ಕೊರಟಗೆರೆ: ಶಿಕ್ಷಕರಿಗೆ ಹಾಗೂ ಶಿಕ್ಷಕರೇತರ ಪದವಿಧರರಿಗೆ ಸಮಸ್ಯೆಗಳು ಬಹಳಷ್ಟು ಹತ್ತಿರದಿಂದ ಕಂಡಿದ್ದು, ಅವರ ಸಮಸ್ಯೆಗಳನ್ನ ಪರಿಹರಿಸಲು ನನಗೆ ಒಂದು ಅವಕಾಶ ನೀಡಿ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ತಿಳಿಸಿದರು.

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.

ನಾನು ಸಾಕಷ್ಟು ವರ್ಷದಿಂದ ಕಾಂಗ್ರೆಸ್ ಪಕ್ಷವನ್ನ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆಶಿರ್ವಾದದಿಂದ ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾನೆ. ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಅನೇಕ ಯುವಕರು ಹಾಗೂ ಯುವತಿಯರು ಬಡತನದಲ್ಲಿರದ್ದರು ಸಹ ಉತ್ತಮ ವ್ಯಾಸಂಗ ಮಾಡಿದರೂ ಕೆಲಸ ಇಲ್ಲದೆ ಹಾಗೆ ಉಳಿದ್ದಾರೆ. ನನಗೆ ನಿಮ್ಮ ಅಮೂಲ್ಯವಾದ ಒಂದು ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಂಡಿ ಎಂದು ಮನವಿ ಮಾಡಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಆಶ್ವಥ್‌ನಾರಾಯಣ್ ಮಾತನಾಡಿ ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಆದೇಶದಂತೆ ಈ ಬಾರಿ ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರನ್ನ ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಇವರಿಗೆ ಮತ ಹಾಕಿಸುವ ಮೂಲಕ ಶಶಿ ಅವರನ್ನ ಜಯಶೀಲರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಪ್ರಪಥಮವಾಗಿ ಈ ಭಾರಿ ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರನ್ನ ಗೆಲ್ಲಿಸುವ ಮೂಲಕ ಶಿಕ್ಷಕರ ಸಮಸ್ಯೆ ಬಗ್ಗೆ ಧ್ವನಿಯಾಗಿ ನಿಲ್ಲುತ್ತಾರೆ. ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಯುವಕರಿಗೆ ಒಂದು ಅವಕಾಶ ನೀಡಿದ್ದಾರೆ. ಅವರ ಆದೇಶದಂತೆ ಶಶಿ ಅವರನ್ನ ನಮ್ಮ ಕಾರ್ಯಕರ್ತರು ಹೆಚ್ಚಿನ ಸಹಕಾರ ನೀಡಿ ಜಯಶೀಲರನ್ನಾಗಿ ಮಾಡೋಣ ಎಂದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಕವಿತಮ್ಮ, ಯುತ್ ಕಾಂಗ್ರೆಸ್ ಅಧ್ಯಕ್ಷ ಬೈರೇಶ್, ಮುಖಂಡರಾದ ಜಯರಾಮು, ರಂಗನಾಥ್, ಪ್ರಬಾಕರ್, ರವಿ, ಮಂಜುಳಾರಾಧ್ಯ, ಕಾಳಿಚರಣ್, ದೊಡ್ಡಯ್ಯ, ಉಮೇಶ್, ಶಿವಣ್ಣ, ರಘುವೀರ್, ಸಂಧೀಪ್ ಕೋಕಿಲ, ತ್ರಿಯಾಂಬಕರಾಧ್ಯ, ಸೇರಿದಂತೆ ಇತರರು ಇದ್ದರು.

(Visited 1 times, 1 visits today)