BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ
  • ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ
  • ಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ
  • ಕರ್ನಾಟಕದಲ್ಲೇ ಕನ್ನಡಿಗರು ಸಾರ್ವಭೌಮರು; ಐಟಿ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ
  • ವಿಶಿಷ್ಟಾದೈತ ಸಿದ್ದಾಂತದ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರು
  • ಬಿ.ಎಂ.ಎಸ್. ಕಾಲೇಜಿನಲ್ಲಿ ೭೧ ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
  • ನ. ೨೯ರಂದು ಯುವಜನೋತ್ಸವದಲ್ಲಿ ಡಿಸಿಎಂ ಸಂವಾದ: ಜಿಲ್ಲಾಧಿಕಾರಿ
  • ತುರ್ತು ಚಿಕಿತ್ಸೆಗೆ ೨.೫೦ ಲಕ್ಷ ರೂ. ವರೆಗೆ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ
news

ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ

ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನ ಉದ್ಘಾಟಿಸಿದ ಡಿಸಿಎಂ
By News Desk BenkiyabaleUpdated:November 25, 2026 5:32 pm

ತುಮಕೂರು: ಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳವಾದ ಕೈದಾಳದಲ್ಲಿ ಅವರ ಹೆಸರಿನಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ತುಮಕೂರು ಜಿಲ್ಲಾಡಳಿತದ ವತಿಯಿಂದ ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೈದಾಳದಲ್ಲಿ ನಿರ್ಮಿಸಲಾದ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಬಿ.ಸುರೇಶ್‌ಗೌಡ ಅವರು ಜಿಲ್ಲಾಡಳಿತದಿಂದ ೩ ಕೋಟಿ ರೂ. ಅನುದಾನ ಪಡೆದುಕೊಂಡು, ಒಟ್ಟು ೮ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ. ಸುರೇಶ್‌ಗೌಡ ಅವರು ಬಿಜೆಪಿ ಶಾಸಕರು, ನಾನು ಕಾಂಗ್ರೆಸ್‌ನವನು. ಆದರೆ ಜನಪರ ಕೆಲಸ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಪ್ರಶಂಸೆ ವ್ಯಕ್ತಪಡಿಸುವುದು ನಮ್ಮ ಸಭ್ಯತೆ ಎಂದು ಹೇಳಿದರು.
ಕೈದಾಳ ಅಮರಶಿಲ್ಪಿ ಜಕಣಾಚಾರಿ ಅವರು ಜನಿಸಿದ ಊರು. ರಾಜ ವಿಷ್ಣುವರ್ಧನನ ಆಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಜಕಣಾಚಾರಿ ಅವರ ಶಿಲ್ಪಕಲಾ ಕೌಶಲ್ಯವನ್ನು ಗುರುತಿಸಿ, ಬೇಲೂರಿನ ಚೆನ್ನಕೇಶವ ದೇವಸ್ಥಾನ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದನು. ಜಕಣಾಚಾರಿ ಅವರು ಕೆತ್ತಿದ ಚೆನ್ನಕೇಶವ ದೇವರ ಮೂರ್ತಿಯಂತಹ ಅದ್ಭುತ ಶಿಲ್ಪಕಲೆಯನ್ನು ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದರು.
ಚೆನ್ನಕೇಶವ ದೇವರ ಮೂರ್ತಿಯನ್ನು ಕೆತ್ತನೆ ಮಾಡಿದ ಬಳಿಕ ಅದರ ಉದ್ಘಾಟನೆಗೆ ರಾಜ ವಿಷ್ಣುವರ್ಧನನನ್ನು ಜಕಣಾಚಾರಿ ಅವರು ಆಹ್ವಾನಿಸಿದ್ದರು. ಇನ್ನೇನು ಉದ್ಘಾಟನೆ ನಡೆಯಬೇಕು ಎನ್ನುವ ಸಂದರ್ಭದಲ್ಲಿ ಜನರ ಗುಂಪಿನಲ್ಲಿದ್ದ ಹುಡುಗನೊಬ್ಬ ಬಂದು, ಈ ಮೂರ್ತಿ ಕಲುಷಿತವಾಗಿದ್ದು, ಪೂಜೆಗೆ ಅರ್ಹವಲ್ಲ ಎಂದು ಹೇಳುತ್ತಾನೆ. ಮೂರ್ತಿ ಕಲುಷಿತವಾಗಿರುವುದು ಸಾಬೀತಾದರೆ ತಮ್ಮ ಕೈಯನ್ನೇ ಕತ್ತರಿಸಿಕೊಳ್ಳುವುದಾಗಿ ಜಕಣಾಚಾರಿ ಅವರು ಹೇಳುತ್ತಾರೆ. ಮೂರ್ತಿಯನ್ನು ಉಳಿಯಿಂದ ಹೊಡೆದು ನೋಡಿದಾಗ ಅದರ ಒಳಗೆ ನೀರು, ಕಪ್ಪೆ ಮತ್ತು ಮರಳು ಇರುವುದು ಕಂಡುಬರುತ್ತದೆ. ತನ್ನ ತಂದೆಯನ್ನು ಹುಡುಕಿಕೊಂಡು ಬಂದಿದ್ದ ಆ ಹುಡುಗ ಜಕಣಾಚಾರಿ ಅವರ ಮಗ ಎಂಬುದು ನಂತರ ತಿಳಿಯುತ್ತದೆ. ಅಲ್ಲಿಂದ ಕೈದಾಳಕ್ಕೆ ಬಂದ ಜಕಣಾಚಾರಿ ಅವರು ರಾತ್ರೋರಾತ್ರಿ ಚೆನ್ನಕೇಶವ ದೇವರ ಮೂರ್ತಿಯನ್ನು ಕೆತ್ತನೆ ಮಾಡುತ್ತಾರೆ. ಬಳಿಕ ಅವರಿಗೆ ಕೈ ಮರಳಿ ಬರುತ್ತದೆ ಎಂಬ ಪ್ರತೀತಿಯಿದೆ. ಇಂತಹ ಐತಿಹಾಸಿಕ ಹಿನ್ನೆಲೆಯನ್ನು ಕೈದಾಳ ಹೊಂದಿದೆ ಎಂದು ಸ್ಮರಿಸಿದರು.
ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರದ ಆದ್ಯತೆ: ನಾನು ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಮ್ಮದು ತಾಯಂದಿರಿಗೆ ಪ್ರೋತ್ಸಾಹ ನೀಡುವ ಸರ್ಕಾರ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳಾ ಸಮಾವೇಶ ಆಯೋಜಿಸುವಂತೆ ನನಗೆ ಸೂಚಿಸಿದ್ದರು. ಅದರಂತೆ ಹೆಬ್ಬೂರಿನಲ್ಲಿ ಜಾಗ ಗುರುತಿಸಿ ಮಹಿಳಾ ಸಮಾವೇಶವನ್ನು ಆಯೋಜಿಸಿದ್ದೆ. ಸುಮಾರು ೭ ಲಕ್ಷ ತಾಯಂದಿರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ನೆನಪಿಸಿಕೊಂಡರು.
ಅAದು ಸಮಾವೇಶಕ್ಕೆ ಆಗಮಿಸಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರು ಸ್ತ್ರೀಶಕ್ತಿ ಕಾರ್ಯಕ್ರಮವನ್ನು ಘೋಷಿಸಿದ್ದರು. ಇಂದು ಸ್ತ್ರೀಶಕ್ತಿ ಕಾರ್ಯಕ್ರಮಗಳು ವಿವಿಧ ರೂಪಗಳಲ್ಲಿ ಅನುಷ್ಠಾನಗೊಂಡಿವೆ ಎಂದು ಹೇಳಿದರು.
ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ: ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರನ್ನು ತರಲಾಗಿದೆ. ಈ ನೀರು ಕುಣಿಗಲ್‌ಗೂ ತಲುಪಬೇಕಿದೆ. ಗುಬ್ಬಿ ಬಳಿ ಸಣ್ಣ ಸಮಸ್ಯೆ ಎದುರಾಗಿದ್ದು, ಅದನ್ನು ಶೀಘ್ರದಲ್ಲಿಯೇ ಬಗೆಹರಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
dcm dr.g.parameshwar kannada news karnataka local news tumakur tumkur tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ
Next Article ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ
News Desk Benkiyabale

Related Posts

ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ

November 25, 2026 5:34 pm news

ಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ

November 25, 2026 5:30 pm news

ಕರ್ನಾಟಕದಲ್ಲೇ ಕನ್ನಡಿಗರು ಸಾರ್ವಭೌಮರು; ಐಟಿ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ

November 24, 2026 5:36 pm news
ತಾಜಾ ಸುದ್ಧಿಗಳು
news

ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ

November 25, 2026 5:34 pm
news

ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ

November 25, 2026 5:32 pm
news

ಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ

November 25, 2026 5:30 pm
news

ಕರ್ನಾಟಕದಲ್ಲೇ ಕನ್ನಡಿಗರು ಸಾರ್ವಭೌಮರು; ಐಟಿ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ

November 24, 2026 5:36 pm
news

ವಿಶಿಷ್ಟಾದೈತ ಸಿದ್ದಾಂತದ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರು

November 24, 2026 5:30 pm
news

ಬಿ.ಎಂ.ಎಸ್. ಕಾಲೇಜಿನಲ್ಲಿ ೭೧ ನೇ ಕನ್ನಡ ರಾಜ್ಯೋತ್ಸವ ಸಂಭ್ರಮ

November 24, 2026 5:28 pm
Our Youtube Channel
Our Picks

ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ

November 25, 2026 5:34 pm

ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ

November 25, 2026 5:32 pm

ಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ

November 25, 2026 5:30 pm

ಕರ್ನಾಟಕದಲ್ಲೇ ಕನ್ನಡಿಗರು ಸಾರ್ವಭೌಮರು; ಐಟಿ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ

November 24, 2026 5:36 pm

ವಿಶಿಷ್ಟಾದೈತ ಸಿದ್ದಾಂತದ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರು

November 24, 2026 5:30 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜನಸ್ನೇಹಿ ಆಡಳಿತವೇ ಸರ್ಕಾರದ ಗುರಿ: ಡಾ. ಜಿ. ಪರಮೇಶ್ವರ

By News Desk BenkiyabaleNovember 25, 2026 5:34 pm

ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥೆ ಜನಸ್ನೇಹಿಯಾಗಿರಬೇಕು. ಸಾರ್ವಜನಿಕರ ಸಮಸ್ಯೆಗಳು ಸುಲಭವಾಗಿ ಮತ್ತು ತ್ವರಿತವಾಗಿ ಬಗೆಹರಿಯುವಂತಿರಬೇಕು ಎಂಬ ಉದ್ದೇಶದಿಂದ ವಿವಿಧ ಜನಪರ…

ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವ ಸಮಸ್ಯೆಗೆ ಶೀಘ್ರ ಪರಿಹಾರ

November 25, 2026 5:32 pm

ಕನ್ನಡ ಸಾಹಿತ್ಯ, ಭಾಷೆ, ಕಲೆ, ಸಾಮಾಜಿಕ ಚಿಂತನೆ

November 25, 2026 5:30 pm

ಕರ್ನಾಟಕದಲ್ಲೇ ಕನ್ನಡಿಗರು ಸಾರ್ವಭೌಮರು; ಐಟಿ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ

November 24, 2026 5:36 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.