BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ
  • ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ
  • ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ
  • ಹುಳಿಯಾರು ಕೆರೆ: ತ್ಯಾಜ್ಯ ಮುಕ್ತಿಗೆ ಮುಂದಾದ ಅಧಿಕಾರಿಗಳು
  • ೬ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಶಾಸಕ
  • ಅಗತ್ಯ ವಸ್ತುಗಳ ಖರೀದಿ, ನಿಜವಾದ ಹಸಿವು ನೀಗುವ ಶಕ್ತಿ
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » 3-4 ದಿನಗಳಲ್ಲಿ ಸೀಟು ಹಂಚಿಕೆ ಗೊಂದಲ ಬಗೆಹರಿಯಲಿದೆ – ಕೋನರೆಡ್ಡಿ 
Trending

3-4 ದಿನಗಳಲ್ಲಿ ಸೀಟು ಹಂಚಿಕೆ ಗೊಂದಲ ಬಗೆಹರಿಯಲಿದೆ – ಕೋನರೆಡ್ಡಿ 

By News Desk BenkiyabaleUpdated:March 07, 2019 4:37 pm

ತುಮಕೂರು:

      ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಗೊಂದಲ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ  ವಿಶ್ವಾಸ ವ್ಯಕ್ತಪಡಿಸಿದರು.

      ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

      ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ನಡೆಸುತ್ತಿದ್ದು, ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರಗಳಿಗೆ ಸೀಟು ಹಂಚಿಕೆ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರ ಬಳಿ ಚರ್ಚೆ ನಡೆಸಿದ್ದು ಜೆಡಿಎಸ್‌ಗೆ 12 ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಅದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಮೂಱ್ನಾಲ್ಕು ದಿನಗಳಲ್ಲಿ ಈ ಸೀಟು ಹಂಚಿಕೆ ಗೊಂದಲ ಬಗೆಹರಿಯಲಿದೆ ಎಂದರು.

      ನಾವು 12 ಸ್ಥಾನಗಳಲ್ಲಿ ಕಡೆ ಪಕ್ಷ ಹತ್ತು ಸ್ಥಾನಗಳಾದರೂ ಲಭಿಸುವ ಸಾಧ್ಯತೆ ಇದೆ. ಅದರಲ್ಲಿ ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಇತರೆ ಹತ್ತರಿಂದ ಹನ್ನೆರಡು ಕ್ಷೇತ್ರಗಳಾಗಿವೆ. ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆಯಾಗಿದೆ. ಹಾಗಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಇನ್ನು ಎರಡು ಮೂರು ದಿನಗಳಲ್ಲಿ ಸೀಟು ಹಂಚಿಕೆಗೆ ಅಂತಿಮ ತೆರೆ ಬೀಳಲಿದೆ ಎಂದರು.

      ಮೂರು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈಗ ನಾನು ನನ್ನ ಕ್ಷೇತ್ರಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಲಿಂಗೈಕ್ಯ ಮಂಟಪದಲ್ಲಿ ಪೂಜೆ ನೆರವೇರಿಸಿ ನಂತರ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ ಎಂದರು.

      ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದು ಹೇಳಿರುವುದು ಸರಿಯಲ್ಲ. ಕುಮಾರಸ್ವಾಮಿಯವರು ಯಾರ ರಿಮೋಟ್ ಕಂಟ್ರೋಲ್ ಅಲ್ಲ. ಅವರಿರುವುದು ರಾಜ್ಯದ ಆರೂವರೆ ಕೋಟಿ ಜನರ ಕಂಟ್ರೋಲ್‌ನಲ್ಲಿ ಮಾತ್ರ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾರ ಕಂಟ್ರೋಲ್‌ನಲ್ಲಿ ಇದ್ದಾರೆ ಎಂಬುದನ್ನು ತಿಳಿಸಬೇಕು ಎಂದು ತಿರುಗೇಟು ನೀಡಿದರು.

      ಮಂಡ್ಯದಲ್ಲಿ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಚುನಾವಣೆಗೆ ನಿಲ್ಲುವ ವಿಚಾರವಾಗಿ ಇಡೀ ಚಿತ್ರರಂಗ ಸುಮಲತಾ ಅವರ ಬೆನ್ನಿಗೆ ನಿಂತಿದೆ. ಆದರೆ ಇನ್ನೂ ರಾಜಕೀಯವನ್ನೇ ಕಾಣದ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ಗೌಡ ಅವರನ್ನು ಕಣಕ್ಕಿಳಿಸಲು ಅಲ್ಲಿನ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಿಖಿಲ್‌ಗೌಡ ಅವರು ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಘೋಷಣೆಯಾದ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಸಚಿವರಾದ ಸಾ.ರಾ. ಮಹೇಶ್, ಪುಟ್ಟರಾಜು ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿಖಿಲ್‌ಗೌಡ ಅವರ ಸ್ಪರ್ಧೆಗೆ ಹಸಿರು ನಿಶಾನೆ ನೀಡಿದ್ದಾರೆ. ಎಲ್ಲರೂ ನಡೆಸಿದ ಚರ್ಚೆಯಲ್ಲಿ ನಿಖಿಲ್‌ಗೌಡ ಅವರ ಹೆಸರು ಅಂತಿಮಗೊಳಿಸಿದ ನಂತರವೇ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಇದಕ್ಕೆ ದೋಸ್ತಿ ಪಕ್ಷವಾದ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲ ಇದೆ ಎಂದರು. ಈ ಸಂದರ್ಭದಲ್ಲಿ ತಿಮ್ಮಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

(Visited 33 times, 1 visits today)
Previous Articleಹೊಟ್ಟೆನೋವು ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಶರಣು!
Next Article ತಿಪಟೂರಿನಲ್ಲಿ ಡ್ರಾಮಾ ಜ್ಯೂನಿಯರ್ ಫಿನಾಲೆ
News Desk Benkiyabale

Related Posts

ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ

June 25, 2026 5:38 pm news

ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ

June 25, 2026 5:34 pm news

ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ

June 25, 2026 5:31 pm news
ತಾಜಾ ಸುದ್ಧಿಗಳು

ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ

June 25, 2026 5:38 pm

ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ

June 25, 2026 5:34 pm

ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ

June 25, 2026 5:31 pm

ಹುಳಿಯಾರು ಕೆರೆ: ತ್ಯಾಜ್ಯ ಮುಕ್ತಿಗೆ ಮುಂದಾದ ಅಧಿಕಾರಿಗಳು

June 25, 2026 10:54 am

೬ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಶಾಸಕ

June 25, 2026 10:51 am

ಅಗತ್ಯ ವಸ್ತುಗಳ ಖರೀದಿ, ನಿಜವಾದ ಹಸಿವು ನೀಗುವ ಶಕ್ತಿ

June 25, 2026 10:48 am
Our Youtube Channel
Our Picks

ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ

June 25, 2026 5:38 pm

ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ

June 25, 2026 5:34 pm

ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ

June 25, 2026 5:31 pm

ಹುಳಿಯಾರು ಕೆರೆ: ತ್ಯಾಜ್ಯ ಮುಕ್ತಿಗೆ ಮುಂದಾದ ಅಧಿಕಾರಿಗಳು

June 25, 2026 10:54 am

೬ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಶಾಸಕ

June 25, 2026 10:51 am
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ: ಸಿಇಒ

By News Desk BenkiyabaleJune 25, 2026 5:38 pm

ತುಮಕೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್(ಗ್ರಾಮೀಣ) ಯೋಜನೆಯ…

ದುಶ್ಚಟಕ್ಕೆ ದಾಸರಾಗದಿರಿ, ಸಮಾಜದ ಜವಾಬ್ದಾರಿ ಹೊರಿ

June 25, 2026 5:34 pm

ತುಮಕೂರಿನಲ್ಲಿ ಜೂನ್ ೨೬ರಿಂದ ಸಾಹಿತ್ಯದ ಮಹೋತ್ಸವ

June 25, 2026 5:31 pm

ಹುಳಿಯಾರು ಕೆರೆ: ತ್ಯಾಜ್ಯ ಮುಕ್ತಿಗೆ ಮುಂದಾದ ಅಧಿಕಾರಿಗಳು

June 25, 2026 10:54 am
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.