
ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ತುಮಕೂರು ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಭಾರತ ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ಅಪ್ರತಿಮ ಧೈರ್ಯ ಮತ್ತು ಶೌರ್ಯದ ವನಿತೆಯೆಂದೇ ಬಿಂಬಿತವಾದ ರಾಣಿ ಲಕ್ಷಿ÷್ಮÃಭಾಯಿರವರ ಪುಣ್ಯಸ್ಮರಣೆಯನ್ನು ಇಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ರಾಣಿ ಲಕ್ಷಿ÷್ಮÃಭಾಯಿರವರ ವಿಚಾರಧಾರೆಯ ಬಗ್ಗೆ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ವೀರ ಮಾತೆಯವರು ದೇಶದ ಸ್ವಾಭಿಮಾನ ಮತ್ತು ಸ್ವಾತಂತ್ರ÷್ಯಕ್ಕಾಗಿ ಬ್ರಿಟಿಷರ ವಿರುದ್ಧ ಅಚಲ ಸಂಕಲ್ಪದಿAದ ಹೋರಾಡಿದ ಅವರು ಮಹಿಳಾ ಶಕ್ತಿಯ ಪ್ರತೀಕವಾಗಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ, ದೇಶಪ್ರೇಮ ಮತ್ತು ತ್ಯಾಗದ ಅವರ ಆದರ್ಶಗಳು ಇಂದಿಗೂ ಪ್ರೇರಣೆಯಾಗಿ ಉಳಿದಿವೆ ಎಂದರೆ ತಪ್ಪಾಗಲಾರದು ಅವರ ಶೌರ್ಯಗಾಥೆ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರಲಿ ಎಂದು ನುಡಿಯುತ್ತಾ ದತ್ತು ಮಕ್ಕಳಿಗೆ ಸಿಂಹಾಸನದ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ವೀರಾವೇಶದಿಂದ ಹೋರಾಡಿದ ಧೀರ ಮಹಿಳೆ ಆಗಿದ್ದರು ಎಂದು ತಿಳಿಸಿದರು.
ಇನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ ಮಾತನಾಡುತ್ತಾ ೧೮೫೭ರ ಪ್ರಥಮ ಸ್ವಾತಂತ್ರ÷್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಾನ್ ಸ್ವಾತಂತ್ರ÷್ಯ ಹೋರಾಟಗಾರ್ತಿ, ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ವೀರವನಿತೆ ಝಾನ್ಸಿ ರಾಣಿ ಲಕ್ಷಿ÷್ಮÃಬಾಯಿ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷರ ನೀತಿಯನ್ನು ಧೈರ್ಯದಿಂದ ದಿಕ್ಕರಿಸಿ, ಮಾತೃಭೂಮಿಯ ಸಾರ್ವಭೌಮತೆಗಾಗಿ ರಣರಂಗದಲ್ಲಿ ವೀರಮರಣವನ್ನಪ್ಪಿದ ಅವರ ಇತಿಹಾಸ ಇಂದಿಗೂ ನಮಗೆ ಪ್ರೇರಣೆ ಎಂದು ತಿಳಿಸಿದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ಟೈಲರ್ ಜಗದೀಶ್ ಮಾತನಾಡುತ್ತ ೧೮೫೭ರ ಪ್ರಥಮ ಸ್ವಾತಂತ್ರ÷್ಯ ಸಮರದಲ್ಲಿ ಅಪ್ರತಿಮ ಧೈರ್ಯ, ದೇಶಭಕ್ತಿ ಮತ್ತು ನಾಯಕತ್ವದ ಮೂಲಕ ಇತಿಹಾಸದಲ್ಲಿ ಅಜರಾಮರರಾದ ವೀರವನಿತೆ ಝಾನ್ಸಿ ರಾಣಿ ಲಕ್ಷಿ÷್ಮÃಬಾಯಿ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ ಎಂದರು ಅವರ ಬದುಕು ಮಹಿಳಾ ಸಬಲೀಕರಣ, ಸ್ವಾಭಿಮಾನ ಹಾಗೂ ದೇಶಪ್ರೇಮದ ಶಾಶ್ವತ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ.ನಿಧಿ ಕುಮಾರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿ ಕುಮಾರ್ ಎನ್, ಜಿಲ್ಲಾ ಕಾರ್ಯಾಧ್ಯಕ್ಷರು ಕೆಸ್ತೂರು ನರಸಿಂಹಮೂರ್ತಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ. ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಮಾರ್ಗೋ ವೆಂಕಟೇಶ್, ಮುಖಂಡರುಗಳಾದ ಹನುಮನರಸಯ್ಯ. ಮಾರ್ಕೆಟ್ ಮಣ್ಣೆಪ್ಪ, ವಿಜಿ, ನರಸಿಂಹ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.


