟಿಗೆ ಗ್ರಾಹಕರಿಗೆ ಒಳ್ಳೆಯ ಆಹಾರ ನೀಡಲು ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಚಿ.ನಾ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸೇವಾದಳದ ಕೃಷ್ಣೇಗೌಡ, ಗೋವಿಂದರಾಜು, ತುರುವೇಕೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಸಮಾಜಸೇವಕ ನಟರಾಜುಶೆಟ್ಟಿ, ಕೊಂಡಜ್ಜಿ ಕುಮಾರ್, ಹೊಟೇಲ್ ಅಸೋಸಿಯೇಷನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
News Desk Benkiyabale

Related Posts

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm news

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm news

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm news
ತಾಜಾ ಸುದ್ಧಿಗಳು
news

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm
news

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm
news

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm
news

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm
news

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm
news

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು 5 ಕುರಿ, 1 ಮೇಕೆ ಸಾವು

October 27, 2026 5:59 pm
Our Youtube Channel
Our Picks

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm

ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಗಿರೀಶ್

October 28, 2026 3:23 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

By News Desk BenkiyabaleOctober 28, 2026 5:59 pm

ತುಮಕೂರು: ಹಾಲಪ್ಪ ಪ್ರತಿಷ್ಠಾನ ತುಮಕೂರು ಇವರು, ಐಎಂಎ, ಬೀದಿ ಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ತುಮಕೂರು ಹಾಗು…

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm

ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ

October 28, 2026 3:27 pm

ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

October 28, 2026 3:26 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.