ತುಮಕೂರು: ವಿಜ್ಞಾನದ ಜೊತೆ ಸಾಹಿತ್ಯಿಕ ಮನೋಭಾವ ನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಒಬ್ಬ ಉತ್ತಮ ವಿಜ್ಞಾನ ವಿದ್ಯಾರ್ಥಿ ಯಾಗಬೇಕಾದರೆ ಸಾಹಿತ್ಯದ ಅರಿವಿರುವುದು ಅತ್ಯಗತ್ಯ ಎಂದು ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಆರ್.ಆರ್. ಇನ್ಸಿ÷್ಟಟ್ಯೂಷನ್ ನಿರ್ದೇಶಕರಾದ ಪ್ರೊಫೆಸರ್ ಗುರುರಾಜ್ ಎಸ್. ತಿಳಿಸಿದರು.
ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಐಕ್ಯೂಎಸ್‌ಸಿ ಮತ್ತು ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಮಾ. ೨೪ ಮಂಗಳವಾ ರದಂದು ಹಮ್ಮಿಕೊಂಡಿದ್ದ “ಸಾಹಿತ್ಯ ಮತ್ತು ವೈಜ್ಞಾನಿಕ ಪ್ರಜ್ಞೆ” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊ ಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಎಂಟನೇ ಮೂಲಭೂತ ಕರ್ತವ್ಯವಾದ ವೈಜ್ಞಾನಿಕ ಮನೋಭಾವನೆ ಮತ್ತು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
೧೯೨೮ರಲ್ಲಿ ಸಿ.ವಿ. ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದ ನಂತರ, ಕಳೆದ ನೂರು ವರ್ಷಗಳಲ್ಲಿ ಮತ್ತೊಬ್ಬರು ಆ ಸಾಧನೆ ಮಾಡಲು ಸಾಧ್ಯವಾಗದಿರಲು ನಮ್ಮಲ್ಲಿರುವ ವೈಜ್ಞಾನಿಕ ಜ್ಞಾನದ ಮೂಲ ಕೊರತೆಯೇ ಕಾರಣ ಎಂದರು.
ಮರವೊಂದು ಒಣಗಿದ್ದರೆ ಅದರ ಕಾರಣವನ್ನು ಆಳವಾಗಿ ಪರಿಶೀಲಿಸುವ ದೃಷ್ಟಿಕೋನ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಾಮಾಜಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಕೊರತೆಯಿಂದಾಗಿ ಇಂದು ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿಗಳು ಎದುರಾಗುತ್ತಿವೆ. ಪರಿಸರ ದಿನಾಚರಣೆಯಂದು ಗಿಡ ನೆಡುವ ಸಂಭ್ರಮವಿದ್ದರೂ, ಸರ್ಕಾರಗಳು ಅರಣ್ಯ ನಾಶಕ್ಕೆ ಒಪ್ಪಿಗೆ ನೀಡುತ್ತಿರುವುದು ವಿಷಾದನೀಯ. ಸಾಹಿತಿಗಳು ಭೂಮಿಯ ಶೋಷಣೆಯ ಬಗ್ಗೆ ತಮ್ಮ ಕೃತಿಗಳಲ್ಲಿ ಎಚ್ಚರಿಸಿದ್ದಾರೆ, ಆದ್ದರಿಂದ ಸೃಷ್ಟಿಯ ರಕ್ಷಣೆಗಾಗಿ ಸಾಹಿತ್ಯದ ಓದು ಅಗತ್ಯವಾಗಿದೆ. ವಿಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ ಸಮಾಜಕ್ಕೆ ತಲುಪಬೇಕು ಎಂದು ಅವರು ಪ್ರತಿಪಾದಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ‘ಜೈ ವಿಜ್ಞಾನ್’ ಘೋಷಣೆಯನ್ನು ಸೇರಿಸುವ ಮೂಲಕ ವಿಜ್ಞಾನದ ಮಹತ್ವವನ್ನು ಎತ್ತಿಹಿಡಿದಿದ್ದಾರೆ ಎಂದು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ್ ಮಾತನಾಡಿ, ವಿಜ್ಞಾನದ ಅರಿವು ಹೆಚ್ಚಾದಂತೆ ವಿನಾಶಕಾರಿ ಬಾಂಬ್‌ಗಳು ಸೃಷ್ಟಿಯಾಗುತ್ತಿವೆ, ಆದರೆ ವಿಜ್ಞಾನವು ಹಸಿವಿನಂತಹ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಬಳಕೆಯಾಗಬೇಕು ಎಂದು ಆಶಿಸಿದರು.
ಇಂಗ್ಲಿಷ್ ವಿಭಾಗದ ಡಾ. ಜ್ಯೋತಿ ಅವರು ಪ್ರಾಸ್ತವಿಕವಾಗಿ ಮಾತನಾಡಿ ವಿಜ್ಞಾನವು ಹೊಸ ತಂತ್ರಜ್ಞಾನವನ್ನು ನೀಡಿದರೆ, ಸಾಹಿತ್ಯವು ಭಾವನಾತ್ಮಕ ಬೆಳವಣಿಗೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಮೂಡಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಸುಚೇತನ್ ಪಿ., ಡಾ. ಭರತ್ ಶಿಲ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)