ಪಾವಗಡ: ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿAದ ೫ ಲಕ್ಷ ಪರಿಹಾರ ಮಂಜೂರಾಗಿದೆ. ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಿದ ೫ ತಿಂಗಳಲ್ಲೇ ಪರಿಹಾರ ಹಣ ಮೃತರ ಪತ್ನಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಿದೆ.
ಪಾವಗಡ ತಾಲ್ಲೂಕು ಕಸಬಾ ಹೋಬಳಿ ಮೇಡಿಹಳ್ಳಿ ಗ್ರಾಮದ ರಾಜಶೇಖರ್ ಎಂಬ ಚಾಲಕ ೫ ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರು ಕಾರ್ಮಿಕ ಕಾರ್ಡ್ ಹೊಂದಿದ್ದ ಹಿನ್ನೆಲೆಯಲ್ಲಿ ಅಪಘಾತ ಪರಿಹಾರಕ್ಕೆ ಅರ್ಹರಾಗಿದ್ದರು.
ಗಡಿನಾಡು ಪಾವಗಡ ವಾಣಿಜ್ಯ ವಾಹನಗಳ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ ಬಿ ಹಾಗೂ ಪದಾಧಿಕಾರಿಗಳು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ, ಕಾರ್ಮಿಕ ಇಲಾಖೆಯ ಅಪಘಾತ ಪರಿಹಾರ ವಿಮೆ ಯೋಜನೆ ಕುರಿತು ಮಾಹಿತಿ ನೀಡಿದರು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ನೆರವಾದ ಪರಿಣಾಮ ತ್ವರಿತವಾಗಿ ಪರಿಹಾರ ಮಂಜೂರಾಗಿದೆ.
ಸAಘಟನೆಯ ನೆರವು ಮತ್ತು ಸರ್ಕಾರದ ಸ್ಪಂದನೆಗೆ ಕೃತಜ್ಞರಾಗಿದ್ದೇವೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮಪ್ಪ, ಪ್ರಧಾನ ಕಾರ್ಯದರ್ಶಿ ರಘು, ಹಿರಿಯ ಚಾಲಕ ತಿಮ್ಮಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

(Visited 1 times, 1 visits today)