ಚಿಕ್ಕನಾಯಕನಹಳ್ಳಿ: ಅಧಿಕಾರಿಗಳ ಹಾಗೂ ಜನರ ನಡುವೆ ಮದ್ಯವರ್ತಿಗಳ ಹಾವಳಿ ಹಾಗೂ ಲಂಚದ ಆಮೀಷವನ್ನು ತಪ್ಪಿಸುವ ಉದ್ದೇಶದಿಂದ ಮತ್ತು 
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಮಗ ಮನೆಬಾಗಿಲಿಗೆ ಶಿರ್ಷಿಕೆಯಡಿಯಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳನ್ನು ಹಾಗೂ ಶಾಸಕರನ್ನು ಹುಡುಕಿಕೊಂಡು ಅಲೆದಾಡಬಾರದು ಎಂದು ಈಡೀ ಈ ಕ್ಷೇತ್ರದ ಒಟ್ಟು ೩೪ ಗ್ರಾಮಪಂಚಾಯಿತಿ ವ್ಯಾಪ್ತಿ ಹಾಗೂ ಪುರಸಭೆ ಮತ್ತು ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ವನ್ನು ರೂಪಿಸಿದ್ದು ಇದರಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಿ ಎಂದ ಅವರು ಈಗಾಗಲೇ ಮುದ್ದೇನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದ್ದು ಬೈಯಲಪ್ಪನ ಮಠಕ್ಕೊಂದು ೫೦ಲಕ್ಷವೆಚ್ಚದಲ್ಲಿ ಸಮುದಾಯ ಭವನವನ್ನು ಮಂಜೂರು ಮಾಡಲಾಗುವುದು ಈ ಗಾಗಲೇ ಗಣಿಬಾದಿತ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ೧೪೦೦ಮನೆಗಳು ಮಂಜೂರಾತಿಗೆ ಹೋಗಿದ್ದು ಇದರಲ್ಲಿ ೭ಲಕ್ಷ ಹಣವನ್ನು ಮನೆ ನಿರ್ಮಿಸಿಕೊಳ್ಳಲು ನೀಡಲಾಗುವುದು ಈ ಮನೆಗಳು ಬಂದ ನಂತರ ಹಂತಹoತವಾಗಿ ನಿವೇಶನ ರಹಿತರಿಗೆ ನಿವೇಶನ ಗುರುತಿಸಿವುದು ಸೇರಿದಂತೆ ಅವರಿಗೂ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಮಮತಾ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಈಗಾಗಲೇ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಇದು ಸವೆ ಇಲಾಕೆಯವರು ಮಾಡಬೇಕಾಗಿರುವಂತಹ ಕೆಲವನ್ನು ಅವರು ಮಾಡಬೇಕಿದೆ ಎಂದ ಅವರು ತೋಟದ ಮನೆಗಳಿಗೆ ಸಿಗಬಹುದಾದಂತಹ ಸೌಲಭ್ಯಗಳನ್ನು ಆಯಾ ಪಂಚಾಯಿತಿಗಳ ಅಧಿಕಾರಿಗಳ ಬಳಿ ಕೇಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಹೆಚ್ಚ.ಕಾವಲು ಗ್ರಾಮದಲ್ಲೊಂದು ಪಡಿತರ ವಿತರಣೇ ಕೇಂದ್ರವನ್ನು ತೆರೆಯ ಬೇಕು ಎಂದು, ಬೈಲಪ್ಪನ ಮಟದಲ್ಲೊಂದು ಸಮುದಾಯ ಭವನ ನಿರ್ಮಿಸುವಂತೆ, ರಸ್ತೆಯಲ್ಲಿ ಸಾರ್ವಜನಿಕರಿಗೆ ತಂಗುದಾಣವನ್ನು ನಿರ್ಮಿಸುವಂತೆ ಮತ್ತು ಮುದ್ದೇನಹಳ್ಳಿ ಸರ್ವೆನಂಬರ್ ೫೩,೫೪,೫೬ರಲ್ಲಿ ಸೇಂದಿವನ ವನ್ನು ಉಳುಮೆ ಮಾಡಿಕೊಂಡು ಬರುತ್ತಿರುವಂತಹ ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸುವಂತೆ ಮತ್ತು ಎಂ.ಹೆಚ್‌ಕಾವಲ್‌ನ ಸರ್ವೆನಂಬರ್ ೩೪ರಲ್ಲಿ ೨೦೧೨ರಲ್ಲಿ ಐದಾರು ಜನ ರೈತರಿಗೆ ಸಾಗುವಳಿ ಚೀಟಿ ನೀಡಿದ್ದು ಅವರಿಗೆ ಇನ್ನು ಖಾತೆ ಮಾಡಿಕೊಟ್ಟಿಲ್ಲ ಈ ಬಗ್ಗೆ ಗಮನ ಹರಿಸುವಂತೆ ಮನವಿ, ಮನೆಗಳನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡುವಂತೆ , ರಸ್ತೆಗಳನ್ನು ದುರಸ್ಥಿ ಮಾಡಿಸುವಂತೆ ಮನವಿಗಳು ಸಲ್ಲಿಕೆಯಾದವು.
ಮುದ್ದೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಎಂ.ಹೆಚ್.ಕಾವಲ್, ಬಯಲಪ್ಪನ ಮಠ, ಸಾಲ್ಕಟ್ಟೆ, ಲಕ್ಮೇನಹಳ್ಳಿ, ಆಲದಕಟ್ಟೆ, ಬ್ಯಾಲದಕೆರೆ, ಮಾಳಿಗೆಹಳ್ಳಿ, ಸಾವಶೆಟ್ಟಿಹಳ್ಳಿ, ಜೋಡಿಕಲ್ಲೇನಹಳ್ಳಿ ಹಾಗೂ ಮದ್ದೇನಹಳ್ಳಿ ಗ್ರಾಮಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಇಒ ಹರೀಶ್, ಮುದ್ದೇನಹಳ್ಳಿ ಗ್ರಾ.ಪಂ.ಆಡಳಿತಾದಿಕಾರಿ ಜಯರಾಮ್, ಬಿಇಒ ಕಾಂತರಾಜು, ಕೃಷಿ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ಆಹಾರ ನಿರೀಕ್ಷಕ ರಾಹುಲ್, ಪಶುಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜು, ಪಿಡಿಒ ಬರ?ಪ ಬಸವಣ್ಣ ಪೂಜಾರಿ ಸೇರಿದಂತೆ ಸ್ಥಳೀಯ ಮುಖಂಡರುಗಳಾದ ಮಲ್ಲೇಶ್, ಚಂದ್ರಶೇಖರ್, ರಾಮಚಂದ್ರಯ್ಯ ಹಾಗೂ ಇತರರು ಹಾಜರಿದ್ದರು.


