ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಬೇಟರಾಯ ಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿ0ದ ಸೋಮವಾರ ನಡೆಯಿತು.
ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಮಹಾಲಕ್ಷ್ಮೀ ಬೇಟರಾಯಸ್ವಾಮಿಗೆ ವಿಶೇಷ ಅಭಿಷೇಕ, ವಿವಿದ ಹೂ ಅಲಂಕಾರದಿ0ದ ಅಲಂಕರಿಸಿ ಹಲವು ಪೂಜೆ ನೆರವೇರಿಸಿ ದಾರ್ಮಿಕ ವಿಧಿ ವಿದಾನ ನೆಡೆಸಿದರು. ನಂತರ ನೆರೆಯ ದೇವರಾದ ಬೇಟರಾಯಸ್ವಾಮಿಯನ್ನು ಉತ್ಸವದ ಮೂಲಕ ಕರೆ ತಂದು ರಥಕ್ಕೆ ಕುರಿಸಿ ಮಹಾ ಮಂಗಾಳಾರತಿ ಮಾಡಲಾಯಿತು.. ರಥಕ್ಕೆ ಎಡೆ ಅನ್ನ ನೈವೇದ್ಯ ಪೂಜೆ ನೆರವೇರಿಸಿದ ನಂತರ ಆಕಾಶದಲ್ಲಿ ಗರಡು ದರ್ಶನ ನೀಡಿದ ನಂತರ ಭಕ್ತರು ಬಹಳ ಬಿರು ಬಿಸಲನ್ನು ಲೆಕ್ಕಿಸದೆ ಉತ್ಸಾಹದಿಂದ ರ ಥವನ್ನು ಎಳೆದರು. ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಿದರು. ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರ ಥೋತ್ಸವಕ್ಕೂ ಮುನ್ನಾ ಭಾರತೀಯ ಸಂಪ್ರದಾಯಿಕ ಉಡುಪು ದರಿಸಿದ್ದ ಮಹಿಳೆಯರಿಂದ ಕೋಲಾಟ, ಭಜನಾ ಕಾರ್ಯಕ್ರಮ ವಾದ್ಯಗೋಷ್ಟಿಗಳು ಭಕ್ತರ ಗಮನ ಸೆಳೆಯಿತು. ರಥೋತ್ಸವದ ಅಂಗವಾಗಿ ಆಗಮಿಸಿದ್ದ ಭಕ್ತಾದಿಗಳಿಂದ ಬಂದAತ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದ್ದು ವಿಶೇಷವಾಗಿತ್ತು. ನಂತರ ಮಸರನ್ನ,ಪುಳಿಯೊಗರೆ, ಬಿಸಿಬೇಳೆಬಾಥ್, ಮೈಸೂರು ಪಾಕ್ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸವಿದರು.
ರಥೋತ್ಸವದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ತುಮುಲ್ ನಿರ್ದೇಶಕ ಸಿ.ವಿ.ಮಹಾಲಿಂಗಯ್ಯ, ಮುಖಂಡರಾದ ಎಂ.ಡಿ. ಮೂರ್ತಿ, ರಂಗನಾಥ್, ತಾಳಕೆರೆಶ್ರೀಕಾಂತ್, ತಹಶೀಲ್ದರ್ ಗ್ರೇಡ್ ೨ ಸುಮತಿ, ಶೀರಸ್ಥೆದಾರ್ ಸುನಿಲ್ ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.

(Visited 1 times, 1 visits today)