ಹುಳಿಯಾರು: ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆದೇಶದಂತೆ ಹಾಗೂ ಸಂಪುಟ ಸಭೆಯ ನಿರ್ಣಯದನ್ವಯ, ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ’ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಮತ್ತು ನೋಂದಾಯಿಸಲು ಆಸಕ್ತ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಜನರಲ್ಲಿ ಕ್ರೀಡೆ, ಸಂಸ್ಕöÈತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ ೪,೦೦೦ ಜನಸಂಖ್ಯೆಗೆ ಒಂದರAತೆ ಯುವ ಸಂಘಗಳನ್ನು ಸ್ಥಾಪಿಸಲು ಆದೇಶಿಸಲಾಗಿದ್ದು, ಹುಳಿಯಾರಿನಲ್ಲೂ ಈ ಪ್ರಕ್ರಿಯೆ ಆರಂಭಗೊAಡಿದೆ.
ಅರ್ಜಿ ಸಲ್ಲಿಕೆ ಮತ್ತು ಅರ್ಹತೆಗಳು: ೧೬ ರಿಂದ ೩೫ ವರ್ಷ ವಯೋಮಿತಿಯ ಸ್ಥಳೀಯ ನಿವಾಸಿಗಳು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಪ್ರತಿ ಘಟಕದಲ್ಲಿ ಕನಿಷ್ಠ ೧೦೦ ಸದಸ್ಯರಿರಬೇಕಿದ್ದು, ಪೋರ್ಟಲ್/ಮೊಬೈಲ್ ಆಪ್ ಮೂಲಕ ಅಥವಾ ಸ್ಥಳೀಯ ’ಕರ್ನಾಟಕ ಒನ್’ ಹಾಗೂ ನಾಗರಿಕ ಸೇವಾ ಕೇಂದ್ರಗಳ (ಗ್ರಾಮ ಒನ್) ಸಹಾಯದಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸದಸ್ಯರಿಗೆ ತಲಾ ೧೦ ರೂ. ನೋಂದಣಿ ಶುಲ್ಕ ನಿಗದಿಯಾಗಿದೆ. ಸಂಘಗಳನ್ನು ’ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦’ರ ಅಡಿಯಲ್ಲಿ ನೋಂದಾಯಿಸಲಾಗುತ್ತದೆ.
ಆಡಳಿತ ಮಂಡಳಿ ಮತ್ತು ಮೀಸಲಾತಿ: ಪ್ರತಿ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ೧೫ ಜನರ ಕಾರ್ಯಾಕಾರಿ ಸಮಿತಿಯನ್ನು ಹೊಂದಿರುತ್ತದೆ. ಸಮಿತಿಯಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಗಳಲ್ಲಿ ಕನಿಷ್ಠ ಒಬ್ಬರು ಮಹಿಳೆ ಇರಬೇಕಾದುದು ಕಡ್ಡಾಯ. ಸಮಿತಿಯಲ್ಲಿ ಎಸ್‌ಸಿ/ಎಸ್‌ಟಿ (೩ ಸದಸ್ಯರು), ಒಬಿಸಿ ಮತ್ತು ಅಲ್ಪಸಂಖ್ಯಾತರು (೪ ಸದಸ್ಯರು) ಹಾಗೂ ಸಾಮಾನ್ಯ ವರ್ಗದ (೮ ಸದಸ್ಯರು) ಯುವಕ-ಯುವತಿಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಸಮಿತಿಯ ಅವಧಿ ೨ ವರ್ಷಗಳಾಗಿದ್ದು, ಎಲ್ಲ ವರ್ಗಗಳ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗಿದೆ.
೧೦ ಲಕ್ಷ ವಾರ್ಷಿಕ ಅನುದಾನ: ನಿಯಮಾವಳಿಗಳಂತೆ ಯಶಸ್ವಿಯಾಗಿ ರಚನೆಯಾಗುವ ಪ್ರತಿ ’ಭಾರತ್ ಜೋಡೋ ಯುವ ಸಂಘ’ಕ್ಕೆ ಸರ್ಕಾರದಿಂದ ವಾರ್ಷಿಕವಾಗಿ ಒಟ್ಟು ೧೦.೦೦ ಲಕ್ಷ ರೂ. ಅನುದಾನ ಮೂರು ಕಂತುಗಳಲ್ಲಿ ಬಿಡುಗಡೆಯಾಗಲಿದೆ. ಈ ಹಣವನ್ನು ಕ್ರೀಡಾ ಉಪಕರಣಗಳ ಖರೀದಿ, ಕಂಪ್ಯೂಟರ್/ಇAಟರ್ನೆಟ್ ಸೌಲಭ್ಯ, ಸ್ಥಳೀಯ ಕ್ರೀಡಾಕೂಟ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಯುವ ಸಬಲೀಕರಣ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅವಕಾಶವಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರ್ಹ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಜಂಟಿಯಾಗಿ ’ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಿ, ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಮುಖ್ಯಾಧಿಕಾರಿ ಮಂಜುನಾಥ್ ವಿನಂತಿಸಿದ್ದಾರೆ.
(Visited 1 times, 1 visits today)



