
ತುಮಕೂರು: ಕನ್ನಡ ಸಾಹಿತ್ಯದ ಸಾವಿರಾರು ವರ್ಷಗಳ ಪರಂಪರೆಯಲ್ಲಿ ೧೨ನೇ ಶತಮಾನದ ಶರಣ ಶರಣೆಯರು ನುಡಿದ ವಚನಗಳು, ಕೇವಲ ನಾಲಿಗೆಯಿಂದ ಹೊರಬಂದ ಪದಗಳಲ್ಲ, ಕೇವಲ ಶಬ್ಧಗಳಲ್ಲ, ಜೀವನದಲ್ಲಿ ಕಂಡು0ಡ, ಸಾಂಸಾರಿಕ ಬದುಕಿನೊಂದಿಗೆ ಅನುಭವಿಸಿ ಪಕ್ವಗೊಂಡು ಹೊರಬಂದ ಅಂತರAಗದ ಅಮೃತ ಬಿಂದುಗಳು ಎಂದು ನಿವೃತ್ತ ಉಪನ್ಯಾಸಕರು, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ಯೋಗತಜ್ಞರೂ ಆದ ಶರಣ ಸೋಮಶೇಖರ ಶೀಲವಂತಣ್ಣನವರು ಅಭಿಪ್ರಾಯಪಟ್ಟರು.
ಅವರು ತುಮಕೂರು ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಎಸ್.ಎಸ್.ಪುರಂನ ಎಸ್.ಪಿ.ವೈ.ಎಸ್.ಎಸ್. ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಡೆದ ಜಿ.ಗವಿಸಿದ್ದಯ್ಯನವರ ನೂತನ ದತ್ತಿ, ಲಿಂ. ಎನ್.ಎಸ್.ಮಾಲಿಸಿ, ಲಿಂ. ಅಡವಮ್ಮ, ಲಿಂ. ಗುರುವಯ್ಯ ಸಂಸ್ಮರಣಾ ದತ್ತಿ ಪ್ರಯುಕ್ತ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಂಸ್ಮರಣೆಯ ೭೦ನೆಯ ಮಾಸಿಕ ಶರಣ ಚಿಂತನ ಗೋಷ್ಠಿ, ವಚನ ಗಾಯನ ಕಾರ್ಯಕ್ರಮದಲ್ಲಿ `ಶರಣರ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು” ಎಂಬ ವಿಷಯವಾಗಿ ಮಾತನಾಡುತ್ತಾ, ಅಂದಿನ ಶರಣರು ಆಡಂಬ ರದಿಂದ ದೂರವಿದ್ದವರು. ಸಾಂಸಾರಿಕ ಕಷ್ಟ, ಸುಖ, ನೋವು ನಲಿವುಗಳೊಂದಿಗೆ ಕಾಯಕ ಹಾಗೂ ದಾಸೋಹ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಬೆವರು ಸುರಿಸಿ ಕಾಯಕ ಮಾಡಿ ಗಳಿಕೆಯ ಸ್ವಲ್ಪ ಭಾಗವನ್ನು ದಾಸೋಹಕ್ಕೆ ಮೀಸ ಲಿಟ್ಟ ನಿಸ್ವಾರ್ಥ ಜೀವಿಗಳಾಗಿದ್ದರು ಎಂದು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ದಾಸಿಮಯ್ಯನವರ ವಚನಗಳನ್ನು ಉದಾಹರಿಸಿದರು.
ಉದ್ಘಾಟನೆ ಮಾಡಿದ ದತ್ತಿದಾನಿಗಳೂ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಜಿ.ಗವಿಸಿದ್ದಯ್ಯನವರು ತಮ್ಮ ತಂದೆ ತಾಯಿಯವರು ನಮಗೆ ನೀಡಿದ ಶಿಸ್ತಿನ ಜೀವನ, ಬಾಲ್ಯದಲ್ಲಿ ದೊರಕಿದ ಸಂಸ್ಕಾರ ಹಾಗೂ ಧರ್ಮಪತ್ನಿ ಎನ್.ಎಸ್.ಮಾಲಿನಿರವರ ದೈವಭಕ್ತಿ, ಶ್ರದ್ಧೆಗಳಿಂದಾಗಿ ಅವರ ನೆನಪು ನಮ್ಮ ಮುಂದಿನ ಪೀಳಿಗೆಗೆ ದೊರೆಯುವಂತಾಗಲಿ ಎಂದು ಈ ಶರಣ ದತ್ತಿ ಸ್ಥಾಪಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ವಿದ್ಯಾವಾಹಿನಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಟ್ಯಾಕಲ್ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಪ್ರೊ. ಎಸ್.ಕುಮಾರಸ್ವಾಮಿರವರು ಮಾತನಾಡುತ್ತಾ, ಮೈಸೂರಿನ ಸುತ್ತೂರು ಮಠದ ಡಾ. ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ದೂರದರ್ಶಿತ್ವದಿಂದ ೧೯೮೬ರಲ್ಲಿ ಸ್ಥಾಪನೆಯಾಗಿ, ೪೦ ವರ್ಷಗಳಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮೀರಿ ದೇಶ ವಿದೇಶಗಳಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ಸಭೆಗೆ ಪರಿಚಯಿಸಿದರು. ನಿರಂತರವಾಗಿ ಶರಣರ ಆ ದರ್ಶ ಬದುಕನ್ನು ಸಮಾಜಕ್ಕೆ ಮೌನವಾಗಿ ಪರಿಚಯಿ ಸುತ್ತಿರುವ ಪರಿಷತ್ತು ಹೀಗೆಯೇ ಸೇವಾ ಸಂಸ್ಥೆಯಾಗಿ ಮುಂದುವರಿಯಲಿ ಎಂದು ಆಶಿಸಿ ದರು. ಅಧ್ಯಕ್ಷ ಸ್ಥಾನದಿಂದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿದರು. ಭವಾನಮ್ಮ, ಸುನಂದಕ್ಕ, ಕುಮಾರಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ರಾಜಶೇಖರಯ್ಯ ಈಚನೂರು ಸ್ವಾಗತಿಸಿ ನಿರೂಪಿಸಿದರು. ಮಿಮಿಕ್ರಿ ಈಶ್ವರ ಯ್ಯ ವಂದಿಸಿದರು. ಗುರುಮಲ್ಲಪ್ಪನವರಿಗೆ ಜನ್ಮದಿನ ಶುಭಾಶಯ ಕೋರಿದ ರು. ಎಸ್.ವಿ.ರವೀಂದ್ರನಾಥ ಠಾಗೂರ್ ಉಪಸ್ಥಿತರಿದ್ದರು.



