ತುರುವೇಕೆರೆ: ತಾಲೂಕಿನ ಬಿ.ಸಿ.ಕಾವಲ್ ರ‍್ವೆ ನಂ 1 ರಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳು ಹಾಗೂ ಭೂ ಮಾಫಿಯಾ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರ‍್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರ‍್ನಾಟಕ ದಲಿತ ಸಂರ‍್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿ ಬಾಣಸಂದ್ರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನರ‍್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡರು.

ರ‍್ನಾಟಕ ದಲಿತ ಸಂರ‍್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ತಾಲೂಕಿನ ದಂಡಿನಶಿವರ ಹೋಬಳಿ ಬಿ.ಸಿ. ಕಾವಲ್ ರ‍್ವೆ ನಂ 1 ರಲ್ಲಿ ಹಲವು ದಶಕಗಳಿಂದ ಸ್ಥಳೀಯ ರೈತರು ತಾತ, ಮುತ್ತಾತಂದಿರ ಕಾಲದಿಂದ ಉಳುಮೆ ಮಾಡಿಕೊಂಡು, ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ರ‍್ಕಾರದಿಂದ ಸಾಗುವಳಿ ಚೀಟಿ ಪಡೆದಿದ್ದಾರೆ. ಆದರೂ ಕೆಲವು ಭೂ ಮಾಫಿಯಾದವರು ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಭೂ ಮಾಫಿಯಾದವರು ಬೇನಾಮಿ ಹೆಸರಿಸಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಲವು ಸಂಘಟನೆಗಳ ಹೆಸರನ್ನು ದರ‍್ಬಳಕೆ ಮಾಡಿಕೊಂಡು, ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ರೈತರು ಪ್ರಶ್ನಿಸಲು ಹೋದರೆ ಜಾತಿ ನಿಂದನೆ ಕೇಸ್ ಹಾಕಿಸುವ ಬೆದರಿಕೆ ಹಾಕಿ ಕಳಿಸುತ್ತಿದ್ದಾರೆ. ಪೋಲೀಸರಿಗೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಕೂಡಲೇ ಭೂ ಮಾಫಿಯಾ, ದಲ್ಲಾಳಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ದಂಡಿನಶಿವರ ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕರು, ಡಿಎಸ್‌ಎಸ್.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಚಿದಾನಂದ್, ದಲಿತ ಸಂರ‍್ಷ ಸಮಿತಿ ರಾಜ್ಯ ಮಹಿಳಾ ಘಟಕ ಸಂಘಟನಾ ಸಂಚಾಲಕಿ ಲಾವಣ್ಯ, ಜಿಲ್ಲಾ ಸಂಘಟನಾ ಸಂಚಾಲಕರಾದ ಕುಣಿಗಲ್ ಶಿವಶಂಕರ್, ನಾಗರಾಜು, ದಯಾನಂದ್ ಹಟ್ನ, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ಮುಖಂಡರಾದ ಗೋವಿಂದರಾಜ್, ಬಸವರಾಜು, ತಮ್ಮಯ್ಯ, ಶಿವಣ್ಣ, ವಿನಯ್, ಸಂತೋಷ್, ಕೆಂಪಣ್ಣ, ಅಬ್ಜಲ್ ಸೇರಿದಂತೆ ಇತರರು ಇದ್ದರು.

 

(Visited 1 times, 1 visits today)