ಹುಳಿಯಾರು: ವಿದ್ಯಾರ್ಥಿ ದೆಸೆಯಲ್ಲಿ ಮನಸ್ಸಿನ ಚಂಚಲತೆಗೆ ಆಸ್ಪದ ನೀಡದೆ ಯೋಗ, ಧ್ಯಾನ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಧೃಡ ಹಾಗೂ ಸಾರ್ಥಕ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಕಂದಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಮಾಲತೇಶ್ ಹೇಳಿದರು.
ಹುಳಿಯಾರು ವಾಸವಿ ಆಂಗ್ಲ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ’ಸ್ವಾಸ್ಥ÷್ಯ ಸಂಕಲ್ಪ’ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
೧೦ ರಿಂದ ೨೦ ವರ್ಷದ ಹದಿಹರೆಯದ ವಯಸ್ಸು ಅತ್ಯಂತ ಸೂಕ್ಷ÷್ಮವಾದದ್ದು. ಈ ಹಂತದಲ್ಲಿ ದೇಹದಲ್ಲಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಂದ ಮನಸ್ಸು ದುರಭ್ಯಾಸ ಅಥವಾ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ’ವಿದ್ಯಾರ್ಥಿ ಜೀವನ ಬಂಗಾರದ ಜೀವನ’ ಎಂಬುದನ್ನು ಅರಿತು, ಸಮಯವನ್ನು ವ್ಯರ್ಥ ಮಾಡದೆ ಸಂಪೂರ್ಣವಾಗಿ ಶಿಕ್ಷಣಕ್ಕೆ ಮುಡಿಪಾಗಿಡಬೇಕು ಎಂದು ಕಿವಿಮಾತು ಹೇಳಿದರು.
ಮಾನವನ ಸರಾಸರಿ ಆಯುಷ್ಯ ೬೦ ರಿಂದ ೬೫ ವರ್ಷಗಳು. ಇದರಲ್ಲಿ ಮೂರನೇ ಒಂದು ಭಾಗದಷ್ಟು ಸಮಯ ನಿದ್ರೆಗೆ, ಮತ್ತೊಂದು ಭಾಗ ಸ್ವಂತ ಹಾಗೂ ನಿತ್ಯಕರ್ಮಗಳಿಗೆ ಮತ್ತು ಉಳಿದ ಭಾಗ ಶಾಲೆ, ಉದ್ಯೋಗ ಹಾಗೂ ವೃತ್ತಿಜೀವನಕ್ಕೆ ಕಳೆದು ಹೋಗುತ್ತದೆ. ಹೀಗಾಗಿ ನಮಗೆ ಸಿಗುವ ಅತ್ಯಲ್ಪ ಸಮಯವನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಸಂಸ್ಕಾರ ಹಾಗೂ ಸಂಸ್ಕöÈತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಲಯದ ಮೇಲ್ವಿಚಾರಕಿ ಭಾಗ್ಯಮ್ಮ, ವಾಸವಿ ಆಂಗ್ಲ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು, ಸೇವಾಪ್ರತಿನಿಧಿಗಳು ಹಾಗೂ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(Visited 1 times, 1 visits today)