BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ
  • ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ
  • ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ
  • ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ
  • ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ
  • ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು
  • ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ
  • ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಸಂಪೂರ್ಣ ನಿಷೇಧ: ಸಿಐ ಸುರೇಶ್ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » 60 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ-ಯುಟಿಲಿಟಿ ಮಾಲ್
Trending

60 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ-ಯುಟಿಲಿಟಿ ಮಾಲ್

By News Desk BenkiyabaleUpdated:February 16, 2019 4:45 pm

 ತುಮಕೂರು  :

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ-ಯುಟಿಲಿಟಿ ಮಾಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೋರ್ಡ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತುಮಕೂರು ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯುಟಿಲಿಟಿ ಮಾಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆ ವತಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಸುಮಾರು 19592 ಚ.ಮೀ.(sqm)ಅಳತೆಯಲ್ಲಿ ಮೂರು ಅಂತಸ್ತಿನ ಮಲ್ಟಿ-ಯುಟಿಲಿಟಿ ಮಾಲ್ ಅನ್ನು ನಿರ್ಮಾಣ ಮಾಡಲಾಗುವುದು. ಖಾಯಂ ಹೆಲಿಪ್ಯಾಡ್ ಸೇರಿದಂತೆ ಉದ್ಯಮಿಗಳು ಸಭೆ ನಡೆಸಲು ಸಭಾಂಗಣ, ಹೋಟೆಲ್, ರೆಸ್ಟೋರೆಂಟ್, ಸೆಲೋನ್ ಸೆಂಟರ್, ಎಟಿಎಂಗಳು, ಸೂಪರ್ ಮಾರುಕಟ್ಟೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಈ ಮಾಲ್ ಒಳಗೊಂಡಿರುತ್ತದೆ ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಆಸ್ಪತ್ರೆಗಳ ಆಧುನೀಕರಣ ಹಾಗೂ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ವಿವಿಧ ಸೇವೆಗಳನ್ನು ಯಾರ ನೆರವೂ ಇಲ್ಲದೆ ಸ್ವತಃ ತಾವೇ ಪಡೆದುಕೊಳ್ಳಲು ಅನುಕೂಲವಾಗುವಂತೆ ಮಾಹಿತಿ ತಂತ್ರಜ್ಞಾನವುಳ್ಳ ಸ್ಮಾರ್ಟ್ ಲಾಂಜ್‍ನ್ನು ನಿರ್ಮಿಸಲಾಗುವುದು. ಈ ಲಾಂಜ್‍ನಲ್ಲಿ ಸಾರ್ವಜನಿಕರು ಕಿಯೋಸ್ಕ್ ಹಾಗೂ ಸಕಾಲ ಮೂಲಕ ಆಸ್ತಿ ತೆರಿಗೆ ವಿದ್ಯುತ್, ನೀರಿನ ಶುಲ್ಕ, ಒಳಚರಂಡಿ ತೆರಿಗೆ ಹಾಗೂ ಮೊಬೈಲ್ ಬಿಲ್‍ಗಳನ್ನು ಪಾವತಿಸಬಹುದು. ಜೊತೆಗೆ ಆರ್‍ಸಿ, ಡಿಎಲ್ ಎಕ್ಸ್‍ಟ್ರ್ಯಾಕ್ಟ್, ಎಲ್‍ಐಸಿ ವಿಮೆ ಮೊತ್ತ ಪಾವತಿ, ಆಯ್ದ ಶಾಲಾ ಕಾಲೇಜುಗಳ ಶುಲ್ಕ ಪಾವತಿ, ಜನನ-ಮರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರೈಲ್ವೆ ಟಿಕೇಟ್ ಬುಕ್ಕಿಂಗ್, ವಿವಾಹ ನೋಂದಣಿ ಪ್ರಮಾಣ ಪತ್ರ ಮತ್ತಿತರ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ವಿಶ್ವ ವನ :-

      ಬೆಂಗಳೂರಿನ ಲಾಲ್‍ಬಾಗ್ ಮಾದರಿಯಲ್ಲಿ ವಿಶ್ವ ವನ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಸಂಸ್ಥೆ ಮುಂದಾಗಿದ್ದು, ವರ್ಣರಂಜಿತ ಫಲಪುಷ್ಪ ಸಸಿಗಳನ್ನು ಒಳಗೊಂಡ ಪ್ರಸಿದ್ಧ ಸಸ್ಯೋದ್ಯಾನವನ್ನು ಈ ವಿಶ್ವ ವನದಲ್ಲಿ ಕಾಣಬಹುದಾಗಿದೆ. ಶಿಲ್ಪಿಗಳ ವನ, ಥೀಮ್ ಪಾರ್ಕ್, ಜಿಮ್ ಪಾರ್ಕ್, ಗ್ರೀನ್‍ಪಾರ್ಕ್, ಲೋಟಸ್ ಪಾರ್ಕ್, ಮಿನಿ ಸೋಲಾರ್ ಟ್ರೈನ್ ಪಾರ್ಕ್ ಸೇರಿದಂತೆ ಹಲವಾರು ಉದ್ಯಾನವನಗಳನ್ನು ಈ ವನದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

      ಸಭೆಯಲ್ಲಿ ನಗರದ ರಸ್ತೆ ಅಭಿವೃದ್ಧಿ, ಸಿಸಿಟಿವಿ, ಟ್ರಾಫಿಕ್ ನಿಯಂತ್ರಣ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪುನರುಜ್ಜೀವನ ಕಾರ್ಯ, ಡಿಜಿಟಲ್ ಗ್ರಂಥಾಲಯ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ಸ್ಮಾರ್ಟ್ ಲಾಂಜ್, ಎಲ್‍ಇಡಿ ಸ್ಮಾರ್ಟ್ ಲೈಟ್, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

      ಮೇಯರ್ ಲಲಿತಾ ರವೀಶ್, ಉಪ ಮೇಯರ್ ಬಿ.ಎಸ್.ರೂಪಶ್ರೀ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಇಬ್ರಾಹಿಂ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‍ಕುಮಾರ್, ಪಾಲಿಕೆ ಆಯುಕ್ತ ಟಿ.ಭೂಪಾಲನ್, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಟಿ.ರಂಗಸ್ವಾಮಿ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೇಯ್ ವಿಠ್ಠಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ವಂಶಿಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

(Visited 40 times, 1 visits today)
Previous Articleಅರ್ಹ ಮತದಾರರೆಲ್ಲ ಮತಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ
Next Article 870 ಪಿಡಬ್ಲ್ಯುಡಿ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅನುಮತಿ -ಡಿಸಿಎಂ
News Desk Benkiyabale

Related Posts

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm ಕರ್ನಾಟಕ ಸುದ್ಧಿಗಳು

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm ತುಮಕೂರು

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm news
ತಾಜಾ ಸುದ್ಧಿಗಳು
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

September 11, 2026 4:32 pm
ತುಮಕೂರು

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm
news

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm
news

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
news

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm
news

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm
Our Youtube Channel
Our Picks

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm

ಕಾಮಗಾರಿಗಳ ಅಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರ ಸತ್ಯಾಗ್ರಹ

September 09, 2026 5:37 pm

ಪಾವಗಡ ತಾಲ್ಲೂಕಿನ ಹಸಿರೀಕರಣಕ್ಕಾಗಿ ಕೆರೆಗಳಿಗೆ ನೀರು

September 09, 2026 5:36 pm

ರೈತರ ಜಮೀನಿಗೆ ಕೈಹಾಕಿದರೆ, ಕಂಬಕ್ಕೆ ಕಟ್ಟಿಹಾಕಿ: ಪ್ರತಿಭಟನೆ

September 09, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
ಕರ್ನಾಟಕ ಸುದ್ಧಿಗಳು

ಪ್ರಜಾಸೇವೆ ಆಂದೋಲನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಶೀಲನೆ

By News Desk BenkiyabaleSeptember 11, 2026 4:32 pm

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನದಡಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳ ವಿಲೇವಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು…

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಂಡಳಿ

September 11, 2026 4:09 pm

ಸರ್ಕಾರವೇ ನಿಡಗಲ್ಲು ಉತ್ಸವ ಆಚರಿಸಲಿ: ಶಾಂತಲಾ ರಾಜಣ್ಣ ಒತ್ತಾಯ

September 09, 2026 5:41 pm

ತುಮಕೂರಿನಲ್ಲಿ ಕನ್ನಾಳೆ ವಜಾಕ್ಕೆ ಆಗ್ರಹಿಸಿ ಎಬಿವಿಪಿ ರಸ್ತೆ ತಡೆದು ಪ್ರತಿಭಟನೆ

September 09, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.