ತುಮಕೂರು: ರಾಜ್ಯ ಹೈಕೋರ್ಟ್ ನೈಸ್ ಭೂಮಿಯನ್ನುರೈತರಿಗೆ ವಾಪಸು ನೀಡಬೇಕೆಂದು ಮತ್ತುಅಕ್ರಮವಾಗಿ ಸಂಗ್ರಹಿಸುತ್ತಿರುವಟೋಲ್ ಸಂಗ್ರಹ ನಿಲ್ಲಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೆ ತಾರದ ಕರ್ನಾಟಕದ ಡಿಕೆಶಿ ಸರಕಾರ, ಭೂಮಿ ಕಳೆದು ಕೊಂಡ ರೈತರನ್ನು, ರೈತ-ಕಾರ್ಮಿಕ ಸಂಘಗಳ ಮುಖಂಡರನ್ನು ಬಂಧಿಸಿರುವ ಕ್ರಮ ವಿರೋಧಿಸಿ ಸಿಪಿಐ ಎಂ – ಸಿಐಟಿಯು . ತುಮಕೂರು ಜಿಲ್ಲಾ ಸಮಿತಿಗಳು ಜಂಟಿಯಾಗಿ ದಿನಾಂಕ; ೧೯-೦೯-೨೦೨೬, ರಂದು ಮಧ್ಯನ್ನಾ÷್ಹ ೧ ಗಂಟೆ ಸುಮಾರಿಗೆ ನಗರ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಹೈಕೋರ್ಟಿನ ತೀರ್ಪಿನ ಆಧಾರದಲ್ಲಿ ನೈಸ್ ಭೂಮಿಯನ್ನು ರೈತರಿಗೆ ವಾಪಸ್ ಮಾಡುವುದು ಮತ್ತು ಅಕ್ರಮವಾz Àಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂದು ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದನ್ನು ದಮನ ಮಾಡಲು ರಾಜ್ಯ ಸರ್ಕಾರ ಮುಖಂಡರನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯಅಧ್ಯಕ್ಷರಾದ ಯು.ಬಸವರಾಜ, ಮುಖಂಡರಾದ ಎನ್.ವೆಂಕಟಾಚಲಯ್ಯ, ಶಿವಣ್ಣ, ಚಂದ್ರಣ್ಣ, ಕಾರ್ಮಿಕ ಮುಖಂಡರಾದ ಮಹಾಂತೇಶ್ ಮತ್ತು ಇತರೆ ಕೆಲವರನ್ನು ಬಂಧಿಸಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಹೈಕೋರ್ಟಿನ ಆದೇಶ ಇದೆಯೆಂದು ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರಕಾರ, ನೈಸ್ ವಿರುದ್ದ ನೀಡಿರುವ ತೀರ್ಪನ್ನು ೫೦ ದಿನ ಕಳೆದರೂ ಜಾರಿ ಮಾಡದೆ, ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ. ಕರ್ನಾಟಕದ ಜನತೆ ಇದನ್ನು ವಿರೋಧಿಸಬೇಕಾಗಿದೆ ಎಂದು ಸಿಪಿಐ ಎಂ.- ಸಿಐಟಿಯು ತುಮಕೂರು ಜಿಲ್ಲಾಗಳು ಸಮಿತಿಗಳು ವಿನಂತಿಸಿವೆ.
ಬಂಧಿತರರನ್ನು ಕೂಡಲೆ ಬಿಡುಗಡೆ ಮಾಡಬೇಕು, ಪ್ರತಿಭಟನೆಗೆ ಅವಕಾಶ ನೀಡಬೇಕು ಹಾಗೂ ನೈಸ್ ಕಂಪೆನಿ ವಿರುದ್ದ ಹೈಕೋರ್ಟ್ ತೀರ್ಪಿನ ಅನ್ವಯ ಭೂಮಿಯನ್ನುರೈತರಿಗೆ ವಾಪಾಸು ನೀಡಬೇಕು ಮತ್ತು ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸಬೇಕೆಂದು ಸಿಪಿಐ(ಎಂ)- ಸಿಐಟಿಯು ತುಮಕೂರು ಜಿಲ್ಲಾ ಸಮಿತಿಗಳು ಅಗ್ರಹಿಸಿದೆ.ಹಾಗೆ ರೈತರ ತ್ರೀರ್ವ ವಿರೋಧದ ನಡುವೆಯು ತುಮಕೂರು ನಂದಿಹಳ್ಳಿ- ವಸಂತ ನರಸಪರ ಬೈಪಾಸ್ ರಸ್ತೆ ಕಾಮಗಾರಿಯನ್ನು ನಡೆಸಲು ಹೋರಟಿರುವು ನ್ಯಾಯಸಮ್ಮತವಲ್ಲ , ರೈತರಿಂದ ಒತ್ತಾಯಪೂರಕವಾಗಿ ಭೂಮಿ ಕಿತ್ತುಕೊಳ್ಳುವುದನ್ನು ಒಪ್ಪಲಾಗದು ಎಂದು ,ಇದನ್ನು ಕೈಬಿಡುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ ಎಂ. ಜಿಲ್ಲಾ ಕಾರ್ಯಧರ್ಶಿ, ಎನ್. ಕೆ. ಸುಬ್ರಮಣ್ಯ, ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಬಿ.ಉಮೇಶ್. ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್, ಮಾತನಾಡಿದರು. ಸಿಪಿಐ.ಎಂ ನ ನಗರ ಸಮಿತಿ ಸದಸ್ಯ ಮೇಸ್ತಿç ಶಂಕರಪ್ಪ, ಇಂತಿಯಾಜ್. ಸಿಐಟಿಯು ಮಧುಸೂಧನ್. ಮಂಜುನಾಥ್, ಮತ್ತಿತರರಿದ್ದರು.
(Visited 1 times, 1 visits today)



