ಚಿಕ್ಕನಾಯಕನಹಳ್ಳಿ: ತಿಪಟೂರಿಗೆ ಶೆಟ್ಟಿಕೆರೆ ಮಾರ್ಗವಾಗಿ ೨೪ ಕಿ.ಮೀ ಆಗಲಿದ್ದು ಈ ರಸ್ತೆ ನಮಗೆ ಹತ್ತಿರವಾಗಿದ್ದು ಪ್ರತಿದಿನ ನೂರಾರು ಜನರು ಓಡಾಡುವಂತಹ ಈ ರಸ್ತೆಯನ್ನು ಈಗಾಗಲೇ ಅಬಿವೃದ್ದಿ ಪಡಿಸಲಾಗುತ್ತಿದ್ದು ಇನ್ನು ಹೆಚ್ಚುವರಿಯಾಗಿ ೬ಕೋಟಿ ಅನುದಾನವನ್ನು ನೀಡುವ ಮೂಲಕ ಗೋಪಾಲನಹಳ್ಳಿಯವರೆಗೆ ವಿಸ್ತರಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ಕೇದಿಗೆಹಳ್ಳಿಬಳಿ ತಿಪಟೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯಲ್ಲಿ ೨ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ಸಾರ್ವಜನಿಕರು ಓಡಾಡುವಂತಹ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಸುಮಾರು ಮೂರನಾಲ್ಕು ತಿಂಗಳು ನೀರು ಹರಿಯುತ್ತಿದ್ದು ಇದರಿಂದ ತೊಂದರೆಯಾಗುತ್ತಿದ್ದು ಇದನ್ನರಿತು ೨ ಕೋಟಿ ವೆಚ್ಚದಲ್ಲಿ ಇಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಸು.೮೦ ಅಡಿ ಉದ್ದವಿದ್ದು ೪೦ ಅಡಿ ಅಗಲವಿರುವಂತಹ ಈ ಸೇತುವೆಯನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ ಅವರು ಪಟ್ಟಣದಲ್ಲಿ ಆಗಿದ್ದಾಂಗೆ ಅಪಘಾತಗಳು ನಡೆಯುತ್ತಿದ್ದು ವೇಗಮಿತಿಯಲ್ಲಿ ಕಡಿಮೆ ಮಾಡಲು ಹಾಗೂ ವಾಹನ ಚಲಾವಣೆಯಲ್ಲಿ ಎಚ್ಚರಿಕೆವಹಿಸುವಂತೆ ಚಾಲಕರಿಗೆ ತಿಳಿಸಿದ ಅವರು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಎಇಇ ಯವರೊಂದಿಗೆ ರಸ್ತೆಯನ್ನು ವೀಕ್ಷಿಸಿ ಅಗತ್ಯವಿರುವಂತಹ ಕಡೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಲೋಕೊಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ಮಾತನಾಡಿ ತಾಲ್ಲೂಕಿನ ವಿವಿಧಕಡೆಗಳಲ್ಲಿ ಅಣೆಕಟ್ಟೆ ರಸ್ತೆ, ಅಂಬಾರಪುರ ರಸ್ತೆ ಸೇರಿದಂತೆ ಈ ರಸ್ತೆಗಳಲ್ಲಿ ೮ ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು ಶಾಸಕರು ಅಗತ್ಯವಿರುವಕಡೆಗಳಲ್ಲಿ ಅವರೇ ಖುದ್ದು ಸ್ಥಳ ಪರೀಶಿಲಿಸಿ ಆಗಬೇಕಿರುವಂತಹ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಇನ್ನು ಈ ಸೇತುವೆಯಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಲೋಕೊಪಯೋಗಿ ಇಲಾಖೆಯ ಇಂಜನಿಯರ್ ವಿನೋದ್, ಬಿಇಒ ಕಾಂತರಾಜು, ಸಿಪಿಐ ಜನಾರ್ಧನ್, ಸೇರಿದಂತೆ ಮುಖಂಡರುಗಳಾದ ಪಾಂಡುರoಗಯ್ಯ ಭರತ್, ಮೆಕಾನಿಕ್ ಮನ್ಸೂರ್ ಮತ್ತಿತರರು ಇದ್ದರು.

(Visited 1 times, 1 visits today)