BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
  • ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
  • ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ
  • ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ
  • ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ
  • ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ
  • ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು
  • ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಾ.ಪಂ.ಅಧ್ಯಕ್ಷರಾಗಿ ಕವಿತಾ ರಮೇಶ್ ಆಯ್ಕೆ : ಜೆಡಿಎಸ್ ಗೆ ಮುಖಭಂಗ!!
Trending

ತಾ.ಪಂ.ಅಧ್ಯಕ್ಷರಾಗಿ ಕವಿತಾ ರಮೇಶ್ ಆಯ್ಕೆ : ಜೆಡಿಎಸ್ ಗೆ ಮುಖಭಂಗ!!

By News Desk BenkiyabaleUpdated:July 09, 2020 6:50 pm

ತುಮಕೂರು:

     ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿರುತ್ತಾರೆ.

      ಬಿಜೆಪಿ ಪಕ್ಷದಿಂದ 17 ಸದಸ್ಯ ಬಲವಿದ್ದು, ಜೆಡಿಎಸ್ 12 ಸದಸ್ಯರ ಬಲ, ಕಾಂಗ್ರೆಸ್ 1, ಇರುತ್ತಾರೆ. ಸ್ಪಷ್ಟ ಬಹುಮತವಿದ್ದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ಅಧ್ಯಕ್ಷಗಾದಿ ಏರಬಹುದೆಂಬ ಸಂತಸದಲ್ಲಿದ್ದರು, ಆದರೆ 12 ಸದಸ್ಯ ಬಲವಿದ್ದ ಜೆಡಿಎಸ್ ಕಾಂಗ್ರೆಸ್ ಒಬ್ಬರು ಸದಸ್ಯರ ವಿಶ್ವಾಸದೊಂದಿಗೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಅಧ್ಯಕ್ಷಗಾದಿಗೇರಲು ಕಸರತ್ತು ನಡೆಸಿತ್ತು. ತಮ್ಮ ಬಲಿಯಿದ್ದ 13 ಸದಸ್ಯ ಬಲದ ಜೊತೆಗೆ ಬಿಜೆಪಿಯ ಇಬ್ಬರು ಸದಸ್ಯರನ್ನು ತಮ್ಮ ಕಡೆ ಸೆಳೆದುಕೊಂಡು ಮತ್ತೊಬ್ಬ ಬಿಜೆಪಿ ಸದಸ್ಯರನ್ನ ಗೈರು ಹಾಜರಿಪಡಿಸಿ ಅಧ್ಯಕ್ಷ ಸ್ಥಾನವನ್ನು ತಾನು ಪಡೆಯಬೇಕೆಂದು ಜೆಡಿಎಸ್‍ನ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್ ಕಸರತ್ತು ನಡೆಸಿದ್ದರು. ಇಬ್ಬರು ಬಿಜೆಪಿ ಸದಸ್ಯರಾದ ಕೋರಾ ಎಸ್‍ಟಿ ಮೀಸಲು ಕ್ಷೇತ್ರದ ಕವಿತಾ ರಮೇಶ್ ಮತ್ತು ಕುರುವೇಲು ಎಸ್‍ಸಿ ಮೀಸಲು ಕ್ಷೇತ್ರದ ಸುಧಾರವರುಗಳನ್ನ ಜೆಡಿಎಸ್‍ನ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಂತೆ ಡೀಲು ಕುದುರಿಸಿದ್ದರು. ಜೆಡಿಎಸ್‍ನ 12 ಸದಸ್ಯರ ಬಲ ಹಾಗೂ ಕಾಂಗ್ರೆಸ್‍ನ ಒಬ್ಬರು, ಬಿಜೆಪಿಯ ಕವಿತಾ ರಮೇಶ್ ಮತ್ತು ಸುಧಾ ಇಬ್ಬರು ಸೇರಿ 15 ಜನ ಸದಸ್ಯ ಬಲದಿಂದ ಮೇಲುಗೈ ಸಾದಿಸಬಹುದೆಂಬ ಮಹಾದಾಸೆಯೊತ್ತ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್‍ಗೆ ಮುಖಭಂಗ ಮಾಡುವ ಸಲುವಾಗಿ ಬಿಜೆಪಿ ರಣತಂತ್ರ ರೂಪಿಸಿ ತನ್ನ 15 ಜನರ ಸದಸ್ಯ ಬಲದಿಂದಲೇ ಅಧ್ಯಕ್ಷ ಸ್ಥಾನದ ಮೇಲೆ ತನ್ನ ಹಿಡಿತ ಸಾದಿಸುವ ರಣತಂತ್ರ ಯಶಸ್ವಿಯಾಗಿತ್ತು.

      ಜೆಡಿಎಸ್ ಪಕ್ಷದ ವತಿಯಿಂದ ಆಯ್ಕೆಯಾದ ಕೆಸ್ತೂರು ತಾ.ಪಂ.ಸದಸ್ಯೆ ನೇತ್ರಾವತಿ, ಬಿಟ್ಟನಕುರಿಕೆ ತಾ.ಪಂ ಸದಸ್ಯ ಮಂಜುನಾಥ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬಲಿ ಇದ್ದ 15 ಸದಸ್ಯರ ಬಲದಿಂದಲೇ ಎಸ್‍ಸಿ ಮೀಸಲು ಕ್ಷೇತ್ರವಾದ ಅರಕೆರೆ ತಾ.ಪಂ. ಕ್ಷೇತ್ರದ ಆಯ್ಕೆಯಾಗಿದ್ದ ಕವಿತಾ ರಮೇಶ್‍ರವರನ್ನ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಿಸಿಕೊಂಡಿದೆ.

      ಬಿಜೆಪಿ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‍ಗೌಡರ ರಣತಂತ್ರದಿಂದ ಜೆಡಿಎಸ್‍ನ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‍ಗೆ ಈ ಚುನಾವಣೆ ಒಂದು ರೀತಿಯ ಮುಖಭಂಗ ಮಾಡಿದೆ. ಮತ್ತೊಂದು ವಿಶೇಷವೆಂದರೆ ಜಯನಗರದಲ್ಲಿರುವ ತನ್ನ ಗೃಹ ಕಛೇರಿಯಿಂದ ಪೊಲೀಸರ ಸರ್ಪಗಾವಲಿನಲ್ಲಿ ಜೆಡಿಎಸ್‍ನ ಶಾಸಕ ಡಿ.ಸಿ.ಗೌರಿಶಂಕರ್ ಬಿಜೆಪಿಯ ಇಬ್ಬರು ಸದಸ್ಯರು ಸೇರಿದಂತೆ ಜೆಡಿಎಸ್‍ನ ಸದಸ್ಯರು ಒಟ್ಟು ಸೇರಿ 13 ಜನರನ್ನ ಚುನಾವಣಾ ಸ್ಥಳಕ್ಕೆ ಕರೆದೊಯ್ದದ್ದು ಸಂಶಯಾಸ್ಪದವಾಗಿತ್ತು.

      ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಹಿಂದೆ ಕೋರಾ ಪೊಲೀಸ್ ಠಾಣೆಯ ಪಿಎಸ್‍ಐ ಆಗಿದ್ದ ಶೇಷಾದ್ರಿರವರು ಶಾಸಕರ ಕೃಪಕಟಾಕ್ಷದಿಂದ ಕೋರಾ ಠಾಣೆಯಲ್ಲಿ ಈ ಹಿಂದೆ ನಿಯೋಜನೆಗೊಂಡಿದ್ದರು. ಹಾಲಿ ಜಯನಗರ ಪಿಎಸ್‍ಐ ಆಗಿರುವ ಇವರು ಸ್ವಾಮಿ ನಿಷ್ಠೆಯಂತೆ ಶಾಸಕರ ಬೆಂಬಲಿತ ತಾ.ಪಂ.ಸದಸ್ಯರಿಗೆ ಬೆಂಗಾವಲು ಪಡೆಯ ಮುಖ್ಯಸ್ಥರಾಗಿ ರಕ್ಷಣೆ ನೀಡಿ ತಾ.ಪಂ. ಆವರಣಕ್ಕೆ ಕರೆತಂದದ್ದು ವಿಶೇಷವಾಗಿತ್ತು.

     ಯಾವುದೇ ರೀತಿಯ ಜೀವಭಯದ ದೂರು ನೀಡದೆ. ಪೊಲೀಸರು ರಕ್ಷಣೆ ನೀಡಿ ಸದಸ್ಯರ ಬೆಂಬಲಕ್ಕೆ ಎಸ್ಕಾರ್ಟ್ ಕೊಟ್ಟದ್ದು ಮತ್ತೊಂದು ವಿಶೇಷವಾಗಿತ್ತು.

      ಬಿಜಿಪಿಯ ಮಾಜಿ ಶಾಸಕ ಹಾಗೂ ಹಾಲಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರಿಗೆ ಮುಖಭಂಗ ಮಾಡಲು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮಾಡಿದ ರಣತಂತ್ರಗಳೆಲ್ಲ ವಿಫಲಗೊಂಡವಾದರೂ ತಾ.ಪಂ. ಅಧ್ಯಕ್ಷಗಾದಿಯ ಚುನಾವಣೆ ಒಂದು ರೀತಿಯಲ್ಲಿ ವಿಭಿನ್ನತೆಯಿಂದಲೇ ಕೂಡಿತ್ತು. ಸದಸ್ಯರ ಕುದುರೆ ವ್ಯಾಪಾರ ಒಂದು ಕಡೆಯಾದರೆ ಮತ್ತೊಂದು ಕಡೆ ಪಕ್ಷ ವಿಪ್ ಜಾರಿಮಾಡಿದ್ದು ಮತ್ತೊಂದು ರಣತಂತ್ರವಾಗಿತ್ತು. ತಂತ್ರ ಮತ್ತು ಪ್ರತಿತಂತ್ರಗಳು ಏನೇ ಇರಲಿ ವ್ಯಾಪರಕ್ಕೊಳಗಾಗಿ ಅನ್ಯಪಕ್ಷಕ್ಕೆ ಬೆಂಬಲ ನೀಡಿ ಮತಾ ಚಲಾಯಿಸಿದ ಬಿಜೆಪಿಯ ಇಬ್ಬರು ಸದಸ್ಯರಿಗೆ ಬಿಜೆಪಿ ಪಕ್ಷ ನೀಡಿದ ವಿಪ್‍ನ ತೂಗುಗತ್ತಿ ಅವರಿಬ್ಬರ ಮುಂದಿನ ರಾಜಕೀಯ ಭವಿಷ್ಯಕ್ಕೆ ಕಂಟಕವಾಗಲಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

      ಜೆಡಿಎಸ್ ಪಕ್ಷದಿಂದ ಗೈರು ಹಾಜರಾದ ಇಬ್ಬರು ಸದಸ್ಯರು ಎಲ್ಲಿದ್ದಾರೆ, ಯಾರ ಹಿಡಿತದಲ್ಲಿದ್ದಾರೆ ಎಂಬುದು ತಿಳಿದುಬರುತ್ತಿಲ್ಲ. ಇಷ್ಟೆಲ್ಲ ರಣತಂತ್ರ ರೂಪಿಸಿದ ಜೆಡಿಎಸ್ ಪಕ್ಷ ಅನ್ಯಪಕ್ಷದ ಇಬ್ಬರು ಸದಸ್ಯರನ್ನ ತನ್ನೆಡೆಗೆ ಸೆಳೆದುಕೊಂಡದ್ದು ಸರಿಯೇ..? ತನ್ನ ಪಕ್ಷದೊಳಗಿನ 12 ಸದಸ್ಯರ ಪೈಕಿ ಇಬ್ಬರು ಸದಸ್ಯರನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ. ಸ್ವಯಂ ಮುಜುಗರಕ್ಕೀಡಾಗಿದೆ ಎಂದರೆ ತಪ್ಪಾಗಲಾಗರದು.

(Visited 1,471 times, 1 visits today)
Previous Articleತಾಪಂ ಅಧ್ಯಕ್ಷಗಾದಿಗೆ ಕವಿತಾ ರಮೇಶ್ : ವಿಪ್ ಜಾರಿ!!
Next Article ತುಮಕೂರು :  ಇಂದು 14 ಮಂದಿಗೆ ಕೊರೊನಾ ದೃಢ!!   
News Desk Benkiyabale

Related Posts

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm news
ತಾಜಾ ಸುದ್ಧಿಗಳು
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm
news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm
news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm
news

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
news

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm
Our Youtube Channel
Our Picks

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

By News Desk BenkiyabaleAugust 03, 2026 4:58 pm

ತುಮಕೂರು: ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ೨ಎ ಮೀಸಲಾತಿ ದೊರೆಯು ಬೇಕೆಂಬುದು…

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.