BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ
  • ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು
  • ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ
  • ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ
  • ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ
  • ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ
  • ಶಿಕ್ಷಣದಿಂದ ದೂರ ತಳ್ಳುವುದೇ ಸರ್ಕಾರದ ಉದ್ದೇಶ: ಲಕ್ಕಪ್ಪ
  • ೯೩ ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮಸಭೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು
news

ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ ತಂತ್ರಜ್ಞಾನದ ಬಲ: ಸಿಎಸ್ ಡಾ. ಶಾಲಿನಿ ರಜನೀಶ್
By News Desk BenkiyabaleUpdated:November 24, 2026 5:26 pm

ಬೆಂಗಳೂರು/ತುಮಕೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಎನ್‌ಫೋರ್ಸ್ಮೆಂಟ್ ವ್ಯವಸ್ಥೆ, ಅಪಘಾತ ವಲಯಗಳ ವೈಜ್ಞಾನಿಕ ಸುಧಾರಣೆ ಹಾಗೂ ತ್ವರಿತ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ೨೪ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಬಳಿಕ ಮಾಹಿತಿ ನೀಡಿದ ಅವರು, ರಸ್ತೆ ಸುರಕ್ಷತೆಯು ಕೇವಲ ಒಂದು ಇಲಾಖೆಯ ಕೆಲಸವಲ್ಲ. ಪೊಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಮತ್ತು ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಮಹತ್ವದ ಸಾರ್ವಜನಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅಪಘಾತ ಪ್ರಮಾಣದಲ್ಲಿ ಇಳಿಕೆ: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, ೨೦೧೮ ರಿಂದ ೨೦೨೫ರ ಅವಧಿಯಲ್ಲಿ ಪ್ರತಿ ೧೦,೦೦೦ ವಾಹನಗಳಿಗೆ ಸಂಭವಿಸುವ ಅಪಘಾತಗಳ ಪ್ರಮಾಣ ಶೇ. ೨೭ರಷ್ಟು (೧೭.೨೮ ರಿಂದ ೧೨.೫೬ಕ್ಕೆ) ಹಾಗೂ ಮರಣ ದರ ಶೇ. ೨೧ರಷ್ಟು(೪.೫೫ ರಿಂದ ೩.೫೯ಕ್ಕೆ) ಇಳಿಕೆಯಾಗಿದೆ. ಪ್ರಸಕ್ತ ೨೦೨೬ರ ಜನವರಿಯಿಂದ ಅಕ್ಟೋಬರ್‌ವರೆಗೆ ೩೭,೪೪೩ ಅಪಘಾತಗಳು ಸಂಭವಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆಯಲ್ಲಿ ೨೨೦ರಷ್ಟು ಇಳಿಕೆ ಕಂಡುಬAದಿದೆ ಎಂದು ಹೇಳಿದರು.
೧೦೦ ಹೊಸ ಆಂಬುಲೆನ್ಸ್: ತುರ್ತು ಸ್ಪಂದನೆಗಾಗಿ ೧೦೮ ಮತ್ತು ೧೦೨ ಸೇವೆಗಳನ್ನು ೧೧೨ ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ ೧೦೦ ಹೊಸ ಬಿಎಲ್‌ಎಸ್ ಆಂಬುಲೆನ್ಸ್ಗಳ ಖರೀದಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿವೆ. ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.
ಎ.ಐ ಕ್ಯಾಮೆರಾ ಹಾಗೂ ಕಪ್ಪು ಸ್ಥಳಗಳ ಸುಧಾರಣೆ: ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತ ಮಾಡಿ ಪರಾರಿಯಾಗುವ(ಹಿಟ್ ಅಂಡ್ ರನ್) ವಾಹನಗಳನ್ನು ಪತ್ತೆ ಹಚ್ಚಲು ಗುರುತಿಸಲಾದ ೮೭ ಸ್ಥಳಗಳ ಪೈಕಿ ೨೭ ಕಡೆ ಎ.ಐ ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ೨೦ ಕಡೆ ಇ-ಚಲನ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈಗಾಗಲೇ ೬,೫೦೦ ಚಲನ್‌ಗಳನ್ನು ದಾಖಲಿಸಲಾಗಿದ್ದು, ಉಳಿದ ೬೦ ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಗುರುತಿಸಿರುವ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್‌ಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಸುಧಾರಣಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ ಎಂದರು.
ಚಾಲನಾ ಪರವಾನಗಿ ಪರೀಕ್ಷೆಗೂ ಮುನ್ನ ಜಾಗೃತಿ ವಿಡಿಯೋ ಕಡ್ಡಾಯ: ಚಾಲನಾ ತರಬೇತಿ ಸಂಸ್ಥೆಗಳ ಮೇಲೆ ಸಾರಿಗೆ ಇಲಾಖೆ ನಿರಂತರ ನಿಗಾ ಇಡಬೇಕು ಹಾಗೂ ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹೆಲ್ಮೆಟ್, ಸೀಟ್ ಬೆಲ್ಟ್, ವೇಗ ನಿಯಂತ್ರಣ, ಮದ್ಯಪಾನ ಮತ್ತು ಮೊಬೈಲ್ ಬಳಕೆ ನಿಷೇಧದ ಕುರಿತ ಜಾಗೃತಿ ವಿಡಿಯೋಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ವಿಡಿಯೋ ವೀಕ್ಷಿಸಿ ನಿಯಮಗಳನ್ನು ಅರಿತಿರುವ ಬಗ್ಗೆ ಅಭ್ಯರ್ಥಿಗಳಿಂದ ಸಹಿ ಪಡೆಯುವ ವ್ಯವಸ್ಥೆ ಜಾರಿಗೆ ತರುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.
ತುರ್ತು ಚಿಕಿತ್ಸೆಗೆ ೨.೫೦ಲಕ್ಷ ರೂ.ಗಳವರೆಗೆ ನಗದುರಹಿತ ನೆರವು:  ೨೦೨೬ರ ಏಪ್ರಿಲ್ ೧೫ ರಿಂದ ಜಾರಿಯಾಗಿರುವ ‘ಪಿಎಂ-ರಹತ್’ ಯೋಜನೆಯಡಿ ಅಪಘಾತದ ಸಂತ್ರಸ್ತರಿಗೆ ೭ ದಿನಗಳವರೆಗೆ ಗರಿಷ್ಠ ೧.೫೦ಲಕ್ಷ ರೂ. ಗಳವರೆಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ‘ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ’ ಯೋಜನೆಯಡಿ ಹೆಚ್ಚುವರಿ ೧ಲಕ್ಷ ರೂ. ಸೇರಿದಂತೆ ಒಟ್ಟು ೨.೫೦ಲಕ್ಷ ರೂ.ಗಳವರೆಗೆ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ ೩,೪೪೫ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಣಿಯಾಗಿವೆ ಎಂದು ತಿಳಿಸಿದರು.
೩೨೨ಕೋಟಿ ರೂ.ಗಳ ಕ್ರಿಯಾ ಯೋಜನೆ: ೨೦೨೬-೨೭ನೇ ಸಾಲಿನ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ ಒಟ್ಟು ೩೨೨ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಇದರಲ್ಲಿ ೨೩೩.೧೧ಕೋಟಿ ರೂ.ಗಳನ್ನು ಮುಂದುವರಿದ ಕಾಮಗಾರಿಗಳಿಗೆ ಹಾಗೂ ೮೮.೮೯ಕೋಟಿ ರೂ.ಗಳನ್ನು ಹೊಸ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾಧ್ಯಮಗಳು, ಚಿತ್ರಮಂದಿರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ
Next Article ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ
News Desk Benkiyabale

Related Posts

ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ

November 24, 2026 5:27 pm news

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm news

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm news
ತಾಜಾ ಸುದ್ಧಿಗಳು
news

ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ

November 24, 2026 5:27 pm
news

ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು

November 24, 2026 5:26 pm
news

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm
news

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm
news

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm
news

ಕನ್ನಡ ಕೇವಲ ಒಂದು ಭಾಷೆಯಲ್ಲ, ನಮ್ಮ ಪರಂಪರೆ

November 23, 2026 5:32 pm
Our Youtube Channel
Our Picks

ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ

November 24, 2026 5:27 pm

ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು

November 24, 2026 5:26 pm

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm

ತುಮಕೂರು ಪಾಲಿಕೆಗೆ ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ

November 23, 2026 5:33 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ

By News Desk BenkiyabaleNovember 24, 2026 5:27 pm

ತುಮಕೂರು: ಇದೇ ೨೯ ಹಾಗೂ ೩೦ರಂದು ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಮೊದಲ…

ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು

November 24, 2026 5:26 pm

ರಾಜಕಾರಣಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ: ಕೇಂದ್ರ ಸಚಿವ ವಿ.ಸೋಮಣ್ಣ

November 23, 2026 5:37 pm

ಕುಂಚಿಟಿಗರ ಮಹಿಳಾ ವಿದ್ಯಾರ್ಥಿನಿಯಲಕ್ಕೆ ಶಂಕುಸ್ಥಾಪನೆ

November 23, 2026 5:34 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.