
ತುಮಕೂರು: ಕೇಂದ್ರ ಸರ್ಕಾರಕ್ಕೆ ರೈತ-ಕಾರ್ಮಿಕ-ಜನವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯಿಸಿ. ೨೦೨೬ ಫೆಬ್ರವರಿ ೧೨ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ದೇಶವ್ಯಾಪ್ತಿ ಉತ್ಪಾದನೆ ಮತ್ತು ಸೇವೆ ಸ್ಥಗಿತ ಮಾಡಿ ಬಂದ್ ಮಾಡಲು ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿ ಸಮಿತಿ ತೀರ್ಮಾನ ಮಾಡಿರುವುದರಿಂದ ತುಮಕೂರು ನಗರದ ಜನಚಳುವಳಿಕೇಂದ್ರದಲ್ಲಿ ಪ್ರಚಾರಂದೋಲನಕ್ಕೆ ಸಿಐಟಿಯು ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಸೈಯದ್ ಮುಜೀಬ್ ರವರು ಚಾಲನೇ ನೀಡುವ ಮೂಲಕ ಕೇಂದ್ರದಲ್ಲಿ ೩ ನೇ ಬಾರಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ೨೦೨೫ ನವೆಂಬರ್ ನಾಲ್ಕು ಲೇಬರ್ ಜಾರಿಗೊಳಿಸುವುದಾಗಿ ೨೧ ರಂದು ಕೋಡ್‌ಗಳನ್ನು ಘೋಷಿಸಿದೆ. ನಂತರ ೨೦೨೫ ಡಿಸೆಂಬರ್ ೩೦ ರಂದು ನಾಲ್ಕು ಕೋಡ್‌ಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ೨೦೨೬ ರಿಂದ ಏಪ್ರಿಲ್ ೧ ರಿಂದ ದೇಶಾದ್ಯಂತ ಈ ನಾಲ್ಕು ಕೋಡ್‌ಗಳು ಕಾರ್ಯಚರಣೆಗೆ ಬರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವ್ಯಾಪಕವಾದ ಪ್ರಚಾರವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ೨೦೨೬ ಫೆಬ್ರವರಿ ೧೨ ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.
ಕಾರ್ಮಿಕ ಸಂಹಿತೆಯ ರೂಪಗೊಂಡು ಹಿನ್ನಲೆ: ೧೯೯೮ ಅಧಿಕಾರಕ್ಕೆ ಬಂದ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ನೇಮಿಸಿದ್ದ ರವೀಂದ್ರ ವರ್ಮ ನೇತೃತ್ವದ ಎರಡನೇ ಕಾರ್ಮಿಕ ಆಯೋಗವು ೨೦೦೨ ರಲ್ಲಿ ಕಾರ್ಮಿಕ ಕಾನೂನುಗಳ ಸಂಹಿತೀಕರಣಕ್ಕೆ ಶಿಫಾರಸ್ಸು ಮಾಡಿ ವರದಿ ನೀಡಿತ್ತು. ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಹತ್ತೆ ದಿನಗಳಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ೪೪ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳನ್ನಾಗಿ ರೂಪಿಸುವ ಘೋಷಣೆ ಮಾಡಿತ್ತು. ಆದರೆ ದೇಶದ ಕಾರ್ಮಿಕ ವರ್ಗದಿಂದ ಎದುರಾದ ಐಕ್ಯ ಪ್ರತಿರೋಧದಿಂದಾಗಿ ಹಿಂದೆ ಸರಿದಿತ್ತು. ಆದರೆ ದೇಶದ ಶ್ರೀಮಂತ ಕಾರ್ಪೊರೇಟ್ ಉದ್ಯಮಪತಿಗಳು ಈ ಶಿಫಾರಸ್ಸುಗಳ ಆಧಾರದಲ್ಲಿ ಕಾರ್ಮಿಕ ಸುಧಾರಣೆಗೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಅದರ ಪರಿಣಾಮ ಕೇಂದ್ರ ಸರ್ಕಾರ ೨೦೧೯-೨೦೨೦ ರ ಅವಧಿಯಲ್ಲಿ ೨೯ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಲ್ಲಿ ವಿಲೀನಗೊಳಿಸಿ ೧. ವೇತನ ಸಂಹಿತೆ ೨.ಕೈಗಾರಿಕಾ ಸಂಬAಧಗಳ ಸಂಹಿತೆಸಾಮಾಜಿಕ ಭದ್ರತಾ ಸಂಹಿತೆ ೪. ವೃತ್ತಿ ಸುರಕ್ಷತೆ ಮತ್ತು ಕೆಲಸ ಪರಿಸ್ಥಿತಿ ಕುರಿತಾದ ಸಂಹಿತೆಗಳನ್ನಾಗಿ ಅಂಗೀಕರಿಸಿತ್ತು.
ನಾಲ್ಕು ಕೇಂದ್ರ ಸರ್ಕಾರವು ಈ ಸಂಹಿತೆಗಳನ್ನು “ಈಸ್ ಆಫ್ ಡೂಯಿಂಗ್” ಹೆಸರಿನಲ್ಲಿ ಉದ್ಯಮಪತಿಗಳ ವ್ಯವಹಾರಗಳನ್ನು ಸುಗಮಗೊಳಿಸಲು ಮತ್ತು ದೇಶದ ಅಭಿವೃದ್ದಿ ಹಾಗೂ ಕೈಗಾರಿಗಳ ಬೆಳವಣಿಗೆ ದೃಷ್ಟಿಯಿಂದ ಜಾರಿಗೊಳಿಸಲಿದೆ ಎಂದು ವಾದಿಸುತ್ತಿದೆ. ಈ ನಾಲ್ಕು ಸಂಹಿತೆಗಳಿ0ದ ಶ್ರಮಿಕರು ಹಲವು ದಶಕಗಳಿಂದ ಪಡೆದಿರುವ ಹತ್ತು ಹಲವು ಹಕ್ಕು ಹಾಗೂ ಸಾಮಾಜಿಕ ಭದ್ರತೆಗಳನ್ನು ಕಳೆದುಕೊಳ್ಳಲಿದ್ದಾರೆ ಮತ್ತು “ಸಂಘ ಕಟ್ಟುವ” ಸ್ವಾತಂತ್ರ‍್ಯ ಸೇರಿ ಹಲವು ಹಕ್ಕುಗಳು ನಾಶವಾಗಿ ಕಾರ್ಮಿಕರ ಬದುಕು ಮತ್ತಷ್ಟು ಅಸಹನೀಯಗೊಳ್ಳಲಿದೆ. ಹೀಗಾಗಿ ಈ ಸಂಹಿತೆಗಳು ಜಾರಿಯಾಗದಂತೆ ಕಾರ್ಮಿಕ ಸಂಘಗಳು ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿವೆ. ಆದರೆ ಕಾರ್ಮಿಕರ ಕೂಗಿಗೆ ಕಿವಿಗೊಡದೆ ಬಿಜೆಪಿ ನೇತೃತ್ವದ ಸರ್ಕಾರವು ಕೊನೆಗೂ ೨೦೨೫ ನವೆಂಬರ್ ೨೧ ರಿಂದ ದೇಶಾದ್ಯಂತ ನಾಲ್ಕು ಕೋಡ್ ಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಇವುಗಳ ಜಾರಿ ಘೋಷಣೆಯಾದ ಬೆನ್ನಲ್ಲೆ ಜನವರಿ ೯ ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಸಿದ ಕಾರ್ಮಿಕ ಸಂಘಗಳು ಲೇಬರ್ ಕೋಡ್‌ಗಳ ಜಾರಿ ವಿರೋಧಿಸಿ ಫೆಬ್ರವರಿ ೧೨ ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರಕ್ಕೆ ೫೦೦ ಕ್ಕೂ ಅಧಿಕ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಸರ್ಕಾರವು ಈ ಕೋಡ್‌ಗಳ ರಚನೆ ಹಾಗೂ ಅವುಗಳ ಜಾರಿಗೆ ನೀಡುತ್ತಿರುವ ಸಮರ್ಥನೆಯನ್ನು ದೇಶದ ಕೋಟ್ಯಾಂತರ ಶ್ರಮಜೀವಿಗಳ ಬದುಕು ಮತ್ತು ಭವಿಷ್ಯದ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಅಂತಿಮವಾಗಿ ಸಿಗುವ ಫಲಿತಾಂಶ “ಮಾಲೀಕರ ಕಣ್ಣಿಗೆ ಬೆಣ್ಣೆ: ಶ್ರಮಜೀವಿಗಳ ಪಾಲಿಗೆ ಸುಣ್ಣ’: ಎನ್ನುವುದು ಸಷ್ಟವಾಗುತ್ತಿದೆ. ಎಂದು ತಿಳಿಸಿದರು.
ಈ ಪ್ರಚಾಂದೋಲದನದಲ್ಲಿ ಜಿಲ್ಲಾ ಉಪಾಧ್ಯಕ್ಷರು ಷಣ್ಮುಖಪ್ಪ ಜಿಲ್ಲಾ ಕಾರ್ಯದರ್ಶಿ, ಸುಜಿತ್‌ನಾಯಕ, ಕೈಗಾರಿಕ ಕಾರ್ಮಿಕ ಮುಖಂಡರಾದ ಮಂಜು ವೈ.ಎಸ್, ಭೀಮರಾಜು, ಮಧುಸೂದನ್, ನೂರಕ್ಕೂ ಹೆಚ್ಚು ಕಾರ್ಮಿಕಸದಸ್ಯರು ಭಾಗಿಯಾಗಿದರು,



