ತುಮಕೂರು: ಕೇವಲ ಒಳ್ಳೆಯ ಅಂಕ ಗಳಿಕೆಯಷ್ಟೇ ಶಿಕ್ಷಣದ ಉದ್ದೇಶವಲ್ಲ.ಅಂಕಗಳ ಜೊತೆಗೆ ಉತ್ತಮ ಚಾರಿತ್ರ÷್ಯ,ಒಳ್ಳೆಯ ನಡತೆ, ಮಾನವೀಯ ಗುಣಗಳನ್ನು ಬೆಳೆಸುವುದು ಸಹ ಆಗಿದೆ ಎಂದು ತುಮಕೂರು ಜಿಲ್ಲಾ ಪಿಯು ಡಿಡಿಪಿಐ ರಾಧಾ ಎಂ.ಎಸ್. ತಿಳಿಸಿದ್ದಾರೆ
ನಗರದ ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನ ಸಂಸ್ಕöÈತಿ-೨೦೨೬-೨೭ ರಲ್ಲಿ ಪ್ರತಿಭಾ ಪುರಸ್ಕಾರ, ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣವೆಂಬುದು ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಒಂದು ಮಹತ್ ಸಾಧನ ಎಂದರು
ನಾನು ವಿಧ್ಯಾರ್ಥಿ ದಿಸೆಯಿಂದಲೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಬೇಕು ಎಂಬ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಂದು ಅವರೇ ಹುಟ್ಟು ಹಾಕಿದ ಕಾಲೇಜಿನಲ್ಲಿ ಮಾತನಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ವಿಧ್ಯಾರ್ಥಿ ಗಳಿಗೆ ತಮ್ಮ ತಂದೆ,ತಾಯಿಗಳೇ ರೋಲ್ ಮಾಡಲ್ ಆಗಬೇಕು. ಗುರು,ಹಿರಿಯರು ಸಹೋದರರೊಂದಿಗೆ ಒಳ್ಳೆಯ ಭಾಂಧ್ಯವ್ಯ ಹೊಂದಿ ತಾವು ಕೂಡ ತಮಗಿಂತ ಕಿರಿಯರಿಗೆ ಮಾದರಿಯಾದ ವ್ಯಕ್ತಿತ್ವ ರೂಪಿಸಿಕೊಂಡಾಗ ಮಾತ್ರ ನಿಮ್ಮ ವಿದ್ವತ್ ಗೆ ಬೆಲೆ ಬರುತ್ತದೆ. ಸಮಾಜದಿಂದ ಎಲ್ಲವನ್ಬು ಪಡೆಯುವ ನೀವುಅವಕಾಶ ಸಿಕ್ಕಂತ ಸಂದರ್ಭದಲ್ಲಿ ಸಮಾಜಕ್ಕೆ ಎನ್ನನ್ನಾದರೂ ನೀಡುವ ಗುಣ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳು ಯಾವುದರಲ್ಲಿಯೂ ಕಡಿಮೆ ಇಲ್ಲ. ಸಾಧನೆಗೆ ಮಿತಿ ಎಂಬುದಿಲ್ಲ. ಅಸೂಯೆಯನ್ನು ಬದಿಗಿಟ್ಟು ಗುರಿಯಡೆಗೆ ಸಹಬಾಳ್ವೆಯೊಂದಿಗೆ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಪಿಯು ಡಿಡಿಪಿಐ ರಾಧಾ ಎಂ.ಎಸ್.ತಿಳಿಸಿದರು.
ಲೇಖಕಿ ಮತ್ತು ಯುವ ವಾಗ್ಮಿ ಹಾರಿಕ ಮಂಜುನಾಥ್ ಮಾತನಾಡಿ, ಭಾರತೀಯ ಸಂಸ್ಕöÈತಿಯ ಗುಡಿ ಗೋಪುರಗಳಲ್ಲಿ ಅಡಕವಾಗಿಲ್ಲ. ಅದು ವೇದ,ವಚನಗಳಲ್ಲಿ ಅಡಕವಾಗಿದೆ. ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಂತ ಸಂತರು ಒಂದು ಶತಮಾನಗಳ ಕಾಲ ಬದುಕಿದ್ದು ಹತ್ತಾರು ಶತಮಾನಗಳಿಗೆ ಆಗುವಂತಹ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಸಂಸ್ಖöÈತಿಯ ವಾರಸುದಾರರೇ ಯುವಜನರು,ಅದರಲ್ಲಿಯೂ ಮಹಿಳೆಯರು. ನಮ್ಮ ಪೂರ್ವಜರು ಈ ನಾಡಿನ ಕಲೆ,ಸಾಹಿತ್ಯ, ವಿಜ್ಞಾನ,ಗಣಿತ ಹೀಗೆ ಎಲ್ಲಾ ವಿಷಯಗಳಿಗೂ ಆಪಾರ ಕೊಡುಗೆ ನೀಡಿದ್ದಾರೆ.ಅದನ್ನು ಮುಂದುವರೆಸಿಕೊAಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಿದ್ದಗAಗಾ ಪದವಿಪೂರ್ವ ಕಾಲೇಜು ಗಳ ಸಂಯೋಜಕ ರಾದ ಪ್ರೊ.ಜಿ.ಎಸ್.ರೇಣುಕಪ್ಪ ಮಾತನಾಡಿ, ನಮ್ಮ ಕಾಲೇಜುಗಳಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದವೆ.ಹಾಗಾಗಿ ಜಿಲ್ಲೆಯಲ್ಲಿ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿಗೆ ಒಳ್ಳೆಯ ಹೆಸರಿದೆ. ಉತ್ತಮ ಪ್ರಜೆಗಳನ್ನು ರೂಪಿಸುವ ಕೆಲಸ ನಮ್ಮಲ್ಲಿ ನಡೆದಿದೆ ಎಂದರು.
ಸಿದ್ದಗAಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಟಿ.ಕೆ.ನಂಜುAಡಪ್ಪ ಮಾತನಾಡಿದರು.
ಸಂಸ್ಕöÈತಿ ವೇದಿಕೆಯ ಸಂಚಾಲಕರಾದ ಸಮಾಜಶಾಸ್ತç ಉಪನ್ಯಾಸಕಿ ಮಂಜುಳ ಬಿ.ಎಸ್. ಕಾಲೇಜಿನ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ೧೧೨ ಜನ ವಿದ್ಯಾರ್ಥಿನಿಯರಿಗೆ,ಹಾಗು ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ,ಭೋಧಕೇತರಸಿಬ್ಬಂದಿಗಳು ಹಾಗೂ ಮಕ್ಕಳು ಅವರ ಪೋಷಕರು ಪಾಲ್ಗೊಂಡಿದ್ದರು.

(Visited 1 times, 1 visits today)